Flying Car : ಮಾರುಕಟ್ಟೆಗೆ ಬಂದಾಯ್ತು ಹಾರುವ ಕಾರು – ಇದರ ಬೆಲೆ ಎಷ್ಟು? ಬುಕ್ಕಿಂಗ್ ಹೇಗೆ? ಇದರ ವೈಶಿಷ್ಟ್ಯತೆಗಳೇನು? ಇಲ್ಲಿದೆ ಮಾಹಿತಿ..

Flying Car : ಮಾರುಕಟ್ಟೆಗೆ ಬಂದಾಯ್ತು ಹಾರುವ ಕಾರು – ಇದರ ಬೆಲೆ ಎಷ್ಟು? ಬುಕ್ಕಿಂಗ್ ಹೇಗೆ? ಇದರ ವೈಶಿಷ್ಟ್ಯತೆಗಳೇನು? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ಸಾಕಷ್ಟು ವರ್ಷಗಳಿಂದಲೂ ಹಲವು ದೇಶಗಳು ಹಾರುವ ಕಾರನ್ನು‌ ತಯಾರಿಸಲು ಇನ್ನಿಲ್ಲದಂತೆ ಶ್ರಮ‌ವಹಿಸುತ್ತಿತ್ತು. ಈ ಬಗ್ಗೆ ಹಲವು ವರದಿಗಳು, ಮಾಹಿತಿಗಳನ್ನು‌ ನಾವು-ನೀವು ಕೇಳಿರಬಹದು. ಈಗ ಹಾರುವ ಕಾರಿನ‌ ಬಗ್ಗೆ ಇದ್ದ ಕೌತುಕಕ್ಕೆ ತೆರೆ ಎಳೆಯುವ ಸಮಯ ಬಂದಾಗಿದೆ. ಯಾಕೆಂದರೆ ಮಾರುಕಟ್ಟೆಗೆ ಅತ್ಯಾಧುನಿಕ ತಂತ್ರಜ್ಞಾನದ ಹಾರುವ ಕಾರಿನ ಆಗಮನವಾಗಿದೆ‌.

ಈ ಹಾರುವ ಕಾರು ಹೇಗಿದೆ? ಇದರ ವಿಶೇಷತೆಗಳೇನು? ಬುಕ್ಕಿಂಗ್‌ ಮಾಡುವುದು ಹೇಗೆ? ಇದರ ಬೆಲೆ ಎಷ್ಟು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.

ಹಾರುವ ಕಾರು ತಯಾರಿಕಾ ಕಂಪನಿಯು ಹೊಸ ಜೆಟ್ಸನ್ ಒನ್ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರಿನ ಬೆಲೆಗಳನ್ನು ಇತ್ತೀಚೆಗೆ ಪ್ರಕಟಿಸಿದೆ. ಗ್ರಾಹಕರು ಸುಮಾರು 6.5 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಮನೆಗೆ ಕೊಂಡೊಯ್ಯಬಹುದು. ಈ ಎಲೆಕ್ಟ್ರಿಕ್ ಕಾರಿನ ಬೆಲೆ ಅಂದಾಜು 80.19 ಲಕ್ಷ ರೂಪಾಯಿ ಎನ್ನಲಾಗಿದೆ.

ಕಂಪೆನಿಯ ಪ್ರಕಾರ, ಈ ಹಾರುವ ಕಾರನ್ನು ಹಾರಿಸುವುದು ತುಂಬಾ ಸುಲಭ. ಇದರಲ್ಲಿ, ವಾಹನದ ಎತ್ತರವನ್ನು ನಿಯಂತ್ರಿಸಲು ಮತ್ತು ಅದರ ದಿಕ್ಕನ್ನು ನಿಯಂತ್ರಿಸಲು ಜಾಯ್ಸ್ಟಿಕ್ ಲಭ್ಯವಿದೆ. ಇದಕ್ಕಾಗಿ ಅದರ ಕಾಕ್‌ಪಿಟ್‌ನಲ್ಲಿ ಎರಡು ಜಾಯ್‌ಸ್ಟಿಕ್‌ಗಳನ್ನು ಅಳವಡಿಸಲಾಗಿದೆ‌.ಇವು ಅದರ ಹಿಡಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಮೊದಲ ಬಾರಿಗೆ ಹಾರಿಸುವವರು ಕೂಡ ಯಾವುದೇ ಭಯವಿಲ್ಲದೇ ಪ್ರಯತ್ನಿಸಬಹುದು.

ಸದ್ಯ, ತಯಾರಾಗಿರುವ ಹಾರುವ ಕಾರುಗಳು ಕಾರಿನಂತೆ ಕಾಣದಿದ್ದರೂ, ಅದರ ರಚನೆಯು ಹೆಲಿಕಾಪ್ಟರ್ ಗಳಿಂದ ಪ್ರೇರಿತವಾಗಿ ಕಾಣುವ ಡ್ರೋನ್ ಮಾದರಿಯನ್ನು ಹೋಲುತ್ತದೆ. ವಾಸ್ತವವಾಗಿ, ಇದು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಾಹನವಾಗಿದೆ. ಕೆಲವು ನಿಮಿಷಗಳ ತರಬೇತಿ ಮತ್ತು ಕಂಪ್ಯೂಟರ್ ಸಹಾಯದಿಂದ ಯಾರಾದರೂ ಸುಲಭವಾಗಿ ಕಲಿತು, ಲೀಲಾಜಾಲವಾಗಿ ಹಾರಿಸಬಹುದು ಎಂದು ಕಂಪೆನಿ‌ ಹೇಳಿಕೆ ನೀಡಿದೆ.

ಹಾರುವ ಕಾರಿನ ಸಾಮರ್ಥ್ಯ?

ಇನ್ನು, ಜೆಟ್ಸನ್ ಒನ್ ನಲ್ಲಿ ನಾಲ್ಕು ಪ್ರೊಪೆಲ್ಲರ್‌ಗಳು ಲಭ್ಯವಿದ್ದು, ಗಂಟೆಗೆ ಗರಿಷ್ಟ 101 ಕಿಲೋಮೀಟರ್ ವೇಗವನ್ನು ತಲುಪಬಲ್ಲದು. ಈ ಮಟ್ಟದ ಪವರ್‌ಗಾಗಿ 88 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಸುಮಾರು 1,500 ಅಡಿ ಎತ್ತರಕ್ಕೆ ಹಾರುವ ಸಾಮರ್ಥ್ಯ ಇದರಲ್ಲಿದೆ. ಚಾರ್ಜ್ ಮುಗಿದಾಗ, LIDAR ಸೆನ್ಸಾರ್‌ಗಳನ್ನು ಬಳಸಿಕೊಂಡು eVTOL ಸ್ವಯಂಚಾಲಿತವಾಗಿ ಲ್ಯಾಂಡ್ ಆಗುವುದು ಇದರ ಮತ್ತೊಂದು ವೈಶಿಷ್ಟ್ಯತೆ.

ಜೊತೆಗೆ ಜೆಟ್ಸನ್ ಒನ್ ನಲ್ಲಿ ಕೆಲವು ವಿಶೇಷ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಅಳವಡಿಸಲಾಗಿದೆ. ಹಾರಾಟದ ಸಮಯದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ನಮಗೆ ಸಂಭವನೀಯ ಅಪಾಯ ಎದುರಾದರೆ ತಕ್ಷಣವೇ ಪಾರಾಗಲು ಇದರಲ್ಲಿ ಬ್ಯಾಲಿಸ್ಟಿಕ್ ಪ್ಯಾರಾಚೂಟ್‌ಗಳನ್ನು ಸಹ ನೀಡಲಾಗಿದೆ. ಆದರೆ ಕಂಪನಿಯು ಅದರ ಶ್ರೇಣಿ, ಚಾರ್ಜಿಂಗ್ ಸಮಯ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಇನ್ನು ಈ ಹಾರುವ ಕಾರಾದ ಜೆಟ್ಸನ್ ಒನ್ ಗಾತ್ರದ ಬಗ್ಗೆ ತಿಳಿಯುವುದಾದರೆ, 2480 ಮಿ.ಮೀ ಉದ್ದ, 1500 ಮಿ.ಮೀ ಅಗಲ, 1030 ಮಿ.ಮೀ ಎತ್ತರವಿದೆ. ಕಂಪನಿಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಹಾರುವ ಸಮಯ ಸುಮಾರು 20 ನಿಮಿಷಗಳು ಎಂದು ಹೇಳಿದೆ. ಈ ಹಾರುವ ಕಾರನ್ನು ನೋಡಿದ ಮೇಲೆ ಎಲ್ಲರ ಮನದಲ್ಲಿ ಪ್ರಶ್ನೆಯೊಂದು ಮೂಡಬಹುದು, ಇದನ್ನು ಹಾರಿಸಲು ಪೈಲಟ್ ಲೈಸೆನ್ಸ್ ಬೇಕೇ? ಆದರೆ ಈ ಕಾರು ಹಾರಿಸಲು ಯಾವುದೃ ಪೈಲೆಟ್ ಲೈಸೆನ್ಸ್ ಅಗತ್ಯವಿರುವುದಿಲ್ಲ.

ಬುಕ್ಕಿಂಗ್ ಮಾಹಿತಿ

ಈ ಹಾರುವ ಕಾರಿನ ಬುಕ್ಕಿಂಗ್ ಬಗ್ಗೆ ನೋಡುವುದಾದರೆ, ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಪ್ರಸ್ತುತ ಇದು ಪರೀಕ್ಷಾ ಹಂತದಲ್ಲಿದ್ದು, ಕಂಪನಿಯ ಯೋಜನೆಯ ಪ್ರಕಾರ ಅದರ ವಿತರಣೆಯನ್ನು ವರ್ಷದೊಳಗೆ ಪ್ರಾರಂಭಿಸಲಾಗುವುದು. ಇದುವರೆಗೆ ಗ್ರಾಹಕರಿಂದ ನೂರಾರು ಘಟಕಗಳಿಗೆ ಬುಕಿಂಗ್ ಸ್ವೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಸದ್ಯಕ್ಕೆ ಈ ಹಾರುವ ಕಾರುಗಖು ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗಲಿದ್ದು, ಕೆಲ ಸಮಯದ ನಂತರ ಭಾರತಕ್ಕೂ ಕಾಲಿಡಬಹುದು.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *