ಚಿತ್ರಮಂದಿರದಲ್ಲಿ ಮಕಾಡೆ ಮಲಗಿದ್ದ ಚಿತ್ರ ಯೂಟ್ಯೂಬ್‌ನಲ್ಲಿ ನಂಬರ್‌ 1 – ₹8 ಕೋಟಿ ಲಾಸ್ ಆಗಿ ಟ್ರೋಲ್ ಆಗಿದ್ದ ‘ಜಯ–ಜಾನಕಿ’ಗೆ ಸಿಕ್ಕ ವ್ಯೂಸ್ ಎಷ್ಟು ಗೊತ್ತಾ…!?

ಚಿತ್ರಮಂದಿರದಲ್ಲಿ ಮಕಾಡೆ ಮಲಗಿದ್ದ ಚಿತ್ರ ಯೂಟ್ಯೂಬ್‌ನಲ್ಲಿ ನಂಬರ್‌ 1 – ₹8 ಕೋಟಿ ಲಾಸ್ ಆಗಿ ಟ್ರೋಲ್ ಆಗಿದ್ದ ‘ಜಯ–ಜಾನಕಿ’ಗೆ ಸಿಕ್ಕ ವ್ಯೂಸ್ ಎಷ್ಟು ಗೊತ್ತಾ…!?

ನ್ಯೂಸ್‌ಆ್ಯರೋ : ಹಿಂದೆ ಸೌತ್ ಇಂಡಿಯನ್ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತಿತ್ತು. ವಿಶೇಷವೆಂದರೆ ಮೂಲ ಭಾಷೆಗಳಿಗಿಂತ ಹೆಚ್ಚು ವ್ಯೂಸ್ ಈ ಡಬ್ಬಿಂಗ್ ವರ್ಷನ್‌ಗಳಿಗೆ ಬರುತ್ತಿದ್ದವು. ಅದರಲ್ಲಿಯೂ ತೆಲುಗಿನ ಫ್ಲಾಪ್ ಚಿತ್ರಗಳ ಹಿಂದಿ ಡಬ್ ವರ್ಷನ್‌ಗೆ ಹೆಚ್ಚು ವೀಕ್ಷಣೆ ಬರುತ್ತಿದ್ದವು.

ಇಂತಹ ಬೆಳವಣಿಗೆಯಿಂದ ತೆಲುಗು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಟ್ರೋಲ್ ಸಹ ಮಾಡುತ್ತಿದ್ದರು. ನಾವು ಡಬ್ಬಾ ಚಿತ್ರ ಎಂದು ಕಡೆಗಣಿಸಿದ ಸಿನಿಮಾಗಳನ್ನು ಇವರು ಇಷ್ಟರ ಮಟ್ಟಕ್ಕೆ ಮೆಚ್ಚಿಕೊಳ್ಳುತ್ತಿದ್ದಾರಲ್ಲ ಎಂದು ಗೇಲಿ ಮಾಡಿ ಹಿಂದಿ ವೀಕ್ಷಕರ ಕಾಲನ್ನು ಎಳೆಯುವವರ ಸಂಖ್ಯೆ ಕಡಿಮೆ ಇರಲಿಲ್ಲ.

ಇದೇ ರೀತಿ ಟ್ರೋಲ್‌ ಆದ ಚಿತ್ರವೊಂದು ಯೂಟ್ಯೂಬ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2017ರಲ್ಲಿ ನಿರ್ದೇಶಕ ಭೋಯಾಪತಿ ಶೀನು ‘ಜಯ ಜಾನಕಿ ನಾಯಕ’ ಎಂಬ ಸಿನಮಾವನ್ನು ನಿರ್ದೇಶಿಸಿದ್ದರು. ಬೆಲ್ಲಂಕೊಂಡ ಶ್ರೀನಿವಾಸ್ ನಾಯಕನಾಗಿ ಹಾಗೂ ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರ ಚಿತ್ರಮಂದಿರಗಳಲ್ಲಿ ಫ್ಲಾಪ್ ಆಗಿತ್ತು.

ಬಿಡುಗಡೆಗೂ ಮುನ್ನ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಹೀನಾಯವಾಗಿ ಸೋತು ಮಕಾಡೆ ಮಲಗಿತ್ತು. ಸುಮಾರು ₹ 42 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರದ ವಿತರಣೆ ಹಕ್ಕನ್ನು ವಿತರಕರು ₹ 30 ಕೋಟಿಗೆ ಖರೀದಿಸಿದ್ದರು. ಆದರೆ, ಚಿತ್ರ ಅಂತಿಮವಾಗಿ ವಿಶ್ವದಾದ್ಯಂತ ₹ 21.73 ಕೋಟಿ ಮಾತ್ರ ಗಳಿಕೆ ಮಾಡಿತ್ತು. ಈ ಮೂಲಕ ಈ ಚಿತ್ರ ₹ 8.27 ಕೋಟಿ ನಷ್ಟವನ್ನು ಅನುಭವಿಸಿತ್ತು. ಹೀಗೆ ಬೃಹತ್ ನಷ್ಟ ಅನುಭವಿಸಿದ್ದ ‘ಜಯ ಜಾನಕಿ ನಾಯಕ’ ಈಗ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಸಿನಿಮಾ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಜಯ ಜಾನಕಿ ನಾಯಕ 700 ಮಿಲಿಯನ್ ವೀಕ್ಷಣೆಗಳನ್ನು ಪೂರೈಸಿ, ಈ ದಾಖಲೆಯನ್ನು ನಿರ್ಮಿಸಿದೆ. ಚಿತ್ರ ಈ ದಾಖಲೆಯನ್ನು ನಿರ್ಮಿಸಿರುವುದನ್ನೂ ಸಹ ತೆಲುಗು ಟ್ರೋಲ್ ಪೇಜ್‌ಗಳು ಟ್ರೋಲ್ ಮಾಡುತ್ತಿವೆ. ಇಂತಹ ಕೆಟ್ಟ ಚಿತ್ರಕ್ಕೆ 70 ಕೋಟಿ ವೀಕ್ಷಣೆ ಬಂದಿದೆಯಲ್ಲಾ ಎಂದು ನಗತೊಡಗಿದ್ದಾರೆ. ಕೇವಲ ಈ ಚಿತ್ರ ಮಾತ್ರವಲ್ಲದೇ ತೆಲುಗಿನ ಮತ್ತೊಂದು ರುಟೀನ್ ಚಿತ್ರ ‘ನೇನು ಶೈಲಜಾ’ ಹಿಂದಿ ವರ್ಷನ್ ಸಹ 500 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ಸೌತ್‌ನಲ್ಲಿ ಹೀನಾಯವಾಗಿ ಟ್ರೋಲ್ ಆದ ಚಿತ್ರಗಳ ಹಿಂದಿ ವರ್ಷನ್‌ಗಳು ಹಿಂದಿಯಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿವೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *