ಆನಂದ್ ಆಡಿಯೋ ಪಾಲಾಗಿದೆ ‘ಹೊಯ್ಸಳ’ ಚಿತ್ರದ ಆಡಿಯೋ ಹಕ್ಕು – ಡಾಲಿ ಧನಂಜಯ್ ಚಿತ್ರದ ಆಡಿಯೋ ರೈಟ್ಸ್ ಸೇಲಾಗಿದ್ದು ಎಷ್ಟು ಮೊತ್ತಕ್ಕೆ ಗೊತ್ತಾ?

ಆನಂದ್ ಆಡಿಯೋ ಪಾಲಾಗಿದೆ ‘ಹೊಯ್ಸಳ’ ಚಿತ್ರದ ಆಡಿಯೋ ಹಕ್ಕು – ಡಾಲಿ ಧನಂಜಯ್ ಚಿತ್ರದ ಆಡಿಯೋ ರೈಟ್ಸ್ ಸೇಲಾಗಿದ್ದು ಎಷ್ಟು ಮೊತ್ತಕ್ಕೆ ಗೊತ್ತಾ?

ನ್ಯೂಸ್ ಆ್ಯರೋ : ಹಿಂದೆಲ್ಲಾ ಸಿನಿಮಾದ ಗಳಿಕೆ‌ ಅನ್ನುವುದು ಕೇವಲ ಬಿಡುಗಡೆಯ ನಂತರದ ವಿಚಾರವಾಗಿತ್ತು. ಆದರೆ ಈಗ ಹಾಗಲ್ಲ ಒಂದು ಸಿನಿಮಾ ತಯಾಗುತ್ತಿದೆ ಎಂದರೆ, ಅಲ್ಲಿ ಆಡಿಯೋ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಡಬ್ಬಿಂಗ್, ಹೀಗೆ ಹಲವಾರು ವಿಧದಲ್ಲಿ ಚಿತ್ರ ತಂಡ ಹೂಡಿದ ಹಣವನ್ನು ಗಳಿಸುತ್ತದೆ. ಇದೀಗ, ಡಾಲಿ ದನಂಜಯ್ ಅವರ ‘ಹೊಯ್ಸಳ’ ಚಿತ್ರದ ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿ ಸುದ್ದಿಯಲ್ಲಿದೆ.

ಸದ್ಯ, ಚಿತ್ರೀಕರಣ ಮುಗಿಸಿರುವ ‘ಹೊಯ್ಸಳ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ಸಿನಿಮಾದ ಬಿಡುಗಡೆ ದಿನಾಂಕವೂ ಹತ್ತಿರವಾಗುತ್ತಿದ್ದು, ಪ್ರಚಾರ ಕೆಲಸಗಳೂ ಆರಂಭವಾಗಿದೆ. ಇದರ‌ ಮುಂದುವರೆದ ಭಾಗವಾಗಿ ಇದೀಗ, ಚಿತ್ರತಂಡ ಆಡಿಯೋ ಬಿಡುಗಡೆ ಮಾಡುವ ಹೊಸ್ತಿಲಲ್ಲಿದೆ‌. ಈ ಚಿತ್ರದ‌ ಆಡಿಯೋ‌‌ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ.

ಡಾಲಿ‌ ಧನಂಜಯ್ ಅವರ 25 ನೇ ಸಿನಿಮಾವಾಗಿರುವ ‘ಹೊಯ್ಸಳ’ ಇದೇ ಮಾ.30 ರಂದು ಬಿಡುಗಡೆಯಾಗಲಿದೆ. ಅದ್ದೂರಿಯಾಗಿ ಚಿತ್ರವನ್ನು ತೆರೆಗೆ ತರಲು ಡಾಲಿ ಮತ್ತು ತಂಡ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಕೆ. ಆರ್.ಜಿ‌ ಸ್ಟೂಡಿಯೋ ‘ಹೊಯ್ಸಳ’ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದೆ‌.

‘ಹೊಯ್ಸಳ’ ಆಡಿಯೋ ಹಕ್ಕಿನಿಂದ ಗಳಿಸಿದ್ದೆಷ್ಟು?

ಇತ್ತೀಚೆಗೆ ‘ಹೊಯ್ಸಳ’ ಚಿತ್ರದ‌ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಧನಂಜಯ್ ಸಿನಿ‌ ಪಯಣದ 25ನೇ ಚಿತ್ರವಾದ ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಭಾರೀ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗುತ್ತಿದೆ. ಧನಂಜಯ್ ಸಿನಿ‌ ಕೆರಿಯರ್ ನಲ್ಲೇ‌ ‘ಹೊಯ್ಸಳ’ ಚಿತ್ರದ ಆಡಿಯೋ ಹಕ್ಕು ದುಬಾರಿ ಮೊತ್ತಕ್ಕೆ ಬಿಕರಿಯಾಗಿದೆ ಎನ್ನಲಾಗಿದೆ.

‘ಹೊಯ್ಸಳ’ ಚಿತ್ರತಂಡ ಸದ್ಯ, ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಮಾ. 30ರಂದು ತೆರೆಗಪ್ಪಳಿಸಲಿದೆ. ಸಿನಿಮಾದಲ್ಲಿ‌ ಡಾಲಿ‌‌ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಲಿದ್ದು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಡುವ ಅಧಿಕಾರಿಯ ಪಾತ್ರ‌ ಇದಾಗಿದೆ‌. ಬೆಳಗಾವಿಯ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆಸಲಾಗಿದೆಯಂತೆ.

ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ

‘ಹೊಯ್ಸಳ’ ಚಿತ್ರದಲ್ಲಿ ದೊಡ್ಡ ಮತ್ತು ಅನುಭವಿ ತಾರಾ ಬಳಗವಿದೆ. ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ನಟಿಸಿದ್ದಾರೆ. ಇನ್ನುಳಿದಂತೆ, ನವೀನ್ ಶಂಕರ್, ಅವಿನಾಶ್ ಬಿ.ಎಸ್, ಮಯೂರಿ‌ ನಟರಾಜ್ ಹಾಗೂ ಪ್ರತಾಪ್‌ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

‘ಹೊಯ್ಸಳ’ ಸಿ‌ನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, . ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಖ್ಯಾತಿಯ ವಿಜಯ್ ಕಿರಗಂದೂರು ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಕನ್ನಡದ ಬಹುನಿರೀಕ್ಷಿತ ಸಿನಿಮಾವಾಗಲಿದ್ದು, ಡಾಲಿ ಅಭಿಮಾನಿಗಳು‌ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *