ಹಿಂಡೆನ್ ಬರ್ಗ್ ರಿಸರ್ಚ್‌ ವರದಿಯ ಹೊಡೆತದಿಂದ ಹೆಚ್ಚುತ್ತಿದೆ ಸಾಲದ ಹೊರೆ – $ 450 ಮಿಲಿಯನ್‌ ಮೌಲ್ಯದ ಷೇರು ಮಾರಾಟಕ್ಕೆ ಮುಂದಾದ ಗೌತಮ್‌ ಅದಾನಿ

ಹಿಂಡೆನ್ ಬರ್ಗ್ ರಿಸರ್ಚ್‌ ವರದಿಯ ಹೊಡೆತದಿಂದ ಹೆಚ್ಚುತ್ತಿದೆ ಸಾಲದ ಹೊರೆ – $ 450 ಮಿಲಿಯನ್‌ ಮೌಲ್ಯದ ಷೇರು ಮಾರಾಟಕ್ಕೆ ಮುಂದಾದ ಗೌತಮ್‌ ಅದಾನಿ

ನ್ಯೂಸ್‌ ಆ್ಯರೋ : ಸಾಲದ ಹೊರೆ ತಗ್ಗಿಸಲು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅಂಬುಜಾ ಸಿಮೆಂಟ್‌ ಸಂಸ್ಥೆಯಲ್ಲಿರುವ ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಅದಾನಿ ಗ್ರೂಪ್ ನ ಹಣಕಾಸು ಅಕ್ರಮಗಳ ಕುರಿತು ಹಿಂಡೆನ್ ಬರ್ಗ್ ರಿಸರ್ಚ್ ಪ್ರಕಟಿಸಿದ ವರದಿಯಿಂದಾಗಿ ಅದಾನಿ ಗ್ರೂಪ್ ಷೇರುಗಳು ಭಾರಿ ಕುಸಿತ ಕಂಡಿದ್ದು, ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು. ಮಾತ್ರವಲ್ಲ, ಅದಾನಿ ಸಮೂಹದ ಷೇರುಗಳು ಭಾರಿ ಕುಸಿತ ಕಂಡ ಹಿನ್ನೆಲೆಯಲ್ಲಿ ಗೌತಮ್ ಅದಾನಿ ಜಗತ್ತಿನ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು.

ಅದರ ಬೆನ್ನಲ್ಲೆ ಗೌತಮ್ ಅದಾನಿ ಅವರು ತಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಲು ಅಂಬುಜಾ ಸಿಮೆಂಟ್‌ ಸಂಸ್ಥೆಯಲ್ಲಿರುವ ತಮ್ಮ ಶೇ. 4 ರಿಂದ 5 ರಷ್ಟು ಷೇರುಗಳ ಮಾರಾಟಕ್ಕೆ ನಿರ್ಧರಿಸಿದ್ದಾರೆ. ಅದರಿಂದ ಕನಿಷ್ಠ 450 ಮಿಲಿಯನ್‌ ಡಾಲರ್ ಸಿಗಬಹುದು. ಈ ಮೊತ್ತದಿಂದ ಸಾಲವನ್ನು ತೀರಿಸಲು ಅದಾನಿ ಯೋಜಿಸಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

ಅಂಬುಜಾ ಷೇರುಗಳ ಮಾರಾಟಕ್ಕಾಗಿ ಅಂತಾರಾಷ್ಟ್ರೀಯ ಖರೀದಿದಾರರೊಂದಿಗೆ ಚರ್ಚೆ ನಡೆಯುತ್ತಿದೆ. ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಾಲದ ಹೊರೆ ತಗ್ಗಿಸಿದರೆ ಅದಾನಿ ಸಮೂಹದ ಕಂಪನಿಗಳ ಮೇಲೆ ಹೂಡಿಕೆದಾರರ ವಿಶ್ವಾಸ ಮತ್ತೆ ಹೆಚ್ಚಲಿದೆ. ಅದಾನಿ ಗ್ರೂಪ್ ಮಾರ್ಚ್ 9ರಂದು ಸಾಲವನ್ನು ಪಾವತಿಸಿದೆ ಎಂದು ಗೌತಮ್ ಅದಾನಿ ಬಹಿರಂಗಪಡಿಸಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದೆ.

ಅದಾನಿ ಗ್ರೂಪ್‌ನ ವಿಶ್ವಾಸ ಹೆಚ್ಚಿಸುವಂತಹ ಕ್ರಮಗಳಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕೆಲವು ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಚೇತರಿಕೆ ಕಾಣುತ್ತಿವೆ. ಮೂರು ಅದಾನಿ ಗ್ರೂಪ್ ಕಂಪನಿಗಳ ಷೇರುಗಳನ್ನು ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆ ಜಿಕ್ಯೂಜಿ ಪಾಲುದಾರರು 15,447 ಕೋಟಿ ರೂಪಾಯಿಗಳಿಗೆ ಇತ್ತೀಚೆಗೆ ಖರೀದಿಸಲಾಗಿದೆ. ಈ ಮೂರು ಕಂಪನಿಗಳ ಹೊರತಾಗಿ, ಜಿಕ್ಯೂಜಿ ಪಾಲುದಾರರು ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನಲ್ಲಿ ಷೇರುಗಳನ್ನು ಹೊಂದಿದ್ದಾರೆ.

ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಸಮೂಹದ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಇಂತಹ ಪರಿಸ್ಥಿತಿಯಲ್ಲಿ ಅದಾನಿ ಗ್ರೂಪ್ ಆದಾಯ ಹೆಚ್ಚಿಸುವ ಗುರಿಯೊಂದಿಗೆ ಬಂಡವಾಳ ವೆಚ್ಚ ಯೋಜನೆಗಳನ್ನ ಕಡಿತಗೊಳಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಇತ್ತೀಚೆಗೆ ವರದಿಯಲ್ಲಿ ಉಲ್ಲೇಖಿಸಿತ್ತು.

ರಿಸರ್ಚ್‌ ವರದಿಯಲ್ಲಿ ಏನಿತ್ತು?: ಅದಾನಿ ಸಂಸ್ಥೆಯ ವಿರುದ್ಧ ಜನವರಿ 24 ರಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ಪ್ರಕಟಿಸಿತ್ತು. ಅದಾನಿ ಸಮೂಹದ ಷೇರುಗಳು ಮತ್ತು ಲೆಕ್ಕಪತ್ರದಲ್ಲಿ ವಂಚನೆಯ ದೊಡ್ಡ ಆರೋಪ ಮಾಡಿತ್ತು. ಅದಾನಿ ಸಮೂಹವು ವಿದೇಶಗಳಲ್ಲಿ ಬೇನಾಮಿ ಕಂಪನಿಗಳನ್ನು ತೆರೆದಿದೆ ಎಂದು ಹೇಳಲಾಗಿತ್ತು. ಅಲ್ಲಿಂದ ತಮ್ಮ ಸ್ವಂತ ಕಂಪನಿಯಲ್ಲಿ ಹೂಡಿಕೆ ಮಾಡಿದರು. ಪರಿಣಾಮವಾಗಿ, ಅವರ ಷೇರಿನ ಬೆಲೆಗಳು ಕೃತಕವಾಗಿ ಕ್ಷಿಪ್ರ ದರದಲ್ಲಿ ಹೆಚ್ಚಾಗಿವೆ ಎಂದು ಆರೋಪಿಸಿತ್ತು.

ಅದಾನಿ ಸಮೂಹ ಈ ವರದಿಯನ್ನು ಸುಳ್ಳು ಮತ್ತು ಪಕ್ಷಪಾತದಿಂದ ಕೂಡಿದೆ ಎಂದು ಹೇಳಿತ್ತು. ಆದರೆ, ಇದರ ಹೊರತಾಗಿಯೂ, ಅದಾನಿ ಸಮೂಹದ ಷೇರುಗಳು ಭಾರಿ ಕುಸಿತ ಕಂಡಿದ್ದವು. ಇದರಿಂದಾಗಿ ಸುಮಾರು ₹ 12 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿತ್ತು.

ಅದಾನಿ ಗ್ರೂಪ್‌ ಕಂಪನಿಗಳಿಗೆ ಹಿಂಡೆನ್‌ ಬರ್ಗ್‌ ಸಂಶೋಧನಾ ವರದಿಯಿಂದ ಆಗಿರುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳಲು ಆರು ತಜ್ಞ ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿದೆ. ಎರಡು ತಿಂಗಳ ಒಳಗೆ ವರದಿಯನ್ನು ಸಲ್ಲಿಸುವಂತೆಯೂ ಸಮಿತಿಗೆ ಸೂಚಿಸಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *