ಎಲೆಕ್ಟ್ರಿಕ್ ಬೈಕ್ ಹೊರತರುವಲ್ಲಿ ಹಿಂದುಳಿದ ಡುಕಾಟಿ ಕಂಪನಿ – ಲಾಂಚ್‌ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ ಏನು?

ಎಲೆಕ್ಟ್ರಿಕ್ ಬೈಕ್ ಹೊರತರುವಲ್ಲಿ ಹಿಂದುಳಿದ ಡುಕಾಟಿ ಕಂಪನಿ – ಲಾಂಚ್‌ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ ಏನು?

ನ್ಯೂಸ್‌ ಆ್ಯರೊ: ಅತೀ ಶೀಘ್ರದಲ್ಲಿ ಲಾಂಚ್ ಆಗಲಿದೆ ಎಂದು ಹೇಳಲಾಗಿದ್ದ ಡುಕಾಟಿ ಎಲೆಕ್ಟ್ರಿಕ್ ಬೈಕ್‌ ಮಾರುಕಟ್ಟೆಗೆ ಬರಲು ಇನ್ನಷ್ಟು ತಡವಾಗಲಿದೆ ಎಂದು ಕಂಪನಿ ಸಿಇಒ ಜೇಸನ್ ಚಿನೋಕ್ ವಿವರಿಸಿದ್ದಾರೆ.

ಪರಿಸರ ಸ್ನೇಹಿ ವಾಹನಗಳ ಕಡೆ ಜಗತ್ತು ಮುಖಮಾಡಿದ್ದು, ಇದೀಗ ಎಲೆಕ್ಟ್ರಿಕ್ ವಾಹನ ಭಾರೀ ಬೇಡಿಕೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಪ್ರಸಿದ್ಧ ಆಟೋಮೊಬೈಲ್ ಕಂಪನಿಗಳು ಇವಿ ಬೈಕ್, ಕಾರುಗಳನ್ನ ಬಿಡುಗಡೆ ಮಾಡ್ತಿವೆ. ಆದರೆ ಡುಕಾಟಿ ಈ ವಿಭಾಗದಲ್ಲಿ ಹಿಂದುಳಿದಿದೆ.

ಡುಕಾಟಿಯು ಕಳೆದ ಕೆಲವು ವರ್ಷಗಳಿಂದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಪ್ರಯೋಗಿಸುತ್ತಿದೆ. ಆದರೆ, ಡುಕಾಟಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ ಎಂದು ಕಂಪನಿಯ ಸಿಇಒ ಜೇಸನ್ ಚಿನೋಕ್ ಹೇಳಿದ್ದಾರೆ. ಬ್ಯಾಟರಿ ಶ್ರೇಣಿಯ ಜೊತೆಗೆ, ಇತರ ಹಲವು ಸಮಸ್ಯೆಗಳು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಈಗಾಗಲೇ ಹೋಂಡಾ ಮೊಟಾರ್ ಕಾರ್ಪ್‌ ಮತ್ತು ಬಿಎಂಡ್ಲ್ಯೂ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್‌ ಬೈಕ್ ಗಳನ್ನು ಬಿಡುಗಡೆ ಮಾಡಿವೆ. ಈ ಹಿನ್ನೆಲೆಯಲ್ಲಿ ಡುಕಾಟಿ ಇವಿ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಅಪಾಯದಲ್ಲಿ ಇದೆಯೇ ಎಂಬ ಪ್ರಶ್ನೆಗಳು ಶುರು ಆಗಿವೆ.

ಫೋಕ್ಸ್‌ವ್ಯಾಗನ್‌ನ ಪ್ರೀಮಿಯಂ ವಿಭಾಗದ ಗ್ರೂಪ್ ನ ಅಡಿಯಲ್ಲಿ ಡುಕಾಟಿ ನಾಲ್ಕು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಡುಕಾಟಿ ಪರ್ಯಾಯ ಇಂಧನ ಮತ್ತು ಇತರ ತಂತ್ರಜ್ಞಾನಗಳ ಕುರಿತು ಸಂಶೋಧನೆ ನಡೆಸುತ್ತಿದೆ.

ಈ ಸಂಬಂಧ ಸ್ಪಷ್ಟನೆ ನೀಡಿದ ಜೇಸನ್, ನಾವು ತರಾತುರಿಯಲ್ಲಿ ಡುಕಾವಿ ಇವಿ ಬೈಕ್ ಇವಿ ಬೈಕ್ ಮಾರುಕಟ್ಟೆಗೆ ತರಲು ಬಯಸುವುದಿಲ್ಲ. ಬ್ಯಾಟರಿ ತಂತ್ರಜ್ಞಾನ ಅಭಿವೃದ್ಧಿಯಾಗಬೇಕಿದೆ. ಅದರ ನಂತರ ಅದರ ರೂಪ, ವ್ಯಾಪ್ತಿ, ತೂಕವನ್ನು ಪರೀಕ್ಷಿಸಬೇಕು. ಎಲ್ಲ ಸರಿಹೋದರೆ ಮಾತ್ರ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *