ಬೇಕಾಬಿಟ್ಟಿ ಬಡ್ಡಿ ಪೀಕುವ ಸ್ಪೈಲೋನ್ ಆ್ಯಪ್ ತೆಗೆದುಹಾಕಿದ ಗೂಗಲ್ – ಈ 17 ಆ್ಯಪ್ ಗಳು ಇನ್ಮುಂದೆ‌ ಕೆಲಸ ಮಾಡೋದಿಲ್ಲ!

ಬೇಕಾಬಿಟ್ಟಿ ಬಡ್ಡಿ ಪೀಕುವ ಸ್ಪೈಲೋನ್ ಆ್ಯಪ್ ತೆಗೆದುಹಾಕಿದ ಗೂಗಲ್ – ಈ 17 ಆ್ಯಪ್ ಗಳು ಇನ್ಮುಂದೆ‌ ಕೆಲಸ ಮಾಡೋದಿಲ್ಲ!

ನ್ಯೂಸ್ ಆ್ಯರೋ : ಅನೇಕ ನೈಜ ಲೋನ್ ಆ್ಯಪ್ ಗಳಂತೆ ಕಾಣುವ ಆ್ಯಪ್ ಗಳಲ್ಲಿ ಅನೇಕರು ಅದೆಷ್ಟೋ ಮೊತ್ತದ ಹಣದ ವಿಚಾರದಲ್ಲಿ ಯಾಮಾರಿರುತ್ತಾರೆ. ಮೋಸ ಮಾಡುವ ಆನ್ಲೈನ್ ವಂಚಕರಂತೂ ಇಂತಹ ಪ್ರಕರಣಗಳಲ್ಲಿ ಅದೆಷ್ಟೋ ಫ್ರಾಡ್ ಮಾಡಿರುತ್ತಾರೆ. ಇದೀಗ ಗೂಗಲ್ ಇಂತಹ ಆ್ಯಪ್ ಗಳನ್ನು ತೆಗೆದುಹಾಕುವ ಮೂಲಕ ಗೂಗಲ್ ದಿಟ್ಟ ಹೆಜ್ಜೆ ಇಟ್ಟಿದೆ.

ಈ ಬಗ್ಗೆ ಅಧ್ಯಯನ ನಡೆಸಿದ ವರದಿ ಏನು ಹೇಳುತ್ತೆ ಗೊತ್ತಾ…?

ಇಸೆಟ್ ರಿಸರ್ಚ್ (ESET Research) ವರದಿಯ ಪ್ರಕಾರ, ಈ ಅಪ್ಲಿಕೇಶನ್​ಗಳನ್ನು ಗೂಗಲ್ ತೆಗೆದುಹಾಕುವ ಮುನ್ನ ಇವು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಜಾಗತಿಕವಾಗಿ 12 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್​ಲೋಡ್ ಮಾಡಲ್ಪಟ್ಟಿವೆ.

ಇಂಥ ವಂಚಕ ಆಂಡ್ರಾಯ್ಡ್ ಲೋನ್ ಅಪ್ಲಿಕೇಶನ್​ಗಳನ್ನು ‘ಸ್ಪೈ ಲೋನ್ ಅಪ್ಲಿಕೇಶನ್​ಗಳು’ ಎಂದು ಕರೆಯಲಾಗುತ್ತದೆ.”ಈ ದುರುದ್ದೇಶಪೂರಿತ ಆ್ಯಪ್​ಗಳು ಕಾನೂನುಬದ್ಧವಾಗಿ ಸಾಲ ನೀಡುವ ಆ್ಯಪ್​ಗಳ ಮೇಲೆ ಬಳಕೆದಾರರು ಇಟ್ಟಿರುವ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ. ಜನರನ್ನು ಮೋಸಗೊಳಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಅತ್ಯಾಧುನಿಕ ತಂತ್ರಗಳನ್ನು ಇವು ಬಳಸುತ್ತವೆ” ಎಂದು ಇಎಸ್ಇಟಿ ಸಂಶೋಧಕ ಲುಕಾಸ್ ಸ್ಟೀಫನ್ಕೊ ಹೇಳಿದ್ದಾರೆ.

ವರದಿಯ ಪ್ರಕಾರ, ಈ ಅಪ್ಲಿಕೇಶನ್​ಗಳನ್ನು ಮುಖ್ಯವಾಗಿ ಮೆಕ್ಸಿಕೊ, ಇಂಡೋನೇಷ್ಯಾ, ಥಾಯ್ಲೆಂಡ್, ವಿಯೆಟ್ನಾಂ, ಭಾರತ, ಪಾಕಿಸ್ತಾನ, ಕೊಲಂಬಿಯಾ, ಪೆರು, ಫಿಲಿಪೈನ್ಸ್, ಈಜಿಪ್ಟ್, ಕೀನ್ಯಾ, ನೈಜೀರಿಯಾ ಮತ್ತು ಸಿಂಗಾಪುರದಲ್ಲಿ ಕುಳಿತ ಹ್ಯಾಕರ್​ಗಳು ನಿರ್ವಹಿಸುತ್ತಿದ್ದಾರೆ. ಡೇಟಾ ಕಳವು ಮತ್ತು ಬ್ಲ್ಯಾಕ್​ಮೇಲ್ ಮಾಡುವುದು ಮಾತ್ರವಲ್ಲದೆ ಈ ಆ್ಯಪ್​ಗಳು ಅಗಾಧ ಪ್ರಮಾಣದ ಬಡ್ಡಿಯನ್ನು ಗ್ರಾಹಕರಿಂದ ವಸೂಲು ಮಾಡುತ್ತವೆ.

ಈ ಆ್ಯಪ್​ಗಳು ನೀಡುವ ಸಾಲದ ಒಟ್ಟು ವಾರ್ಷಿಕ ಮರುಪಾವತಿಯು (total annual cost -TAC) ಅವು ಹೇಳಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ ಮತ್ತು ಸಾಲದ ಅವಧಿ ಹೇಳಿದ್ದಕ್ಕಿಂತ ತುಂಬಾ ಕಡಿಮೆಯಾಗಿರುತ್ತದೆ ಎಂದು ಈ ಆ್ಯಪ್​ಗಳ ಸಂತ್ರಸ್ತರು ಹೇಳಿದ್ದಾರೆ.

ಕೆಲ ಸಂದರ್ಭಗಳಲ್ಲಿ, ಸಾಲಗಾರರು ತಮ್ಮ ಸಾಲಗಳನ್ನು ನಿಗದಿತ 91 ದಿನಗಳ ಬದಲು ಐದು ದಿನಗಳಲ್ಲಿ ಪಾವತಿಸುವಂತೆ ಒತ್ತಡ ಹೇರಲಾಗಿದೆ ಮತ್ತು ಸಾಲದ ಟಿಎಸಿ ಶೇಕಡಾ 160 ರಿಂದ 340 ರ ನಡುವೆ ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸ್ಪೈ ಲೋನ್ ಆ್ಯಪ್​ಗಳು 2020ರಿಂದ ಕೆಲಸ ಮಾಡುತ್ತಿವೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಬಳಕೆದಾರರು ಸ್ಪೈ ಲೋನ್ ಅಪ್ಲಿಕೇಶನ್ ಅನ್ನು ತಮ್ಮ ಫೋನಿನಲ್ಲಿ ಇನ್​ಸ್ಟಾಲ್ ಮಾಡುವಾಗ ಇವುಗಳು ವಿಧಿಸುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಪೋನ್​ನಲ್ಲಿನ ವೈಯಕ್ತಿಕ ಡೇಟಾಗೆ ಪ್ರವೇಶ ನೀಡಲು ಹಲವಾರು ಅನುಮತಿಗಳನ್ನು ನೀಡಬೇಕಾಗುತ್ತದೆ.

ಈ ಅಪ್ಲಿಕೇಶನ್​ಗಳ ಗೌಪ್ಯತೆ ನೀತಿಗಳ ಪ್ರಕಾರ, ಆ ಅನುಮತಿಗಳನ್ನು ನೀಡದಿದ್ದರೆ ಸಾಲ ನಿರಾಕರಿಸಲಾಗುತ್ತದೆ. ಸಾಲದ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಬಳಕೆದಾರರು ತಮ್ಮ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *