‘ಸನಕ್’ ಹಾಡಿನ‌ ಅಸಭ್ಯ ಸಾಹಿತ್ಯಕ್ಕೆ ತೀವ್ರ ಆಕ್ಷೇಪ – ಕೊನೆಗೂ ಕ್ಷಮೆಯಾಚಿಸಿದ ರ್ಯಾಪರ್ ಬಾದ್ ಶಾ : ಈ ಹಾಡಲ್ಲಿ ಅಂಥಾದ್ದೇನಿದೆ?

‘ಸನಕ್’ ಹಾಡಿನ‌ ಅಸಭ್ಯ ಸಾಹಿತ್ಯಕ್ಕೆ ತೀವ್ರ ಆಕ್ಷೇಪ – ಕೊನೆಗೂ ಕ್ಷಮೆಯಾಚಿಸಿದ ರ್ಯಾಪರ್ ಬಾದ್ ಶಾ : ಈ ಹಾಡಲ್ಲಿ ಅಂಥಾದ್ದೇನಿದೆ?

ನ್ಯೂಸ್ ಆ್ಯರೋ : ವಿವಾದ, ಗಲಾಟೆಗಳು, ಅತಿರೇಕದ ವರ್ತನೆ ಇವೆಲ್ಲಾ ಸೆಲೆಬ್ರಿಟಿಗಳ ಹುಟ್ಟುಗುಣದಂತೆ. ದಿನಕ್ಕೊಂದು ಸೆಲೆಬ್ರಿಟಿಯ ವಿವಾದಗಳು ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ರ್ಯಾಪ್ ಹಾಡುಗಳ ಕಿಂಗ್ ಎನಿಸಿಕೊಂಡ ಬಾದ್ ಶಾ ಹಾಡಿದ ‘ಸನಕ್’ ಹಾಡಿನ ಸಾಹಿತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಂತಿಮವಾಗಿ ಬಾದ್ ಶಾ ಕ್ಷಮೆಯಾಚಿಸುವುದರೊಂದಿಗೆ ವಿವಾದಕ್ಕೆ ತೆರೆ ಬಿದ್ದಿದೆ. ಅಷ್ಟಕ್ಕೂ ಸಾಹಿತ್ಯದಲ್ಲಿ ಏನಿತ್ತು, ಬಾದ್ ಶಾ ಎಡವಿದ್ದೆಲ್ಲಿ ಎಂಬುದನ್ನು ನೋಡೋಣ.

ಅಷ್ಟಕ್ಕೂ ಆಗಿದ್ದೇನು?

ಬಾದ್ ಶಾ ಅವರ ‘ಸನಕ್’ ಹಾಡು ಬಿಡುಗಡೆಯಾಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆ ಪಡೆಯಿತು. ಆದರೆ ಹಾಡಿನ ಬಗ್ಗೆ ತಕರಾರು ಎತ್ತಿದ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದ ಅರ್ಚಕರಾದ ಮಹೇಶ್ ಅವರು ‘ಹಾಡಿನಲ್ಲಿ ಅಶ್ಲೀಲ ಪದಗಳ ಜೊತೆಗೆ ಶಿವ ದೇವರ ಹೆಸರನ್ನು ಬಳಸಿದ್ದು ಅಕ್ಷಮ್ಯ ಅಪರಾಧ. ತಕ್ಷಣವೇ ಈ ಹಾಡಿನಿಂದ ದೇವರ ಹೆಸರನ್ನು ತೆಗೆದು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಈ ಬಗ್ಗೆ ಎಪ್.ಐ.ಆರ್ ದಾಖಲಿಸಲಾಗುವುದು’ ಎಂದು ಎಚ್ಚರಿಕೆ‌ ನೀಡಿದ್ದರು.

ಕ್ಷಮೆ ಕೇಳಿದ ಬಾದ್ ಶಾ!

ಅರ್ಚಕರ ಖಡಕ್ ಎಚ್ಚರಿಕೆಯ ನಂತರ ಎಲ್ಲಾ ಕಡೆಯಿಂದ ಬಾದ್ ಶಾ ಅವರಿಗೆ ಟೀಕೆಗಳು, ಆಕ್ರೋಶದ ಮಾತುಗಳು‌ ಕೇಳಿ ಬರಲಾರಂಭಿಸಿದವು.‌ ಇದರಿಂದ ಎಚ್ಚೆತ್ತುಕೊಂಡ ಬಾದ್ ಶಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ‌ ಮೂಲಕ, ‘ಇತ್ತೀಚೆಗೆ ಬಿಡುಗಡೆಯಾದ ‘ಸನಕ್’ ಸಾಹಿತ್ಯವು ಕೆಲವರ ಭಾವನೆಗೆ ದಕ್ಕೆ ತಂದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದನ್ನು ಸ್ವ ಇಚ್ಛೆಯಿಂದ ಅಥವಾ ತಿಳಿದು ನಾನು‌ ಮಾಡಿಲ್ಲ. ನಾನು ಅತ್ಯಂತ ಉತ್ಸಾಹ ಮತ್ತು ಪ್ರಾಮಾಣಿಕತೆಯಿಂದ ಸಾಹಿತ್ಯಗಳನ್ನು ಅಭಿಮಾನಿಗಳೆದುರು‌ ತರಲು ಆಶಿಸುತ್ತೇನೆ. ಹೀಗಾಗಿ ನನ್ನ ಹಾಡಿನ‌ ಕೆಲವು ಸಾಹಿತ್ಯಗಳನ್ನು ಬದಲಾಯಿಸಲು ಕ್ರಮ ಕೈಗೊಂಡಿದ್ದೇನೆ’ ಎಂದಿದ್ದಾರೆ.

ಮುಂದುವರೆಸಿದ ಬಾದ್ ಶಾ,’ ಇದರೊಂದಿಗೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲೂ ಬದಲಿ‌ ಕ್ರಮ ಕೈಗೊಳ್ಳುತ್ತೇನೆ. ಹೀಗಾಗಿ ಅಭಿಮಾನಿಗಳು ಮತ್ತು‌ ಜನರು ಸ್ವಲ್ಪ ಕಾಲಾವಕಾಶ ನೋಡಿ ತಾಳ್ಮೆಯಿಂದ ಇರಬೇಕು. ನನಗೆ ಅಭಿಮಾನಿಗಳೇ ಆಧಾರ.. ಹೀಗಾಗಿ ನಾನು ನಿಮ್ಮ ಮಾತಿಗೆ ಗೌರವ ನೀಡುತ್ತೇನೆ ಮತ್ತು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ತಿಂಗಳ ಹಿಂದಷ್ಟೇ ಬಿಡುಗಡೆಯಾದ ‘ಸನಕ್’ ಸಾಹಿತ್ಯವು ಅತ್ಯಂತ ಕಡಿಮೆ ಸಮಯದಲ್ಲಿ ಬರೋಬ್ಬರಿ 22 ಮಿಲಿಯನ್ ವೀಕ್ಷಣೆ ಪಡೆದಿತ್ತು. ಆದರೆ ಇದೀಗ ಅದಕ್ಕೆ ಆಕ್ಷೇಪ ವ್ಯಕ್ತವಾಗಿರುವ ಕಾರಣ ರ್ಯಾಪರ್ ಬಾದ್ ಶಾ ಸಾಹಿತ್ಯದ ಸಾಲುಗಳನ್ನು ಬದಲಿಸಲು ನಿರ್ಧರಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *