ರಾತ್ರಿ ಹೊತ್ತಲ್ಲಿ ಹೀರೋಗಳ ರೂಮಿಗೆ ಹೋಗುವಂತೆ ನನಗೂ ಒತ್ತಾಯ ಬಂದಿತ್ತು – ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ ಕಂಗನಾ ಟ್ವೀಟ್‌

ರಾತ್ರಿ ಹೊತ್ತಲ್ಲಿ ಹೀರೋಗಳ ರೂಮಿಗೆ ಹೋಗುವಂತೆ ನನಗೂ ಒತ್ತಾಯ ಬಂದಿತ್ತು – ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ ಕಂಗನಾ ಟ್ವೀಟ್‌

ನ್ಯೂಸ್ ಆ್ಯರೋ‌ : ಆಗಾಗ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಾ ಸುದ್ದಿಯಾಗುತ್ತಿರುವ ನಟಿ ಕಂಗನಾ ರಾಣಾವತ್ ಇದೀಗ ಬಾಲಿವುಡ್ ಮಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್‌ ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಬಾಲಿವುಡ್ ಹೀರೊಗಳ ಬಗ್ಗೆ ಗಂಭೀರ ಆರೋಪ ಮಾಡಿರುವ ಕಂಗನಾ, ‘ಬಾಲಿವುಡ್‌ನ ಹೀರೊಗಳ ರೂಮಿಗೆ ಹೋಗುವಂತೆ ನನ್ನನ್ನು ಹಲವು ಬಾರಿ ಒತ್ತಾಯ ಮಾಡಲಾಗಿತ್ತು. ಅದನ್ನು ತಿರಸ್ಕರಿಸಿದಾಗ, ನನ್ನನ್ನು ಹುಚ್ಚಿ ಎಂದು ಕರೆದು ಬಿಟ್ಟರು’ ಎಂದು ಬಾಲಿವುಡ್ ಕ್ವೀನ್ ಕಂಗನಾ ಆರೋಪ ಮಾಡಿದ್ದಾರೆ.

‘ಬಾಲಿವುಡ್ ಗ್ಯಾಂಗ್ ನನ್ನ ವರ್ತನೆಯನ್ನು ಅಹಂಕಾರವೆಂದು ಕರೆಯಿತು. ಯಾಕಂದರೆ, ನಾನು ಬೇರೆ ಹುಡುಗಿಯರ ಹಾಗೆ ಮುಗುಳುನಗೆ ಬೀರಲಿಲ್ಲ, ಐಟಂ ಸಾಂಗ್ ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನನ್ನನ್ನು ಹುಚ್ಚಿ ಎಂದು ಕರೆದರು. ಈ ವರ್ತನೆಯ ವಿರುದ್ಧ ನನ್ನನ್ನು ಜೈಲಿಗೆ ಕಳಿಸುತ್ತಾರೆಯೇ? ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು, ನನ್ನನ್ನು ಸುಧಾರಣೆ ಮಾಡುವುದಕ್ಕೆ ಬರುತ್ತಿದ್ದಾರೆ.

ವಿಷಯ ಏನಂದರೆ, ನನಗೋಸ್ಕರ ಏನೂ ಬೇಡ. ನಾನು ನನ್ನದೆಲ್ಲ ಆಸ್ತಿಯನ್ನು ಅಡವಿಟ್ಟು ಒಂದು ಸಿನಿಮಾ ಮಾಡಿದ್ದೇನೆ. ರಾಕ್ಷಸರ ನಿರ್ನಾಮ ಆಗುತ್ತೆ. ತಲೆಗಳು ಉರುಳುತ್ತವೆ. ಯಾರೂ ನನ್ನನ್ನು ದೂಷಿಸಬೇಡಿ’ ಎಂದು ಕಂಗನಾ ಟ್ವೀಟ್ ಮಾಡಿದ್ದು, ಭಾರೀ ಸಂಚಲನ ಮೂಡಿಸಿದೆ.

ಈ ಟ್ವೀಟ್ ಮಾಡುತ್ತಿದ್ದಂತೆ ಹಲವರು ಕಂಗನಾ ವಿರುದ್ಧ ಮುಗಿಬಿದ್ದಿದ್ದಾರೆ. ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವುದನ್ನು ನಿಲ್ಲಿಸುವಂತೆ ಕಮೆಂಟ್ ಮಾಡಿದ್ದಾರೆ. ಒಬ್ಬರಂತೂ ‘ಏ ಆಂಟಿ ನಿನ್ನ ಸಿನಿಮಾ ರಿಲೀಸ್ ಆಗುವಾಗ ಇಂತಹ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವುದನ್ನು ಮೊದಲು ನಿಲ್ಲಿಸು. ಇದು ಹಳೆಯ ಟ್ರಿಕ್. ಯಾವುದಾದರೂ ಹೊಸ ಟ್ರಿಕ್ ಇದ್ದರೆ ಉಪಯೋಗಿಸಿ, ಪ್ರಚಾರದ ತಂತ್ರವನ್ನು ಬಳಸಿ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಂಗನಾ ಅವರು ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತರ ವಿರುದ್ಧ ಕಂಗನಾ ಅಸಮಾಧಾನ ವ್ಯಕ್ತಪಡಿಸಿ, ತನ್ನದೇ ಲಿಸ್ಟ್ ಬಿಡುಗಡೆ ಮಾಡಿ ಸುದ್ದಿಯಾಗಿದ್ದರು.

ಕಂಗನಾ ಆಗಾಗ ಬಾಲಿವುಡ್ ಸೆಲೆಬ್ರೆಟಿಗಳ ವರ್ತನೆ ವಿರುದ್ಧ ಟೀಕೆ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಹಲವು ಮಂದಿಯ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಮತ್ತೆ ಕೆಲವು ಕಂಗನಾಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲವನ್ನೂ ಸೂಚಿಸಿದ್ದಾರೆ. ಕಂಗನಾ ಅವರ ಫೇವರಿಟ್ ಟಾರ್ಗೆಟ್ ಕರಣ್ ಜೋಹರ್. ಈಕೆಯ ಪ್ರಕಾರ, ನೆಪೊಟಿಸಂಗೆ ಪ್ರಮುಖ ಕಾರಣ ಕರಣ್ ಜೋಹರ್ ಎಂದು ನೇರವಾಗಿ ಆರೋಪಿಸಿದ್ದರು. ಅಲ್ಲಿಂದ ಕಂಗನಾ ರಾಣಾವತ್ ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್ ಅನ್ನು ‘ಬಾಲಿವುಡ್ ಮಾಫಿಯಾ’ ಎಂದು ಟೀಕಿಸಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *