ಭಾರತದ ಮೂರು ಚಿತ್ರಗಳು ಆಸ್ಕರ್‌ಗೆ ನಾಮಿನೇಟ್‌: ದೇಶದಲ್ಲಿ ಎಷ್ಟೊತ್ತಿಗೆ, ಯಾವುದರಲ್ಲಿ ಆಸ್ಕರ್ ಆವಾರ್ಡ್‌ ಸಮಾರಂಭ ನೋಡಬಹದು ಗೊತ್ತಾ…

ಭಾರತದ ಮೂರು ಚಿತ್ರಗಳು ಆಸ್ಕರ್‌ಗೆ ನಾಮಿನೇಟ್‌: ದೇಶದಲ್ಲಿ ಎಷ್ಟೊತ್ತಿಗೆ, ಯಾವುದರಲ್ಲಿ ಆಸ್ಕರ್ ಆವಾರ್ಡ್‌ ಸಮಾರಂಭ ನೋಡಬಹದು ಗೊತ್ತಾ…

ನ್ಯೂಸ್‌ ಆ್ಯರೋ : ಭಾರತದ ಮೂರು ಚಿತ್ರಗಳು ಆಸ್ಕರ್‌ಗೆ ನಾಮಿನೇಟ್‌ ಆಗುವ ಮೂಲಕ ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ಭಾರತೀಯರಿಗೆ ವಿಶೇಷವೇನಿಸಿದೆ. 95ನೇ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಮೆರಿಕಾದ ಲಾಸ್‌ಏಂಜಲಸ್‌ನಲ್ಲಿ ಈ ಕಲರ್‌ಫುಲ್‌ ಸಮಾರಂಭಕ್ಕೆ ಬೃಹತ್‌ ವೇದಿಕೆ ಸಿದ್ಧವಾಗಿದೆ.

ಈ ಬಾರಿಯ ಆಸ್ಕರ್ ಭಾರತೀಯರಿಗೆ ತುಂಬಾ ವಿಶೇಷ: ಭಾರತದಿಂದ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗ ಮತ್ತು ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಎರಡು ಚಿತ್ರಗಳು ಆಯ್ಕೆಯಾಗಿವೆ. ಆರ್‌ ಆರ್‌ ಆರ್‌ನ ಜನಪ್ರಿಯ ಹಾಡು ‘ನಾಟು ನಾಟು’ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಆಲ್ ದಟ್ ಬ್ರೀತ್ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಭಾರತದಿಂದ ಸೇರ್ಪಡೆಗೊಂಡರೆ, ದಿ ಎಲಿಫೆಂಟ್ ವಿಸ್ಪರ್ಸ್ ಚಿತ್ರವನ್ನು ಅತ್ಯುತ್ತಮ ಕಿರುಚಿತ್ರವಾಗಿ ಸೇರಿಸಲಾಗಿದೆ. ಈ ಹಿನ್ನೆಲೆ ಭಾರತೀಯರು ಈ ಬಾರಿ ಮೂರು ಪ್ರಶಸ್ತಿಯೂ ನಮ್ಮ ದೇಶಕ್ಕೆ ಲಭಿಸಲಿ ಎಂದು ಹಾರೈಸುತ್ತಿದ್ದಾರೆ.

ಭಾರತದಲ್ಲಿ ನಾಳೆ ನೇರ ಪ್ರಸಾರ:

ಇನ್ನೂ ಭಾರತದ ಸಿನಿಮಾಗಳು ಗುರುತಿಸಿಕೊಂಡಿರುವುದರಿಂದ ಈ ಸಮಾರಂಭವನ್ನು ಹೇಗೆ ವೀಕ್ಷಣೆ ಮಾಡುವುದು ಎಂಬುದು ಕೆಲವರಿಗೆ ಗೊಂದಲವಿರುತ್ತದೆ. ಇಂದು ಸಂಜೆ (ಮಾರ್ಚ್ 12) ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ರಾತ್ರಿ 8 ಗಂಟೆಗೆ ಈ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಮಾರ್ಚ್13 ರಂದು ಬೆಳಗ್ಗೆ 5:30 ಕ್ಕೆ ವೀಕ್ಷಿಸಬಹುದು. ಪ್ರಶಸ್ತಿ ಸಮಾರಂಭದ ಸ್ಟ್ರೀಮಿಂಗ್ ಅನ್ನು YouTube, Hulu Live TV, DirecTV, FUBO TV, AT&T TVಯಲ್ಲಿ ವೀಕ್ಷಣೆ ಮಾಡಬಹುದು. ಎಬಿಸಿ ನೆಟ್‌ವರ್ಕ್ ಪ್ರಸಾರದ ಹಕ್ಕು ಪಡೆದುಕೊಂಡಿದೆ. ಭಾರತದಲ್ಲಿ ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ನಿರೂಪಕಿಯಾಗಿ ದೀಪಿಕಾ ಪಡುಕೋಣೆ:

ಈ ಬಾರಿ ಭಾರತದಿಂದ ದೀಪಿಕಾ ಪಡುಕೋಣೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಲದ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ದೀಪಿಕಾ ಭಾರತವನ್ನು ಪ್ರತಿನಿಧಿಸುತ್ತಿಲ್ಲವಾದರೂ, ವಿಶ್ವದ ಅತಿದೊಡ್ಡ ಪ್ರಶಸ್ತಿ ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ. ದೀಪಿಕಾ ಅವರೊಂದಿಗೆ ಎಮಿಲಿ ಬ್ಲಂಟ್, ಡ್ವೇನ್ ಜಾನ್ಸನ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ರಿಜ್ ಅಹ್ಮದ್, ಝೋ ಸಲ್ಡಾನಾ, ಮೈಕೆಲ್ ಬಿ. ಜೋರ್ಡಾನ್ ಸೇರಿ ಅನೇಕ ನಟರು ಕಾಣಿಸಿಕೊಳ್ಳಲಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *