
ಮದುವೆ ಮುಗಿದ ಕೂಡಲೇ ವಿದೇಶಕ್ಕೆ ಹಾರಿದ ಪವಿತ್ರಾ– ನರೇಶ್ – ದುಬೈನಲ್ಲಿ ಕೈ ಕೈ ಹಿಡಿದು ಲವ್ ಬರ್ಡ್ಸ್ ಓಡಾಟ
- ಮನರಂಜನೆ
- March 12, 2023
- No Comment
- 1506
ನ್ಯೂಸ್ ಆ್ಯರೋ : ತೆಲುಗು ನಟ ನರೇಶ್ ಅವರು ಟ್ವಿಟರ್‌ನಲ್ಲಿ ಕನ್ನಡ ನಟಿ ಪವಿತ್ರಾ ಲೋಕೇಶ್ ಜೊತೆಗಿನ ಮದುವೆ ವಿಡಿಯೋವನ್ನು ಶೇರ್ ಮಾಡಿದ್ದರು. ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಕೊಡದೆ ವಿಡಿಯೋ ಹಂಚಿಕೊಂಡ ಜೋಡಿ ಇದೀಗ ದುಬೈನಲ್ಲಿ ಕಾಲ ಕಳೆಯುತ್ತಿರುವ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇನ್ನೂ ಈ ಫೋಟೋ, ವಿಡಿಯೋಗಳನ್ನು ನೋಡಿದವರು ಮದುವೆಯಾಯಿತೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ವಿಷಯಗಳನ್ನು ಈ ಜೋಡಿ ಬಿಟ್ಟುಕೊಟ್ಟಿಲ್ಲ. ಬದಲಾಗಿ ಜಾಲಿ ಮೂಡ್‌ನಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ದುಬೈನಲ್ಲಿ ಜಾಲಿ ರೈಡ್:
ಮರುಭೂಮಿ, ಸಮುದ್ರ, ದೊಡ್ಡ ದೊಡ್ಡ ಬಿಲ್ಡಿಂಗ್‌ಗಳ ಮಧ್ಯೆ ಪವಿತ್ರಾ, ನರೇಶ್ ಅವರು ಕೈ ಕೈ ಹಿಡಿದು ಜಾಲಿಯಾಗಿ ತಿರುಗಾಡಿದ್ದಾರೆ.
ಪವಿತ್ರ ಬಂಧಕ್ಕೆ ಆಶೀರ್ವಾದವಿರಲಿ ಎಂದ ನರೇಶ್: ‘ಒಂದು ಪವಿತ್ರ ಬಂಧ, ಎರಡು ಮನಸ್ಸು, ಮೂರು ಗಂಟು, ಏಳು ಹೆಜ್ಜೆ.. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ..’ ಎಂದು ಬರಹ ಬರೆದುಕೊಂಡು ನರೇಶ್ ಅವರು ಪವಿತ್ರಾ ಲೋಕೇಶ್ ಜತೆ ಸಪ್ತಪದಿ ತುಳಿಯುವ ವಿಡಿಯೋವನ್ನು ಶೇರ್ ಮಾಡಿದ್ದರು.
ಇದು ನಿಜವಾದ ಮದುವೆಯಾ ಅಥವಾ ಸಿನಿಮಾ ಚಿತ್ರೀಕರಣದ ತುಣುಕಾ ಎಂಬುದರ ಬಗ್ಗೆ ಜೋಡಿ ಗುಟ್ಟು ಬಿಟ್ಟುಕೊಟ್ಟಿಲ್ಲ.
ನರೇಶ್, ಪವಿತ್ರಾ ವಿರುದ್ಧ ರಮ್ಯಾ ಆರೋಪ
ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಈ ಹಿಂದೆಯೇ ನರೇಶ್ ಮೂರನೇ ಪತ್ನಿ ರಮ್ಯಾ ಅವರು ತಕರಾರು ತೆಗೆದಿದ್ದರು. ಕೆಲ ತಿಂಗಳುಗಳ ಹಿಂದೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಇರೋದನ್ನು ನೋಡಿ ರಮ್ಯಾ ಕೂಗಾಡಿದ್ದರು. ಪೊಲೀಸ್ ಭದ್ರತೆಯೊಂದಿಗೆ ನರೇಶ್, ಪವಿತ್ರಾ ಅವರು ಹೋಟೆಲ್‌ನಿಂದ ಹೊರಗಡೆ ಹೋಗಿದ್ದರು. ಈ ವರ್ಷದ ಆರಂಭದಲ್ಲಿಯೇ ಪವಿತ್ರಾ, ನರೇಶ್ ಅವರು ಶೀಘ್ರದಲ್ಲಿ ಮದುವೆ ಆಗಲಿದ್ದೇವೆ ಎಂದು ಹೇಳುವ ವಿಡಿಯೋವನ್ನು ಬಿಟ್ಟಿದ್ದರು.