ದಟ್ಟ ದರಿದ್ರ ಪಾಕಿಸ್ತಾನದಲ್ಲೊಬ್ಬ ಹಿಂದೂ ಕುಬೇರ – ಕೋಟ್ಯಾಂತರ ಆದಾಯ‌ ಹೊಂದಿರುವ ದೀಪಕ್ ಪೆರ್ವಾನಿ ಬಗ್ಗೆ ನಿಮಗ್ಗೊತ್ತಾ..!?

ದಟ್ಟ ದರಿದ್ರ ಪಾಕಿಸ್ತಾನದಲ್ಲೊಬ್ಬ ಹಿಂದೂ ಕುಬೇರ – ಕೋಟ್ಯಾಂತರ ಆದಾಯ‌ ಹೊಂದಿರುವ ದೀಪಕ್ ಪೆರ್ವಾನಿ ಬಗ್ಗೆ ನಿಮಗ್ಗೊತ್ತಾ..!?

ನ್ಯೂಸ್ ಆ್ಯರೋ : ಪಾಕಿಸ್ತಾನ ದೇಶ ಕಂಡು ಕೇಳರಿಯದ ಮಹಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರೋದು ನಿಮಗೆಲ್ಲಾ ಗೊತ್ತೇ ಇದೆ. ಶ್ರೀಲಂಕಾದಲ್ಲಿ ಉಂಟಾದ ಸ್ಥಿತಿಯಂತೆ ಪಾಕಿಸ್ತಾನದ ಸ್ಥಿತಿಯಾಗುತ್ತಿದೆ. ಅತೀ ಅಗತ್ಯ ವಸ್ತುಗಳ ಕೊರತೆ ಪಾಕಿಸ್ತಾನದಲ್ಲಿ ಕಂಡು ಬಂದಿದೆ. ಗೋಧಿ, ಅಕ್ಕಿ, ಮೊಟ್ಟೆ ಮೊದಲಾದವುಗಳ ಲಭ್ಯತೆಯಿಲ್ಲದೆ ಕೊರತೆ ಇದ್ದು, ಸಾಮಾನ್ಯ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಸ್ಲಿಮರೇ ಹೆಚ್ಚಾಗಿರುವ ಪಾಕಿಸ್ತಾನದಲ್ಲಿ ಶ್ರೀಮಂತ ಹಿಂದೂ ಉದ್ಯಮಿಯೊಬ್ಬ ಇರೋದು ನಿಮಗೆ ಗೊತ್ತಾ..!? ಈ ವರದಿಯಲ್ಲಿ ನಾವು ಆ ವಿಷಯವನ್ನು ತಿಳಿಸಲಿದ್ದೇವೆ.

ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವಂತೆ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತದೆ. ಆದರೂ ಕೂಡಾ ಪಾಕಿಸ್ತಾನದಲ್ಲಿ ಕೆಲವು ಹಿಂದೂಗಳು ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಶ್ರೀಮಂತರೂ ಆಗಿದ್ದಾರೆ. ಪಾಕಿಸ್ತಾನದ ಅತೀ ಶ್ರೀಮಂತ ಹಿಂದೂ ವಕ್ತಿಯಾದ ದೀಪಕ್ ಪೆರ್ವಾನಿ ಬಗ್ಗೆ ನಾವಿಂದು ತಿಳಿಯೋಣ.

ದೀಪಕ್ ಪೆರ್ವಾನಿ 1973ರಲ್ಲಿ ಪಾಕಿಸ್ತಾನದ ಮೀರ್‌ಪುರ್ ಖಾಸ್‌ನಲ್ಲಿ ಜನಿಸಿದ್ದಾರೆ. ಹಾಗೆಯೇ ಪಾಕಿಸ್ತಾನದ ಜನಪ್ರಿಯ ಫ್ಯಾಷನ್ ಡಿಸೈನರ್ ಮತ್ತು ನಟರಾಗಿದ್ದಾರೆ. ದೀಪಕ್ ಪೆರ್ವಾನಿ ಪಾಕಿಸ್ತಾನದ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದಲ್ಲಿ ಫ್ಯಾಷನ್ ಡಿಸೈನಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2022ರಲ್ಲಿ ಪ್ರಕಟವಾದ ವರದಿ ಪ್ರಕಾರ ದೀಪಕ್ ಪೆರ್ವಾನಿ ನಿವ್ವಳ ಆದಾಯ 71 ಕೋಟಿ ರೂಪಾಯಿ ಎನ್ನಲಾಗಿದೆ.

ದೀಪಕ್ ಪೆರ್ವಾನಿ ಪಾಕಿಸ್ತಾನದಲ್ಲಿನ ನಟ ಕೂಡಾ ಹೌದು. ಪಾಕಿಸ್ತಾನದ ಜನಪ್ರಿಯ ಟಿವಿ ಧಾರಾವಾಹಿಗಳಾಗಿ ದೀಪಕ್ ಪೆರ್ವಾನಿ ನಟಿಸಿದ್ದಾರೆ. ಮೇರೆ ಪಾಸ್ ಪಾಸ್ (ಹಮ್‌ ಟಿವಿ), ಕಾದೋರಾತ್ (2013ರಲ್ಲಿ ಹಮ್‌ ಟಿವಿ) ದೀಪಕ್ ಪೆರ್ವಾನಿ ನಟಿಸಿ ಪ್ರಮುಖ ಧಾರಾವಾಹಿಗಳಾಗಿದೆ. ದೀಪಕ್ ಪೆರ್ವಾನಿ ರೊಮ್ಯಾಂಟಿಕ್, ಕಾಮೆಡಿ ಸಿನಿಮಾ ಪಂಜಾಬ್ ನಹಿ ಜೌಂಗಿಯಲ್ಲಿಯೂ (2017) ನಟಿಸಿದ್ದು, ತಮ್ಮದೇ ಛಾಪು ಮೂಡಿಸಿದ್ದಾರೆ.

ಅಲ್ಲದೇ ದೀಪಕ್ ಪೆರ್ವಾನಿ ವರ್ಲ್ಡ್ ಬ್ಯ್ರಾಂಡಿಂಗ್ ಅವಾರ್ಡ್ 2017-2018ರ ವಿಜೇತರಾಗಿದ್ದಾರೆ. ಆರು ಲಕ್ಸ ಸ್ಟೈಲ್ ಅವಾರ್ಡ್ ಅನ್ನು ಕೂಡಾ ದೀಪಕ್ ಪೆರ್ವಾನಿ ಪಡೆದುಕೊಂಡಿದ್ದಾರೆ. 2 ಬಾರಿ ಎಂಟಿವಿ ಸ್ಟೈಲ್ ಗುರು ಅವಾರ್ಡ್ ಪಡೆದುಕೊಂಡಿದ್ದಾರೆ. ಮಿಲನ್ ಫ್ಯಾಶನ್ ವೀಕ್ 2010ನಲ್ಲಿ ತೀರ್ಪುಗಾರರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಮಿಯಾಮಿ ಫ್ಯಾಷನ್ ವೀಕ್‌ನಲ್ಲಿ ಉತ್ತಮ ಅಂತಾರಾಷ್ಟ್ರೀಯ ಡಿಸೈನರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ದೀಪಕ್ ಪೆರ್ವಾನಿ ಡಿಸೈನ್ ಮಾಡಿದ ಕುರ್ತಾವು ವಿಶ್ವದ ಅತೀ ದೊಡ್ಡ ಕುರ್ತಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಲ್ ಬುಕ್‌ನಲ್ಲಿದೆ.

ಪಾಕಿಸ್ತಾನದ ಸ್ನೋಕರ್ ಆಟಗಾರ ನವೀನ್ ಪೆರ್ವಾನಿ ಅವರು ದೀಪಕ್ ಪೆರ್ವಾನಿಯ ಸಂಬಂಧಿಕರಾಗಿದ್ದಾರೆ. ನವೀನ್ ಪೆರ್ವಾನಿ 1971ರ ಅಕ್ಟೋಬರ್ 30ರಂದು ಜನಿಸಿದ್ದಾರೆ. 2006ರಲ್ಲಿ ಕತಾರ್‌ನ ದೋಹಾದಲ್ಲಿ ನಡೆಸಲಾದ ಏಷ್ಯನ್ ಗೇಮ್ಸ್‌ನಲ್ಲಿ ನವೀನ್ ಪೆರ್ವಾನಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು.

ಬಡತನ ನಿರ್ಮೂಲನೆಗಾಗಿ ಕಾರ್ಯನಿರ್ವಹಣೆ ಮಾಡುವ ದೀಪಕ್ ಪೆರ್ವಾನಿ, ಪಾಕಿಸ್ತಾನದ ಗ್ರಾಮೀಣ ಮಹಿಳೆಯರಿಗೆ ಸಹಾಯ ಮಾಡುವ ಎಸ್‌ಎಂಇಡಿಎಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಹಾಗೆಯೇ ಹಲವಾರು ಎನ್‌ಜಿಒಗಳಿಗೆ ಧನಸಹಾಯ ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಮಲೇಶಿಯಾದಲ್ಲಿ ನಡೆದ ಇಸ್ಲಾಮಿಕ್ ಫ್ಯಾಷನ್ ವೀಕ್‌ನ ಸ್ಥಾಪಕರು ಎಂದು ಕೂಡಾ ಹೇಳಲಾಗುತ್ತಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *