ಗೆಳತಿ ಮಿಥಾಲಿಯನ್ನು ವರಿಸಿದ ಶಾರ್ದೂಲ್‌ ಠಾಕೂರ್‌: ಹೈಸ್ಕೂಲ್‌ ಲವ್‌ಸ್ಟೋರಿಗೆ ಮದುವೆಯ ಮುದ್ರೆ

ಗೆಳತಿ ಮಿಥಾಲಿಯನ್ನು ವರಿಸಿದ ಶಾರ್ದೂಲ್‌ ಠಾಕೂರ್‌: ಹೈಸ್ಕೂಲ್‌ ಲವ್‌ಸ್ಟೋರಿಗೆ ಮದುವೆಯ ಮುದ್ರೆ

ನ್ಯೂಸ್ಆ್ಯರೋ: ಟೀಂ ಇಂಡಿಯಾದಲ್ಲಿ ಇದೀಗ ಮದುವೆ ಪರ್ವ ನಡೆಯುತ್ತಿದೆ. ಈಚೆಗೆ ಕೆಎಲ್​ ರಾಹುಲ್ ಹಾಗೂ ಅತೀಯಾ ಶೆಟ್ಟಿ ವಿವಾಹ ಆಗಿದ್ದರು. ಅವರ ಬೆನ್ನಲ್ಲೇ ಅಕ್ಸರ್ ಪಟೇಲ್ ಅವರು ಮೇಹಾ ಜೊತೆ ಸಪ್ತಪದಿ ತುಳಿದಿದ್ದು, ಇದರ ಬೆನ್ನಲ್ಲೇ ಶಾರ್ದುಲ್ ಠಾಕೂರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಟೀಂ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಶಾರ್ದುಲ್ ಠಾಕೂರ್​ ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪಾರುಲ್ಕರ್ ಅವರನ್ನು ವರಿಸುವ ಮೂಲಕ, ತಮ್ಮ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ.
ಮುಂಬೈನಲ್ಲಿ ಶಾಸ್ತ್ರೋಕ್ತವಾಗಿ ಈ ಜೋಡಿ ಸಪ್ತಪದಿ ತುಳಿದಿದ್ದು, ಇದೀಗ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

31 ವರ್ಷದ ಶಾರ್ದೂಲ್, 2021 ನವೆಂಬರ್​ನಲ್ಲಿ ಮಿಥಾಲಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ವಿವಾಹ ಆಗಿದ್ದು, ಮದುವೆಯ ದೃಶ್ಯಗಳು ಹಾಗೂ ಹಳದಿ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಶಾರ್ದೂಲ್​ ಕೈಹಿಡಿದ ಮಿಥಾಲಿ ಪಾರುಲ್ಕರ್ ಅವರು ಶಾರ್ದೂಲ್ ಅವರ ಬಾಲ್ಯದ ಗೆಳತಿಯಾಗಿದ್ದಾರೆ. ವೃತ್ತಿಯಲ್ಲಿ ಐಷಾರಾಮಿ ಬೇಕರಿ ನಡೆಸುತ್ತಿದ್ದಾರೆ. ಕೇಕ್​ ಮತ್ತು ಪೇಸ್ಟ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 2020ರಲ್ಲಿ ಮಿಥಾಲಿ ಬೇಕರಿ ಪ್ರಾರಂಭಿಸಿದರು. ಅದರ ಮೂಲಕ ಯಶಸ್ವಿಯಾಗುವ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ.

ಇನ್ನು ಮಿಥಾಲಿ 1992ರಲ್ಲಿ ಮುಂಬೈನಲ್ಲಿ ಜನಿಸಿದರು. ಶಾರ್ದೂಲ್​ ಮತ್ತು ಮಿಥಾಲಿ ಒಂದೇ ಪ್ರಾಯದವರಾಗಿದ್ದಾರೆ. ಈಕೆ ಪ್ರಾಣಿ ಪ್ರಿಯೇ ಕೂಡ ಹೌದು.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *