ರೋಚಕ ವೆಲ್ಲಿಂಗ್ಟನ್ ಟೆಸ್ಟ್ ನಲ್ಲಿ ಒಂದು ರನ್ ನಿಂದ ಗೆದ್ದ ನ್ಯೂಜಿಲೆಂಡ್ – ಫಾಲೋ ಆನ್ ಹೇರಿಯೂ ಟೆಸ್ಟ್ ಪಂದ್ಯ ಸೋತ ಇಂಗ್ಲೆಂಡ್..!!

ರೋಚಕ ವೆಲ್ಲಿಂಗ್ಟನ್ ಟೆಸ್ಟ್ ನಲ್ಲಿ ಒಂದು ರನ್ ನಿಂದ ಗೆದ್ದ ನ್ಯೂಜಿಲೆಂಡ್ – ಫಾಲೋ ಆನ್ ಹೇರಿಯೂ ಟೆಸ್ಟ್ ಪಂದ್ಯ ಸೋತ ಇಂಗ್ಲೆಂಡ್..!!

ನ್ಯೂಸ್ ಆ್ಯರೋ : ಫಾಲೋ ಆನ್ ಹೇರಿದ್ದ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಮೇಲಗೈ ಹೊಂದಿದ್ದ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಅದ್ಭುತ ಕಮ್ ಬ್ಯಾಕ್ ಮಾಡಿದ ನ್ಯೂಜಿಲ್ಯಾಂಡ್ ತಂಡವು ಒಂದು ರನ್ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದು, ಟೆಸ್ಟ್ ಕ್ರಿಕೆಟ್ ಕೂಡ ರೋಚಕತೆಯನ್ನು ತೋರಿಸಬಹುದು ಎಂಬುದನ್ನು ಮತ್ತೆ ಸಾಬೀತು ಮಾಡಿದೆ.

ಐದನೇ ದಿನದಾಟದಲ್ಲಿ ಗೆಲುವಿಗೆ 258 ರನ್‌ ಪಡೆದಿದ್ದ ಬೆನ್ ಸ್ಟೋಕ್ಸ್‌ ಬಳಗ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 48 ರನ್‌ ಮಾಡಿ ಗೆಲುವಿನ‌ ಆಸೆ ಹೊಂದಿತ್ತು. ಅಲ್ಲದೇ ಇಡೀ ದಿನದ 90 ಓವರ್ ಗಳಿಂದ ಕೇವಲ 210 ರನ್ ಗಳ ಸುಲಭ ಗುರಿ ಹೊಂದಿದ್ದ ಇಂಗ್ಲೆಂಡ್ ರೋಚಕ ಹಣಾಹಣಿಯಲ್ಲಿ ಸೋತು ನಿರಾಸೆ ಅನುಭವಿಸಿತು.

ಇಂಗ್ಲೆಂಡ್ ಪರ ಜೋ ರೂಟ್ 95 ರನ್ ಗಳಿಸಿ ತಂಡವನ್ನು ಆಧರಿಸಿದರೆ, ವಿಕೆಟ್ ಕೀಪರ್ ಬೆನ್ ಫೋಕ್ಸ್ 35 ರನ್ ಮತ್ತು ನಾಯಕ ಬೆನ್ ಸ್ಟೋಕ್ಸ್ 33 ರನ್ ಮಾಡಿದರು. ಫಾರ್ಮ್ ನಲ್ಲಿದ್ದ ಬ್ರೂಕ್ಸ್ ರನೌಟ್ ಆಗಿದ್ದು ಇಂಗ್ಲೆಂಡ್ ಪಾಲಿಗೆ ಸೋಲಿಗೆ ಮುನ್ನುಡಿ ಬರೆಯಿತು ಎಂದೇ ಹೇಳಬಹುದು.

ಕೊನೆಯ ವಿಕೆಟ್ ಗೆ ಇಂಗ್ಲೆಂಡ್ ಗೆ ಏಳು ರನ್ ಮಾಡಬೇಕಾದ ಅನಿವಾರ್ಯತೆಯಿತ್ತು. ಅಲ್ಲದೇ ಜೇಮ್ಸ್ ಆ್ಯಂಡರ್ಸನ್ ಲಾಂಗ್ ಆನ್ ಕಡೆಗೆ ಬೌಂಡರಿ ಬಾರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಲೆಗ್ ಸೈಡ್ ನತ್ತ ಚಲಿಸುತ್ತಿದ್ದ ನೀಲ್ ವ್ಯಾಗ್ನರ್ ಎಸೆತವನ್ನು ಕೆಣಕಿದ ಆಯಂಡರ್ಸನ್ ಕೀಪರ್ ಬ್ಲಂಡಲ್ ಗೆ ಕ್ಯಾಚ್ ನೀಡುವುದರೊಂದಿಗೆ ನ್ಯೂಜಿಲೆಂಡ್ ರೋಚಕ‌ ಗೆಲುವು ಪಡೆಯಿತು‌.

ಈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 435/8 ಸ್ಕೋರ್‌ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 209 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ನಂತರ ಇಂಗ್ಲೆಂಡ್ ನ್ಯೂಜಿಲೆಂಡ್‌ಗೆ ಫಾಲೋ ಆನ್ ನೀಡಿತ್ತು.

ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಎರಡನೇ ಇನ್ನಿಂಗ್ಸ್‌ನಲ್ಲಿ 132 ರನ್ ಗಳಿಸಿದರೆ, ಟಾಮ್ ಬ್ಲಂಡೆಲ್ 90 ರನ್ ಗಳಿಸಿದರು. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 483 ರನ್ ಗಳಿಸಿತು. ಅಂದರೆ, ಆತಿಥೇಯ ತಂಡ ಇಂಗ್ಲೆಂಡ್ ನ 226 ರನ್ ಗಳ ಮುನ್ನಡೆ ಸಾಧಿಸಿದೆ. ಅದೂ ಅಲ್ಲದೆ 258 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಪ್ರವಾಸಿ ತಂಡ ಕೇವಲ 256 ರನ್ ಗಳಿಸಲಷ್ಟೇ ಶಕ್ತವಾಯಿತು.

ನೀಲ್ ವ್ಯಾಗ್ನರ್ ನ್ಯೂಜಿಲೆಂಡ್ ಗೆಲುವಿನ ಹೀರೋ ಆದರು. ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. ಇವರಲ್ಲದೆ ನಾಯಕ ಟಿಮ್ ಸೌಥಿ 3 ವಿಕೆಟ್ ಪಡೆದರು. ಮ್ಯಾಟ್ ಹೆನ್ರಿ ಕೂಡ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಟಿಮ್ ಸೌಥಿ ನಾಯಕತ್ವದಲ್ಲಿ ನ್ಯೂಜಿಲೆಂಡ್‌ನ ಮೊದಲ ಗೆಲುವು ಇದಾಗಿದೆ.

ಟೆಸ್ಟ್ ಇತಿಹಾಸದಲ್ಲಿ ಒಂದು ರನ್ ಅಂತರದ ಗೆಲುವು ದಾಖಲಾದ ಎರಡನೇ ನಿದರ್ಶನ ಇದಾಗಿದ್ದು, ಫಾಲೋ ಆನ್ ಪಡೆದ ತಂಡ ಜಯ ಸಾಧಿಸಿದ ನಾಲ್ಕನೇ ನಿದರ್ಶನ ಇದಾಗಿದೆ. 2001ರ ಲಕ್ಷ್ಮಣ್ ದ್ರಾವಿಡ್ ಆರ್ಭಟ, ಹರ್ಭಜನ್ ಸಿಂಗ್ ಸ್ಪಿನ್ ಮೋಡಿಯ ಫೇಮಸ್ ಕೋಲ್ಕತ್ತಾ ಪಂದ್ಯದ ಬಳಿಕ ನಡೆದ ಮೊದಲ ಪ್ರಸಂಗ ಇದಾಗಿದ್ದು, ಟೆಸ್ಟ್ ಕ್ರಿಕೆಟ್ ಕೂಡ ರೋಚಕತೆ ನೀಡಬಹುದು ಎಂಬ ಮಾತಿಗೆ ಮತ್ತೆ ಪುಷ್ಟಿ ಸಿಕ್ಕಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *