ಪ್ರಾಣವನ್ನೇ ಕಸಿಯಬಲ್ಲ ‘ಸೈಲೆಂಟ್ ಹಾರ್ಟ್ ಅಟ್ಯಾಕ್’ ಕಾರಣವೇನು? ಇದನ್ನು ತಡೆಯೋದು ಹೇಗೆ?

ಪ್ರಾಣವನ್ನೇ ಕಸಿಯಬಲ್ಲ ‘ಸೈಲೆಂಟ್ ಹಾರ್ಟ್ ಅಟ್ಯಾಕ್’ ಕಾರಣವೇನು? ಇದನ್ನು ತಡೆಯೋದು ಹೇಗೆ?

ನ್ಯೂಸ್ ಆ್ಯರೋ‌ : ಹಠಾತ್ ಹೃದಯಾಘಾತದಿಂದ ಇತ್ತೀಚೆಗೆ ಸಾಲು ಸಾಲು ಮಂದಿ ಸಾವನ್ನಪ್ಪುತ್ತಿರುವ ಬಗ್ಗೆ ನೀವು ಆಗಾಗ ಕೇಳಿರುತ್ತೀರಿ.‌ ಚಿತ್ರನಟ ಪುನೀತ್ ರಾಜ್ ಕುಮಾರ್, ನಿನ್ನೆಯಷ್ಟೇ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೀಗೆ ಹಲವರಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಪ್ರಾಣವನ್ನೇ ತೆಗೆದ ಉದಾಹರಣೆ ಇದೆ. ಹಾಗಾದರೆ ಈ‌ ಸೈಲೆಂಟ್ ಹಾರ್ಟ್ ಅಟ್ಯಾಕ್ ಅಂದ್ರೆ ಏನು? ಅದನ್ನು ತಡೆಗಟ್ಟೋದು‌ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (MI) ಎಂದೂ ಕರೆಯಲಾಗುತ್ತದೆ. ಇದು ಎದೆನೋವು ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ, ಆಯಾಸದಂತಹ ವಿಶಿಷ್ಟ ಲಕ್ಷಣಗಳಿಲ್ಲದೆ ಬರುವ ಒಂದು ರೀತಿಯ ಹೃದಯಾಘಾತವಾಗಿದೆ. ಬದಲಾಗಿ ವ್ಯಕ್ತಿಯು ಕೇವಲ ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸಬಹುದು ಅಥವಾ ಯಾವುದೇ ರೋಗಲಕ್ಷಣಗಳೇ ಇರುವುದಿಲ್ಲ. ಇದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಆದಾಗ್ಯೂ ಸಾಮಾನ್ಯ ಹೃದಯಾಘಾತದಂತೆ, ಹೃದಯದ ಒಂದು ಭಾಗಕ್ಕೆ ರಕ್ತದ ಹರಿವು ನಿರ್ಬಂಧಿಸಿದಾಗ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಹೃದಯದ ಸ್ನಾಯುಗಳಿಗೆ ಹಾನಿಯಾಗುತ್ತದೆ.

ಯಾರಿಗೆ ಅಪಾಯ‌ ಹೆಚ್ಚು?
ಅಧಿಕ ರಕ್ತದೊತ್ತಡ, ಮಧುಮೇಹ, ವೃದ್ಧಾಪ್ಯ ಮತ್ತು ಬೊಜ್ಜಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚು. ಇದಲ್ಲದೆ, ಕೆಲವೊಮ್ಮೆ ಅಂಡರ್‌ಲೈನ್‌ ರೋಗದಿಂದಾಗಿ ಅಪಧಮನಿಗಳು ನಿರ್ಬಂಧಿಸಲ್ಪಡುತ್ತವೆ. ಇದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ ಅನೇಕ ಜನರು ಹೃದಯಾಘಾತದ ಲಕ್ಷಣಗಳನ್ನು ಅಸಿಡಿಟಿ ಅಥವಾ ಇನ್ನಾವುದೇ ಸಮಸ್ಯೆ ಎಂದು ತಪ್ಪಾಗಿ ಭಾವಿಸಿ ನಿರ್ಲಕ್ಷಿಸುತ್ತಾರೆ.

ಸೈಲೆಂಟ್‌ ಹೃದಯಾಘಾತವನ್ನು ತಡೆಯುವುದು ಹೇಗೆ?

ಆರೋಗ್ಯಕರ ಆಹಾರ: ಆರೋಗ್ಯಕರ ಆಹಾರವನ್ನು ಸೇವಿಸುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ. ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಣ್ಣುಗಳು, ತರಕಾರಿಗಳು, ವಾಲ್‌ನಟ್ಸ್, ಬೆಣ್ಣೆ, ಮೂಲಂಗಿ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿ.

ವ್ಯಾಯಾಮ: ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ನಿಮ್ಮ ಹೃದಯವನ್ನು ಆರೋಗ್ಯವಾಗಿಡಬಹುದು. ಯೋಗ, ಧ್ಯಾನ ಮತ್ತು ಓಟದಂತಹ ಸಕ್ರಿಯ ಚಟುವಟಿಕೆಗಳು ಹೃದಯಕ್ಕೆ ಒಳ್ಳೆಯದು.

ತಂಬಾಕು ಮತ್ತು ಮದ್ಯದ ಕಡಿಮೆ ಸೇವನೆ: ತಂಬಾಕು ತಿನ್ನುವವರು ಅಥವಾ ಧೂಮಪಾನಿಗಳು ಮತ್ತು ಹೆಚ್ಚು ಮದ್ಯಪಾನ ಮಾಡುವವರ ಹೃದಯಕ್ಕೆ ಅಪಾಯವಿರುತ್ತದೆ. ಅದಕ್ಕಾಗಿಯೇ ತಂಬಾಕು ಮತ್ತು ಮದ್ಯದ ಸೇವನೆಯನ್ನು ನಿಲ್ಲಿಸಬೇಕು.

ತೂಕ ಇಳಿಸಿಕೊಳ್ಳಿ: ಅಧಿಕ ತೂಕ ಹೊಂದಿರುವವರು ತೂಕ ಇಳಿಸಿಕೊಳ್ಳಬೇಕು. ಇದು ಹೃದಯಕ್ಕೆ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡಿ: ಒತ್ತಡ ಕೂಡ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿಗಳನ್ನು ರೂಢಿಸಿಕೊಳ್ಳಿ.

ನಿಯಮಿತ ತಪಾಸಣೆ: ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಆಗಾಗ ಪರೀಕ್ಷಿಸಿಕೊಳ್ಳಿ. ನಿಮಗೆ ಯಾವುದೇ ರೀತಿಯ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ನಿಯಮಿತ ಔಷಧಿ ಸೇವನೆ: ನೀವು ಯಾವುದೇ ವೈದ್ಯಕೀಯ ತೊಂದರೆಗೆ ತುತ್ತಾಗಿದ್ದರೆ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ವೈದ್ಯರಿಂದ ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳುವುದು ಸೂಕ್ತ.

Related post

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ನೀವು…
ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…

Leave a Reply

Your email address will not be published. Required fields are marked *