ಆಟೋ‌ ಎಕ್ಸಪೋದಲ್ಲಿ ಪ್ರದರ್ಶನಗೊಂಡಿದೆ ಟಾಟಾ ಪಂಚ್ ICNG; ವಾಹನ‌ ಪ್ರೀಯರಿಗೆ ಇಲ್ಲಿದೆ‌ ಬಂಪರ್ ಸುದ್ದಿ.

ಆಟೋ‌ ಎಕ್ಸಪೋದಲ್ಲಿ ಪ್ರದರ್ಶನಗೊಂಡಿದೆ ಟಾಟಾ ಪಂಚ್ ICNG; ವಾಹನ‌ ಪ್ರೀಯರಿಗೆ ಇಲ್ಲಿದೆ‌ ಬಂಪರ್ ಸುದ್ದಿ.

ನ್ಯೂಸ್‌ ಆ್ಯರೋ : ಇದಂತು ತಂತ್ರಜ್ಞಾನಗಳ ಯುಗ ದಿನಕ್ಕೊಂದು ತಂತ್ರಜ್ಞಾನ ಹೊಸ ಮುಖಗಳು‌ ತೆರೆದುಕೊಳ್ಳುತ್ತಲೆ ಇರುತ್ತದೆ. ವಾಹನ ಪ್ರೀಯರಂತು ಹೊಸದಾಗಿ ಮಾರುಕಟ್ಟೆಗೆ ಬರುವ ವಾಹನಗಳ ಕಡೆಗೆ ಕಣ್ಣು ನೆಟ್ಟಿರುತ್ತಾರೆ. ಕೆಲವೊಬ್ಬರು ಹೊಸ ವಾಹನಗಳನ್ನು ನಾವೇ ಮೊದಲು ರಸ್ತೆಗಿಳಿಸಬೇಕು ಎಂಬ ತವಕದಲ್ಲಿರುತ್ತಾರೆ. ಇದೀಗ ಅಂತಹ ವಾಹನ ಪ್ರೀಯರಿಗೊಂದು ಸಿಹಿ ಸುದ್ದಿ ಸಿದ್ಧವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸಪೋದಲ್ಲಿ ಟಾಟಾ ಪಂಚ್ ICNG ಅನಾವರಣಗೊಂಡು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ವಾಹನದಲ್ಲಿ ಅಂತಹದ್ದೇನಿದೆ? ಈ ವರದಿ ಓದಿ.

ಈ ವರ್ಷ ರಾಜಧಾನಿ ದೆಹಲಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಆಟೋ ಎಕ್ಸಪೋದಲ್ಲಿ ಟಾಟಾ ಪಂಚ್ ICNG ಪ್ರದರ್ಶನಗೊಂಡಿದೆ. ಈ ಕಾರು ಡ್ಯುಯಲ್ ಸಿಲಿಂಡರ್ ಹೊಂದಿದ್ದು, ಬೂಟ್ ಸ್ಪೇಸನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಈ ಮೂಲಕ ಡ್ಯುಯಲ್ ಸಿಲಿಂಡರ್ ಹೊಂದಿದ ಮೊತ್ತ ಮೊದಲ ಕಾರ್ ಎಂಬ ಹೆಗ್ಗಳಿಕೆಗೆ ಟಾಟಾ ಪಂಚ್ ICNG ಪಾತ್ರವಾಗಿದೆ.

ಪಂಚ್ iCNG ಬೂಟ್‌ನಲ್ಲಿ ‘iCNG’ ಬ್ಯಾಡ್ಜ್‌ ಹೊಂದಿದೆ. ಜೊತೆಗೆ ಪ್ರಮಾಣಿತ ಪಂವಮಚ್ ನಂತೆಯೆ ಅದೇ ಎಂಜಿನ್ ಬಳಕೆ ಮಾಡುತ್ತದೆ ಎನ್ನಲಾಗಿದೆ. ಇದರೊಂದಿಗೆ ಈ ವಾಹನವು ಸಿಎನ್‌ಜಿಯಲ್ಲಿ ಚಲಿಸುವಾಗ ಎಂಜಿನ್ 75.94 ಬಿಎಚ್‌ಪಿ ಮತ್ತು 97 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ಈ ಅತ್ಯಾಕರ್ಷಕ ಕಾರ್ ಪೆಟ್ರೋಲ್‌ನಲ್ಲಿ ಚಲಿಸುವಾಗ, 84.82 bhp ಮತ್ತು 113 Nm ಅನ್ನು ಉತ್ಪಾದಿಸುತ್ತದೆ. iCNG ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತವೆ ಎಂಬ ಮಾಹಿತಿಯಿದೆ.

ಇತ್ತೀಚೆಗೆ ಅಪಘಾತಗಳು ಹೆಚ್ಚುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ ಈ ಮೂಲಕ ಸುರಕ್ಷತೆಗೆ ಹೆಚ್ಚಿನ‌ ಒತ್ತು ನೀಡಲಾಗಿದೆ. ಸಾಮಾನ್ಯವಾಗಿ ಕಾರುಗಳಲ್ಲಿ ಒಂದೇ ಸಿಲಿಂಡರ್ ಬಳಸಲಾಗುತ್ತದೆ. ಆದರೆ ಟಾಟಾ ಮೋಟಾರ್ಸ್ ಬೂಟ್‌ನಲ್ಲಿ ಎರಡು ಸಣ್ಣ ಸಿಲಿಂಡರ್‌ಗಳನ್ನು ಬಳಸಿದೆ. ಈ ಸಿಲಿಂಡರ್‌ಗಳ ಒಟ್ಟು ಸಾಮರ್ಥ್ಯ 60 ಲೀಟರ್ ಎಂಬ ಮಾಹಿತಿಯಿದೆ. ಇನ್ನೊಂದು ವಿಶೇಷತೆಯೆಂದರೆ ಪೆಟ್ರೋಲ್‌ನಿಂದ ಸಿಎನ್‌ಜಿಗೆ ಹಾಗೂ ಸಿಎನ್‌ಜಿಯಿಂದ ಪೆಟ್ರೋಲ್‌ಗೆ ಬದಲಾವಣೆ ಮಾಡಲು, ಹೊಸ CNG ಬಟನ್ ಇದರಲ್ಲಿದೆ.

ಇನ್ನುಳಿದಂತೆ ಈ ಕಾರಿನಲ್ಲಿ ಮೈಕ್ರೋಸ್ವಿಚ್‌ ಇದ್ದು ಅದು ಇಂಧನ ತುಂಬುವಾಗ ಕಾರನ್ನು ಆಫ್ ಮಾಡುತ್ತದೆ ಆ ಮೂಲಕ ಸುರಕ್ಷತಾ ಕ್ರಮವನ್ನು ಪಾಲಿಸುತ್ತದೆ. ಇದರೊಂದಿಗೆ ಥರ್ಮಲ್ ಇನ್ಸಿಡೆಂಟ್ ಪ್ರೊಟೆಕ್ಷನ್, ಅಗ್ನಿಶಾಮಕ ರಕ್ಷಣಾ ಸಾಧನ ಮತ್ತು ಸೋರಿಕೆ ಪತ್ತೆ ವೈಶಿಷ್ಟ್ಯವನ್ನೂ ಈ ಕಾರು ಹೊಂದಿದೆ. ಸೋರಿಕೆಯನ್ನು ತಡೆಗಟ್ಟಲು ಟಾಟಾ ಮೋಟಾರ್ಸ್ ಸಿಎನ್‌ಜಿ ಕಿಟ್‌ನಲ್ಲಿ ಸುಧಾರಿತ ವಸ್ತುಗಳನ್ನು ಅಳವಡಿಸಲಾಗಿದೆ. ಧ್ವನಿ ಸಕ್ರಿಯಗೊಳಿಸುವಿಕೆಯೊಂದಿಗೆ ಎಲೆಕ್ಟ್ರಿಕ್ ಸನ್‌ರೂಫ್ ಸಹ ಈ ಕಾರಿನ ಮತ್ತೊಂದು ವೈಶಿಷ್ಟ್ಯವಾಗಿದೆ.

ಒಟ್ಟಾರೆಯಾಗಿ ಕಾರು ಪ್ರೀಯರಿಗೆ ಟಾಟಾ ಪಂಚ್ ICNG ಒಂಡು ವೈಶಿಷ್ಟ್ಯಗಳ ಆಗರವಾಗಿದ್ದು ಪ್ರತಿಯೊಬ್ಬರೂ ಇಷ್ಟ ಪಡುವಂತಹಾ ವೈವಿಧ್ಯಮಯ ತಂತ್ರಜ್ಞಾನ ಇದರಲ್ಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *