ಉದ್ಯಮಿ ಜತೆ ಓಡಾಟ: 64ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಸ್ಟಾರ್‌ ನಟಿ?

ಉದ್ಯಮಿ ಜತೆ ಓಡಾಟ: 64ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಸ್ಟಾರ್‌ ನಟಿ?

ನ್ಯೂಸ್ ಆ್ಯರೋ: ಮದುವೆ ವಿಷಯಕ್ಕೆ ಬಣ್ಣದ ಬದುಕಿನ ಮಂದಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಮದುವೆ, ಡಿವೋರ್ಸ್‌, ವಿವಾದ ಸೇರಿದಂತೆ ಅನೇಕ ವಿಚಾರಕ್ಕೆ ನೆಟ್ಟಿಗರಿಗೆ ಆಹಾರವಾಗುವುದು ಸರ್ವೇ ಸಾಮಾನ್ಯ.

ಇದೀಗ ಭಾರತೀಯ ಸಿನಿಮಾರಂಗಗ ಖ್ಯಾತ ಹಿರಿಯ ನಟಿ ತಮ್ಮ 64ನೇ ವಯಸ್ಸಿನಲ್ಲಿ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾ ರಂಗದಲ್ಲಿ ಹೆಸರು ಗಳಿಸಿದ್ದ ನಟಿ ಜಯಸುಧಾ ಅವರು ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

80ರ ದಶಕದಲ್ಲಿ ನಾಯಕಿಯಾಗಿ ತೆರೆಮೇಲೆ ಮಿಂಚಿ, ಸ್ಟಾರ್‌ ನಟರ ಜತೆಗೆ ತೆರೆಹಂಚಿಕೊಂಡಿದ್ದ ಈ ನಟಿ ಇದೀಗ ಎಲ್ಲ ಕಡೆಗಳಲ್ಲಿ ಉದ್ಯಮಿಯೊಬ್ಬರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಜಯಸುಧಾ ಅವರಿಗೆ ಈಗಾಗಲೇ ಎರಡು ಮದುವೆಯಾಗಿದೆ. ನಿರ್ಮಾಪಕ ವಡ್ಡೆ ರಮೇಶ್‌ ಅವರನ್ನು ಜಯಸುಧಾ ಅವರು ವಿವಾಹವಾಗಿದ್ದರು. ಭಿನ್ನಾಭಿಪ್ರಾಯದಿಂದ ಇವರಿಬ್ಬರು ಡಿವೋರ್ಸ್‌ ಪಡೆದುಕೊಂಡಿದ್ದರು. ಬಳಿಕ 1985ರಲ್ಲಿ ಬಾಲಿವುಡ್‌ ನಟ ಜೀತೇಂದ್ರ ಅವರ ಸಂಬಂಧಿ ನಿತಿನ್‌ ಕಪೂರ್‌ ಅವರನ್ನು ಜಯಸುಧಾ ಎರಡನೇ ಮದುವೆ ಆಗಿದ್ದರು. 2017ರಲ್ಲಿ ನಿತಿನ್‌ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಪತಿ ಇಲ್ಲವಾಗಿ ಆರು ವರ್ಷಗಳ ಬಳಿಕ ಮತ್ತೋರ್ವ ಉದ್ಯಮಿ ಜತೆ 64ನೇ ವಯಸ್ಸಿನಲ್ಲಿ ಮದುವೆ ಆಗಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ.

ಕಂಗನಾಗೆ ಪದ್ಮಶ್ರೀ ನೀಡಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಯಸುಧಾ:

“ಬಾಲಿವುಡ್‌ ನಟಿ ಕಂಗನಾ ರಣಾವತ್‌ಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ನಮ್ಮ ತಕರಾರಿಲ್ಲ. ಅವರೊಬ್ಬ ಒಳ್ಳೆಯ ನಟಿ. ಕೇವಲ 10 ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಅವರಿಗೆ ಪದ್ಮ ಅವಾರ್ಡ್‌ ಸಿಕ್ಕಿತು. ಆದರೆ, ನಾವು ಎಷ್ಟೋ ಸಿನಿಮಾ ಮಾಡಿದರೂ ಇನ್ನೂ ಸರ್ಕಾರದ ಗಮನಕ್ಕೆ ಬಂದಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದ್ದರು.

“2002ರಲ್ಲಿ ಗಿನ್ನೆಸ್‌ ರೆಕಾರ್ಡ್‌ ಮಾಡಿದ ನಿರ್ದೇಶಕಿ ವಿಜಯ ನಿರ್ಮಲಾಗೂ ಈ ಗೌರವ ದಕ್ಕಿಲ್ಲ ಎಂಬುದೇ ವಿಪರ್ಯಾಸ. ಇಡೀ ವಿಶ್ವದಲ್ಲಿಯೇ ಮಹಿಳಾ ನಿರ್ದೇಶಕಿಯೊಬ್ಬರು 44 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಎಂದರೆ ವಿಜಯ ನಿರ್ಮಲಾ ಮಾತ್ರ. ಹೀಗೆ ಸೌತ್‌ ಚಿತ್ರರಂಗವನ್ನು ಸರ್ಕಾರ ಕಡೆಗಣಿಸುವುದು ನಿಜಕ್ಕೂ ಬೇಸರದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *