ಹಬ್ಬದ ದಿನ ರಾಶಿ ಪ್ರಕಾರ ಇವುಗಳನ್ನು ದಾನ ಮಾಡಿ; ಸಂಪತ್ತು-ಸಮೃದ್ಧಿ ನಿಮ್ಮದಾಗಿಸಿಕೊಳ್ಳಿ
ನ್ಯೂಸ್ ಆ್ಯರೋ: ಇನ್ನೇನು ದೀಪಾವಳಿ ಹತ್ತಿರದಲ್ಲಿದೆ. ಈಗಾಗಲೇ ಆಚರಣೆ ಆರಂಭವಾಗಿದೆ. ಈ ಹಬ್ಬದ ದಿನ ರಾಶಿ ಪ್ರಕಾರ ಕೆಲ ವಸ್ತುಗಳನ್ನ ದಾನ ಮಾಡಿದರೆ ಲಕ್ಷ್ಮಿ ಕೃಪೆಯಿಂದ ಸಂಪತ್ತು ಹಾಗೂ ಸಮೃದ್ಧಿ ಸಿಗುತ್ತದೆ.
ಮೇಷ ರಾಶಿ: ಈ ರಾಶಿಯನ್ನ ಮಂಗಳ ಆಗುತ್ತದೆ. ಈ ಸಮಯದಲ್ಲಿ ಮಾಡುವ ದಾನ ಬಹಳ ಮುಖ್ಯವಾಗುತ್ತದೆ. ದೀಪಾವಳಿಯಂದು ನಿಮ್ಮ ಮನೆಯ ಹತ್ತಿರವಿರುವ ದೇವಸ್ಥಾನಕ್ಕೆ ಪೊರಕೆಯನ್ನು ದಾನ ಮಾಡಬೇಕು ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಪೊರಕೆ ತಾಯಿ ಲಕ್ಷ್ಮಿಯ ಸಂಕೇತವಾಗಿದೆ. ಮೇಷ ರಾಶಿಯ ಜನರು ದೀಪಾವಳಿಯಂದು ಪೊರಕೆಯನ್ನು ದಾನ ಮಾಡಿದರೆ, ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ.
ವೃಷಭ ರಾಶಿ: ಈ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ಪೂಜೆಯ ನಂತರ ಅಗತ್ಯವಿರುವವರಿಗೆ ಆಹಾರ, ಹಣ ಅಥವಾ ಬೆಚ್ಚಗಿನ ಬಟ್ಟೆಗಳನ್ನು ದಾನ ಮಾಡಿ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗಲಿದೆ.
ಮಿಥುನ ರಾಶಿ: ಈ ರಾಶಿಯನ್ನ ಗ್ರಹಗಳ ರಾಜಕುಮಾರ ಬುಧ ಆಳುತ್ತಾನೆ. ಹಾಗಾಗಿ ಈ ರಾಶಿಯವರು ಹಬ್ಬದ ದಿನ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಸಿಹಿತಿಂಡಿಗಳು ಅಥವಾ ಬಟ್ಟೆಗಳನ್ನು ದಾನ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಡಬಲ್ ಆಗುತ್ತದೆ.
ಕಟಕ ರಾಶಿ: ಚಂದ್ರ ಕಟಕ ರಾಶಿಯ ಅಧಿಪತಿ. ದೀಪಾವಳಿಯಂದು ಬಡವರಿಗೆ ಆಹಾರವನ್ನು ನೀಡಬೇಕು. ಇದು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ. ಇದರಿಂದ ಆರ್ಥಿಕವಾಗಿ ಸಹ ನಿಮಗೆ ಲಾಭವಾಗುತ್ತದೆ.
ಕನ್ಯಾ ರಾಶಿ: ಈ ರಾಶಿಯನ್ನ ಸಹ ಬುಧ ಗ್ರಹವೇ ಆಳುತ್ತದೆ. ಹಾಗಾಗಿ ಇವರು ಹಬ್ಬದ ದಿನ ಗಣೇಶ ಹಾಗೂ ಲಕ್ಷ್ಮಿಗೆ ಏನಾದರೂ ದಾನ ಮಾಡಬೇಕು. ಇದರ ಜೊತೆಗೆ ಸಿಹಿತಿಂಡಿಗಳನ್ನು ದಾನ ಮಾಡಿ. ಇದರಿಂದ ಮನೆಯಲ್ಲಿ ಪ್ರೀತಿ ಹೆಚ್ಚಾಗುತ್ತದೆ ಹಾಗೂ ಸಂಬಂಧಗಳು ಗಟ್ಟಿಯಾಗುತ್ತದೆ.
ಮಕರ ರಾಶಿ: ನ್ಯಾಯದ ದೇವರು ಶನಿ ಈ ಮಕರ ರಾಶಿಯನ್ನ ಆಳುತ್ತದೆ. ಹಾಗಾಗಿ ಈ ರಾಶಿಯವರು ಕಪ್ಪು ಎಳ್ಳು ಹಾಗೂ ಸಾಸಿವೆ ಎಣ್ಣೆಯನ್ನ ದಾನ ಮಾಡಿ. ಇದರ ಜೊತೆಗೆ ಹಬ್ಬದ ದಿನ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು, ದೀಪಾವಳಿಯಂದು ಪಕ್ಷಿಗಳಿಗೆ ಆಹಾರವನ್ನು ನೀಡಿ.
ಮೀನ ರಾಶಿ: ಈ ಮೀನ ರಾಶಿಯನ್ನ ಗುರು ಗ್ರಹ ಆಳುತ್ತದೆ. ಹಾಗಾಗಿ ಇವರು ಹಬ್ಬದ ದಿನಸಿಹಿತಿಂಡಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದ ನಿಮ್ಮನ್ನು ನಿವಾರಿಸುತ್ತಾಳೆ.
Leave a Comment