ಐಶಾರಾಮಿ ಗಂಗಾ ವಿಲಾಸ್‌ ಹಡಗಿನ ಟಿಕೆಟ್ ಬೆಲೆ ಎಷ್ಟು? ಇದು ಎಲ್ಲೆಲ್ಲಿ ಸಂಚರಿಸುತ್ತದೆ? ಹಡಗಿನ ಇನ್ನಿತರ ವೈವಿಧ್ಯತೆಗಳೇನು? ಟಿಕೆಟ್ ಬುಕ್ ಮಾಡುವುದು ಹೇಗೆ?

ಐಶಾರಾಮಿ ಗಂಗಾ ವಿಲಾಸ್‌ ಹಡಗಿನ ಟಿಕೆಟ್ ಬೆಲೆ ಎಷ್ಟು? ಇದು ಎಲ್ಲೆಲ್ಲಿ ಸಂಚರಿಸುತ್ತದೆ? ಹಡಗಿನ ಇನ್ನಿತರ ವೈವಿಧ್ಯತೆಗಳೇನು? ಟಿಕೆಟ್ ಬುಕ್ ಮಾಡುವುದು ಹೇಗೆ?

ನ್ಯೂಸ್ ಆ್ಯರೋ : ಜಗತ್ತಿನ ಅತ್ಯಂತ ಉದ್ದ ಹಾಗೂ ಐಶಾರಾಮಿ ಹಡಗು ಎಂಬ ಖ್ಯಾತಿಗೆ ಪಾತ್ರವಾಗಿರುವ ಗಂಗಾ ವಿಲಾಸ್ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡು ಸಾಗರಕ್ಕಿಳಿದಿದೆ. ವಾರಣಾಸಿಯಿಂದ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನೆರವೇರಿಸಿದರು. ನದಿ ಮಾರ್ಗವಾಗಿ ಸಾಗಲಿರುವ ಈ ದುಬಾರಿ ಹಡಗು ಗಂಗಾ ವಿಲಾಸ್ ಬಾಂಗ್ಲಾದೇಶ ಮುಖೇನ ದಿಬ್ರುಗಡದಲ್ಲಿ ತನ್ನ‌ ಪ್ರಯಾಣ ಮುಗಿಸಲಿದೆ.

ಸುಮಾರು 3200 ಕಿ.ಮೀ ದೂರ ಸಾಗಲಿರುವ ಈ ಹಡಗು 51 ದಿನಗಳ‌ ಕಾಲ ಗಂಗೆ, ಬ್ರಹ್ಮಪುತ್ರ, ಹೂಗ್ಲಿ ಸೇರಿದಂತೆ ಒಟ್ಟು 27 ನದಿಗಳಲ್ಲಿ ಸಾಗಲಿದೆ. ನದಿಗಳ ಇಕ್ಕೆಲಗಳಲ್ಲಿರುವ ಸುಮಾರು 50 ಪ್ರವಾಸಿ ತಾಣಗಳಿಗೆ ಗಂಗಾ ವಿಲಾಸ್ ನಿಲ್ಲಲಿದೆ. ಗಂಗಾ ವಿಲಾಸ್ ಯಾ‌ನ ಇಂದಿನಿಂದ ಆರಂಭಗೊಂಡು ಮಾ.1ರಂದು ಮುಕ್ತಾಯಗೊಳ್ಳಲಿದೆ. 27 ನದಿಗಳಲ್ಲಿ ನೌಕಾಯಾನ ಮಾಡುವ ಮೂಲಕ ಅತ್ಯಾಕರ್ಷಕ ಸ್ಥಳಗಳನ್ನು ವೀಕ್ಷಿಸುತ್ತಾ, ಉತ್ತಮವಾದ ಆಹಾರದೊಂದಿಗೆ ಅದ್ಭುತ ಅನುಭವನ್ನು ನೀವೂ ಪಡೆಯಲು ಪ್ಯಾಕೆಜ್ ಬುಕ್ ಮಾಡಬಹುದಾಗಿದೆ‌.

ಟಿಕೆಟ್ ಮಾಡುವುದು ಹೀಗೆ.

ಜಗತ್ತಿನ ಐಶಾರಾಮಿ ಹಾಗೂ ಅತಿ ಉದ್ದನೆಯ ಹಡಗು ಎನಿಸಿಕೊಂಡಿರುವ ಗಂಗಾ ವಿಲಾಸ್ ಟ್ರಿಪಲ್ ಡಕ್ ಹೊಂದಿದೆ. ಜಲಮಾರ್ಗವಾಗಿ ಸಂಚರಿಸಲಿರುವ ಈ ಹಡಗು ಭಾರತ ಮತ್ತು ಬಾಂಗ್ಲಾದೇಶ 5 ರಾಜ್ಯಗಳ ಮೂಲಕ ಈ ಹಡಗು ಹಾದು ಹೋಗಲಿದೆ. ಈ ಹಡಗಿನಲ್ಲಿ ಪ್ರಯಾಣಿಸಲು ಬಯಸುವವರು ಅಂಟಾರಾ ಐಶಾರಾಮಿ ರಿವರ್ ಕ್ರೂಸ್‌ನ ವೆಬ್ ಸೈಟ್ ಮುಖಾಂತರ ಟಿಕೆಟ್ ಬುಕ್ ಮಾಡಬಹುದಾಗುದೆ‌. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ 25 ಸಾವಿರು ರೂ. ಖರ್ಚು ತಗುಲಲಿದೆ.

ಗಂಗಾ ಕ್ರೂಸ್ ಎಲ್ಲೆಲ್ಲಿ ಸಂಚರಿಸಲಿದೆ.

ಈ ಐಶಾರಾಮಿ‌ ಗಂಗಾ ವಿಲಾಸ್ ಐತಿಹಾಸಿಕ ಪಾರಂಪರಿಕ ಸ್ಥಳಗಳು, ಸುಂದರವಾದ ರಾಷ್ಟ್ರೀಯ ಉದ್ಯಾನವನಗಳು ಜೊತೆಗೆ ಭಾರತದ ಪ್ರಮುಖ ನಗರಗಳಾದ ಪಾಟ್ನಾ, ಕೊಲ್ಕತ್ತಾ, ಗುಹಾವಟಿ ಹಾಗೂ ಬಾಂಗ್ಲಾ ದೇಶದ ಢಾಕಾ ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ‌. ಗಂಗಾ ವಿಲಾಸ್ ವಾಯು ಯಾನವು 51 ದಿನಗಳ ಕಾಲ ನಡೆಯಲಿದ್ದು, ಪ್ರಮುಖ ನದಿಗಳಾದ ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ನದಿಗಳ ಮೇಲೆ ಹಡಗು ಹಾದು ಹೋಗಲಿದೆ.

ಈ ಹಡಗು ಕಾಶಿಯಿಂದ ಸಾರನಾಥ್ ವರೆಗೆ, ಮಜಲಿಯಿಂದ ಮಯೋಂಗ್ ವರೆಗೆ, ಸುಂದರ್ ಬನ್ಸ್ ನಿಂದ ಕಾಜಿರಂಗದವರೆಗೆ ಸಂಚರಿಸುವ ಮೂಲಕ ತನ್ನ‌ ಪ್ರಯಾಣ ಮುಂದುವರಿಸಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನಾವಲ್ ತಿಳಿಸಿದ್ದಾರೆ. 51 ದಿನಗಳ ಈ ಯಾನಕ್ಕೆ ಒಬ್ಬ ವ್ಯಕ್ತಿಗೆ 20 ಲಕ್ಷ ರೂ. ಖರ್ಚಾಗಲಿದೆ ಎನ್ನಲಾಗಿದೆ‌.

ಈ ಹಡಗು 62 ಮೀ. ಉದ್ದ, 12ಮೀಟರ್ ಅಗಲವಾಗಿದ್ದು, ಮೂರು ಡೆಕ್ ಗಳನ್ನು ಹೊಂದಿದೆ. 36 ಪ್ರವಾಸಿಗರ ಸಾಮರ್ಥ್ಯವಿರುವ 18 ಸೂಟ್ ಗಳನ್ನು ಈ ಹಡಗು ಹೊಂದಿದ್ದು ಪ್ರವಾಸಿಗರಿಗೆ ಅತ್ಯಂತ ಸುಂದರ ಅನುಭವ ನೀಡಲಿದೆ. ಇದರೊಂದಿಗೆ ಹಲವಾರು ಸೌಕರ್ಯಗಳನ್ನು ಹೊಂದಿದೆ. ಭಾರತದ ಶ್ರೀಮಂತವಾದ ಐತಿಹಾಸಿಕ, ಪಾರಂಪರಿಕ ಸ್ಥಳಗಳನ್ನು ಈ ಹಡಗಿನ ಮೂಲಕ ವೀಕ್ಷಿಸಬಹುದಾಗಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *