ಅದಾನಿ ಪುತ್ರನ ವೈಭವೋಪೇತ ಎಂಗೇಜ್ಮೆಂಟ್ – ಅದಾನಿ ಸೊಸೆಯಾಗುತ್ತಿರೋದು ಯಾರ್ ಗೊತ್ತಾ..!?
- ವಾಣಿಜ್ಯ ಸುದ್ದಿ
- March 15, 2023
- No Comment
- 343
ನ್ಯೂಸ್ ಆ್ಯರೋ : ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ ಪುತ್ರನ ನಿಶ್ಷಿತಾರ್ಥ ಮಾ. 12ರಂದು ಭಾನುವಾರ ನೆರವೇರಿದೆ. ಗೌತಮ್ ಅದಾನಿ ಪುತ್ರ ಜೀತ್ ಅದಾನಿ ವಜ್ರದ ವ್ಯಾಪಾರಿಯ ಪುತ್ರಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ.
ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೀತ್ ಅದಾನಿ ವಜ್ರ ಮತ್ತು ಚಿನ್ನಾಭರಣ ಉದ್ಯಮಿ ಜೈಮಿನ್ ಶಾ ಅವರ ಪುತ್ರಿ ದೀವಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೀತ್, ದೀವಾ ಎಂಗೇಜ್ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ನವಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.
ಜೀತ್ ಅದಾನಿ ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯದಲ್ಲಿ ಅಪ್ಲೈಡ್ ಸೈನ್ಸಸ್ ಪದವಿ ಪೂರ್ಣಗೊಳಿಸಿದ್ದು, ಸದ್ಯ ಅದಾನಿ ಗ್ರೂಪ್ ಫೈನಾನ್ಸ್’ನ ಉಪಾಧ್ಯಕ್ಷರಾಗಿದ್ದಾರೆ. ಜೊತೆಗೆ ಅದಾನಿ ಏರ್ಪೋರ್ಟ್ ವ್ಯವಹಾರದೊಂದಿಗೆ ಅದಾನಿ ಲ್ಯಾಬ್ಗಳನ್ನೂ ಮುನ್ನಡೆಸುತ್ತಿದ್ದಾರೆ. ಈ ಮೊದಲು ಜೀತ್ ಅದಾನಿ ಗ್ರೂಪ್’ನ ಸಿಒಒ ಆಫೀಸ್’ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು, ಗೌತಮ್ ಅದಾನಿ ಅವರ ಅಹಮದಾಬಾದ್’ನ ನಿವಾಸದಲ್ಲಿ ಪುತ್ರ ಜೀತ್ ಅದಾನಿ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ. ಆಪ್ತ ಬಳಗದವರು, ಕುಟುಂಬಸ್ಥರು ಹಾಗೂ ಸ್ನೇಹಿತರನ್ನಷ್ಟೇ ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ.