Adani Group : ಲಾಭದಲ್ಲಿ ಏರಿಕೆ ಕಂಡ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ – ಆದಾಯದಲ್ಲಿ ಎಷ್ಟು ಹೆಚ್ಚಳವಾಗಿದೆ ಗೊತ್ತಾ?

Adani Group : ಲಾಭದಲ್ಲಿ ಏರಿಕೆ ಕಂಡ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ – ಆದಾಯದಲ್ಲಿ ಎಷ್ಟು ಹೆಚ್ಚಳವಾಗಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಗ್ರೀನ್ ಎನರ್ಜಿ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆಯುತ್ತಿರುವ ಅದಾನಿ ಗ್ರೂಪ್‌ನ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸೋಮವಾರ ನಾಲ್ಕನೇ ತ್ರೈಮಾಸಿಕದ ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯ ನಿವ್ವಳ ಲಾಭವು 507 ಕೋಟಿ ರೂ.ಗೆ ತಲುಪಿದೆ. ಒಂದು ವರ್ಷಕ್ಕೂ ಹಿಂದೆ ನಿವ್ವಳ ಲಾಭವು 121 ಕೋಟಿ ರೂ. ಆಗಿತ್ತು. ಅಂದರೆ ಒಂದು ವರ್ಷದಲ್ಲೇ ಶೇ. 319ರಷ್ಟು ಜಿಗಿತ ಕಂಡಿದೆ.

2022ರ ನಾಲ್ಕನೇ ತ್ರೈಮಾಸಿಕದಲ್ಲಿ ಅದಾನಿ ಸಂಸ್ಥೆಯ ಒಟ್ಟು ಆದಾಯ(1,587 ಕೋಟಿ ರೂ.)ಕ್ಕೆ ಹೋಲಿಸಿದರೆ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 88ರಷ್ಟು ಏರಿಕೆ ಕಂಡಿದೆ. ಸಂಸ್ಥೆಯ ಆದಾಯ, ಇಬಿಐಟಿಡಿಎ ಮತ್ತು ನಗದು ಲಾಭದ ಬೆಳವಣಿಗೆಯು ಇಬಿಐಟಿಡಿಎ ಏರಿಕೆಗೆ ಕಾರಣವಾಗಿದೆ. ಶುಕ್ರವಾರ, ಬಿಎಸ್‌ಇಯಲ್ಲಿ ಅದಾನಿ ಗ್ರೀನ್ ಎನರ್ಜಿ 952 ರೂ.(ಶೇ. 3.8ರಷ್ಟು ಏರಿಕೆ)ಗೆ ತಲುಪಿದೆ.

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಪ್ರತಿಕ್ರಿಯಿಸಿ, “ನಮ್ಮ ವ್ಯವಹಾರ ಮಾದರಿಯು ಗಮನಾರ್ಹವಾಗಿ ಸ್ಥಿರತೆ ಕಾಯ್ದುಕೊಂಡಿದೆ. ಇದು ನಮ್ಮ ಬಲವಾದ ಆರ್ಥಿಕ ಕಾರ್ಯಕ್ಷಮತೆಯ ಸಾಕ್ಷಿಯಾಗಿದೆ. ಭಾರತಕ್ಕೆ ಗ್ರೀನ್ ಎನರ್ಜಿ ಪೂರೈಕೆಗೆ ಸಹಾಯ ಮಾಡಲು ನಾವು ಪ್ರಮುಖ ಪಾತ್ರ ವಹಿಸುತ್ತೇವೆ” ಎಂದಿದ್ದಾರೆ.

”ನಾವು ಈ ವರ್ಷ 2,676 ಮೆಗಾ ವ್ಯಾಟ್ ನವೀಕರಿಸಬಹುದಾದ ಬೃಹತ್ ಗ್ರೀನ್‌ಫೀಲ್ಡ್ ಸಾಮರ್ಥ್ಯವನ್ನು ಹೊಂದಿದ್ದೇವೆ. ಎಜಿಎಲ್‌ನ ಕಾರ್ಯಾಚರಣೆಯ ಸಾಮರ್ಥ್ಯವು ಐದು ವರ್ಷಗಳಲ್ಲಿ ಶೇ. 33ರಷ್ಟು ಬೆಳವಣಿಗೆ ಕಂಡಿದೆ” ಎಂದು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಎಂಡಿ, ಸಿಇಒ ವಿನೀತ್ ಎಸ್ ಜೈನ್ ತಿಳಿಸಿದ್ದಾರೆ. 2023ರ ಹಣಕಾಸು ವರ್ಷದಲ್ಲಿ ಇಂಧನ ಮಾರಾಟವು 14,880 ಮಿಲಿಯನ್ ಯುನಿಟ್‌ಗೆ ತಲುಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪರಿಣಾಮ ಬೀರಿದ ಹಿಂಡನ್‌ಬರ್ಗ್ ವರದಿ

ವರ್ಷಾರಂಭ (ಜ. 24ರಂದು)ದಲ್ಲಿ ವರದಿ ಬಿಡುಗಡೆ ಮಾಡಿದ್ದ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ಆರೋಪಿಸಿತ್ತು. ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದು, ಅದಾನಿ ಗ್ರೂಪ್‌ ವಂಚನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದಿತ್ತು.

ಅದಾನಿ ಗ್ರೂಪ್ ವಂಚನೆಯಲ್ಲಿ ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್‌ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ನೀಡಿದ ಹೇಳಿಕೆ ಸಂಚಲನ ಮೂಡಿಸಿತ್ತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *