ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ‘ಮಾರ್ಟಿನ್’ಟೀಸರ್ – ಆ್ಯಕ್ಷನ್ ತುಂಬಿದ ಧ್ರುವ ಸರ್ಜಾ ನಟನೆಗೆ ಎಲ್ಲರೂ ಫಿದಾ

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ‘ಮಾರ್ಟಿನ್’ಟೀಸರ್ – ಆ್ಯಕ್ಷನ್ ತುಂಬಿದ ಧ್ರುವ ಸರ್ಜಾ ನಟನೆಗೆ ಎಲ್ಲರೂ ಫಿದಾ

ನ್ಯೂಸ್‌ ಆ್ಯರೋ : ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಮಾರ್ಟಿನ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಅದ್ಭುತ ಪ್ರಶಂಸೆಯನ್ನು ಪಡೆದುಕೊಂಡು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

ಟೀಸರ್ ವೀಕ್ಷಿಸಿದ ಕೆಲವರು, ಟೀಸರ್‌ ಈ ರೇಂಜ್‌ಗಿದೆ ಎಂದರೆ ಇನ್ನು ಟ್ರೇಲರ್‌ ಹಾಗೂ ಸಿನಿಮಾ ಹೇಗಿದ್ಯೋ ಅಂತ ಉದ್ಘರಿಸಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಹವಾ ಸೃಷ್ಟಿ ಮಾಡಿದೆ. ಇದೀಗ ಮತ್ತೆ ಮತ್ತೆ ಸಾಬೀತು ಮಾಡಲು ಸಜ್ಜುಗೊಂಡಿದೆ. ನಮ್ಮ ಕನ್ನಡ ಸಿನಿಮಾಗಳು ಮತ್ತೊಮ್ಮೆ 2023 ರಲ್ಲಿ ಅಬ್ಬರಿಸಲಿವೆ.ಮಾರ್ಟಿನ್ ಒಂದು ಅತ್ಯದ್ಭುತ ಸಿನಿಮಾ ಆಗಲಿದೆ. ನಮ್ಮ ಕನ್ನಡ ಚಿತ್ರರಂಗ ವಿಶ್ವದ ಎಲ್ಲಾ ಚಿತ್ರರಂಗಕ್ಕೂ ವಿಶ್ವಗುರು ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ವೀರೇಶ್‌ ಚಿತ್ರಮಂದಿರದಲ್ಲಿ ಫೆಬ್ರವರಿ 23 ರಂದು ಟೀಸರ್‌ ಪೇಯ್ಡ್‌ ಪ್ರೀಮಿಯರ್‌ ಮಾಡಿದ ನಂತರ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಲಾಗಿದೆ. ಟೀಸರ್‌ ನೋಡಿದ ಸಿನಿಪ್ರಿಯರು ಥ್ರಿಲ್‌ ಆಗಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಎ.ಪಿ ಅರ್ಜುನ್‌ ಹಾಗೂ ಧ್ರುವ ಸರ್ಜಾ ಮತ್ತೆ ಒಂದಾಗಿದ್ದಾರೆ. ‘ಮಾರ್ಟಿನ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆದಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು.

ಇನ್ನೂ ಟೀಸರ್‌ನಲ್ಲಿ ಕಟ್ಟಿದ ಕತೆಯಲ್ಲಿ, ಹೊಡೆದಾಟದ ದೃಶ್ಯಗಳನ್ನು ಒಳಗೊಂಡಿದೆ. ‘ಪೊಗರು’ ಚಿತ್ರದಲ್ಲಿರುವಂತೆ ಈ ಟೀಸರ್‌ನಲ್ಲಿ ಕೂಡಾ ಧ್ರುವ ಸರ್ಜಾ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ಗಳ ಜೊತೆ ಸೆಣಸಾಡಿದ್ಧಾರೆ. ಬಾಂಬ್‌, ಬಂದೂಕು, ಪಾಕಿಸ್ತಾನ ಬಾವುಟ, ಅಲ್ಲಿನ ಜೈಲಿಗೆ ನಾಯಕ ಮಾರ್ಟಿನನ್ನು ಬಿಗಿ ಭದ್ರತೆಯಲ್ಲಿ ಕರೆತರುವ ದೃಶ್ಯ, ಹಿ ಇಸ್‌ ಅನ್‌ ಇಂಡಿಯನ್‌, I Know I am Strong ಡೈಲಾಗ್‌ಗಳು ಈ ಟೀಸರ್‌ನ ಹೈ ಲೈಟ್ಸ್‌ ಆಗಿದೆ.

ವಾಸವಿ ಎಂಟರ್ಪ್ರೈಸಸ್‌ ಬ್ಯಾನರ್‌ ಅಡಿ ಉದಯ್‌ ಕೆ ಮೆಹ್ತಾ ಅವರು ನಿರ್ಮಾಣ ಮಾಡಿದ್ದಾರೆ. ಎ.ಪಿ. ಅರ್ಜುನ್‌ ಆಕ್ಷನ್‌ ಕಟ್‌ ಹೇಳಿದ್ದು, ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ.

ಧ್ರುವ ಸರ್ಜಾಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅನ್ವೇಷಿ ಜೈನ್‌, ಚಿಕ್ಕಣ್ಣ, ಮಾಳವಿಕಾ ಅವಿನಾಶ್‌, ಅಚ್ಯುತ್‌ ಕುಮಾರ್‌, ನಿಕೇತನ್‌ ಧೀರ್‌, ನವಾಬ್‌ ಷಾ, ರೋಹಿತ್‌ ಪಾಠಕ್‌ ಸೇರಿದಂತೆ ದೊಡ್ಡ ತಾರಬಳಗವಿದೆ. ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಇದೇ ವರ್ಷ ತೆರೆ ಕಾಣಲು ಸಜ್ಜಾಗುತ್ತಿದೆ.

ಟೀಸರ್‌ನಿಂದ ಬಂದ ಹಣ ಗೋಶಾಲೆಗೆ:

ಫೆ. 23ರಂದು ಚಿತ್ರದ ಟೀಸರ್‌ ಅನ್ನು ಪೇಯ್ಡ್‌ ಪ್ರಿಮಿಯರ್‌ ಆಗಿ ವಿರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಬಂದ ಹಣವನ್ನು ಗೋಶಾಲೆಗೆ ನೀಡುವುದಾಗಿ ಚಿತ್ರತಂಡ ಹೇಳಿದೆ.

ಪ್ರೇಮ್‌ ನಿರ್ದೇಶನದ ಕೆಡಿಯಲ್ಲಿ ಬ್ಯುಸಿಯಿರುವ ಆ್ಯಕ್ಷನ್ ಪ್ರಿನ್ಸ್:
ಪ್ರೇಮ್‌ ನಿರ್ದೇಶನದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ‘ಕೆಡಿ’ಯಲ್ಲಿ ಧ್ರುವ ನಟಿಸುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾ ನಿರ್ಮಿಸುತ್ತಿದ್ದು ಬಾಲಿವುಡ್‌ ನಟ ಸಂಜಯ್‌ ದತ್‌ ಕೂಡಾ ಇದರಲ್ಲಿ ನಟಿಸಲಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *