ಕೊರಿಯನ್ ಮೂಲದ ಹ್ಯುಂಡೈ, ಕಿಯಾ ಕಾರುಗಳಿಂದ ಭಾರತಕ್ಕೆ ಭಾರಿ ನಷ್ಟ?: ರಾಷ್ಟ್ರೀಯತೆಯ ಪಾಠ ಹೇಳಿದ ಕೇಂದ್ರ ಸಚಿವ ಪಿಯೂಶ್ ಗೋಯಲ್

ಕೊರಿಯನ್ ಮೂಲದ ಹ್ಯುಂಡೈ, ಕಿಯಾ ಕಾರುಗಳಿಂದ ಭಾರತಕ್ಕೆ ಭಾರಿ ನಷ್ಟ?: ರಾಷ್ಟ್ರೀಯತೆಯ ಪಾಠ ಹೇಳಿದ ಕೇಂದ್ರ ಸಚಿವ ಪಿಯೂಶ್ ಗೋಯಲ್

ನ್ಯೂಸ್‌ ಆ್ಯರೋ : ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಳಿಕ ಅತಿ ಹೆಚ್ಚು ಪಾಲು ಹೊಂದಿರುವ ಕಂಪನಿಗಳೆಂದರೆ ಕೊರಿಯಾ ಮೂಲದ ಹ್ಯುಂಡೇ ಮತ್ತು ಕಿಯಾ. ಅದರಲ್ಲೂ ಕಿಯಾ ಕಾರುಗಳು ಪ್ರಸ್ತುತ ಟ್ರೆಂಡಿಂಗ್​ನಲ್ಲಿದ್ದು, ಕಾರು ಕ್ಷೇತ್ರದಲ್ಲಿ ನಾಗಾಲೋಟ ಮುಂದುವರಿಸಿದೆ. ಈ ಮಧ್ಯೆ ಕೇಂದ್ರ ವಾಣಿಜ್ಯ ಮತ್ತು ಉದ್ಯಮಗಳ ಸಚಿವ ಪಿಯೂಶ್ ಗೋಯಲ್ ಈ ಕೊರಿಯನ್ ಕಂಪನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಏಷ್ಯಾ ಆರ್ಥಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡು ದೇಶಗಳ ನಡುವೆ ಇರುವ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಕೊರಿಯನ್ ಕಂಪನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಅವರ ​ಪರಿಣಾಮವಾಗಿ ಸೌತ್ ಕೊರಿಯಾ ಜೊತೆ ಭಾರತದ ದ್ವಿಪಕ್ಷೀಯ ವ್ಯಾಪಾರ ಅಂತರ ಕೋಟ್ಯಂತರ ಡಾಲರ್​ಗಳಷ್ಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಿಯಾ ಮತ್ತು ಹ್ಯುಂಡೈನಂತಹ ಕೊರಿಯನ್ ಕಂಪನಿಗಳು ಯಥೇಚ್ಛವಾಗಿ ಆಮದು ಮಾಡಿಕೊಳ್ಳಲು ಈ ಎಫ್​ಟಿಎ ಅನುವು ಮಾಡಿಕೊಟ್ಟಿದೆ. ಕೊರಿಯಾ ಮತ್ತು ಜಪಾನ್ ದೇಶದೊಂದಿಗೆ ನಮಗಿರುವ ಮುಕ್ತ ವ್ಯಾಪಾರ ಒಪ್ಪಂದದ ಲಾಭವನ್ನು ಪಡೆಯುತ್ತಿರುವ ಕೊರಿಯನ್ ವಾಹನ ಕಂಪನಿಗಳು ಯಥೇಚ್ಛವಾಗಿ ಆಮದು ಮಾಡಿಕೊಳ್ಳುತ್ತಿವೆ. 50 ಬಿಲಿಯನ್ ಅಥವಾ 100 ಬಿಲಿಯನ್ ಡಾಲರ್​ನ ಸಣ್ಣ ಹೂಡಿಕೆಯೇ ಭಾರತಕ್ಕೆ ಕೊರಿಯಾ ಮತ್ತಿತರ ದೇಶಗಳೊಂದಿಗೆ ಕೋಟ್ಯಂತರ ಡಾಲರ್​ನಷ್ಟು ವ್ಯಾಪಾರ ಅಂತರ ಸೃಷ್ಟಿಯಾಗುವಂತೆ ಮಾಡಿದೆ ಎಂದು ಹೇಳಿದರು.

ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಎರಡು ದೇಶಗಳ ಮಧ್ಯೆ ಯಾವುದೇ ನಿಯಂತ್ರಣ ವ್ಯವಸ್ಥೆಯ ತಡೆ ಇಲ್ಲದೇ ಸರಕಿನ ಮುಕ್ತ ವಹಿವಾಟು ನಡೆಯಬೇಕು. ಹಾಗಾದರೆ, ಕೊರಿಯಾ ಮಾರುಕಟ್ಟೆಗೆ ಭಾರತ ಮುಕ್ತವಾಗಿ ಉತ್ಪನ್ನಗಳನ್ನು ರಫ್ತು ಮಾಡಬಹುದಲ್ಲ ಎಂಬ ಪ್ರಶ್ನೆ ಬರಬಹುದು. ಈ ಬಗ್ಗೆ ಬೆಳಕು ಚೆಲ್ಲಿದ ಪಿಯೂಶ್ ಗೋಯಲ್, ಜಪಾನ್ ಮತ್ತು ಕೊರಿಯಾದಲ್ಲಿರುವ ರಾಷ್ಟ್ರೀಯತೆಯ ಭಾವನೆಯ ಉದಾಹರಣೆ ಕೊಟ್ಟರು.

ನಮ್ಮ ಉತ್ಪನ್ನಗಳಿಗೆ ಕೊರಿಯಾದ ಮಾರುಕಟ್ಟೆಗಳು ತೆರೆದುಕೊಳ್ಳುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆದರೆ, ಇದರಲ್ಲಿ ಎಷ್ಟು ಅಗಾಧ ವ್ಯತ್ಯಾಸ ಇದೆ ನೋಡಿ. ಭಾರತದಿಂದ ಕೊರಿಯಾಗೆ ಉಕ್ಕಿನ ರಫ್ತಿಗೆ ಯಾವುದೇ ತಡೆ ಇಲ್ಲ. ಜಪಾನ್ ಕೂಡ ತಡೆಯುವುದಿಲ್ಲ. ಆದರೆ, ಈ ದೇಶಗಳ ಮಾರುಕಟ್ಟೆಗಳಲ್ಲಿ ನಾವು ಒಂದು ಟನ್ ಉಕ್ಕನ್ನೂ ಮಾರಲು ಆಗುವುದಿಲ್ಲ. ಕೊರಿಯಾ ಮತ್ತು ಜಪಾನ್​ನಲ್ಲಿ ವಿದೇಶೀ ಉತ್ಪನ್ನಗಳಿಗಿಂತ ಅಲ್ಲಿನ ದೇಶೀಯ ಉತ್ಪನ್ನಗಳಿಗೆ ಜನರು ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದನ್ನು ಸಚಿವರು ಒತ್ತಿ ಹೇಳಿದರು.

ಇದೇ ವೇಳೆ, ಪಿಯೂಶ್ ಗೋಯಲ್ ಅವರು ಕೇಂದ್ರದ ಮಹತ್ವಾಕಾಂಕ್ಷಿ ಪಿಎಲ್​ಐ ಯೋಜನೆಯ ಮಿತಿ ಬಗ್ಗೆ ಮಾತನಾಡಿದರು. ಉತ್ಪಾದನೆ ಆಧಾರಿತ ಕೊಡುಗೆ ಯೋಜನೆ (ಪಿಎಲ್​ಐ) ನಮ್ಮ ತಯಾರಿಕಾ ವಲಯಕ್ಕೆ ಒಂದಷ್ಟು ಮಟ್ಟದವರೆಗೂ ಪುಷ್ಟಿ ನೀಡಬಹುದು ಅಷ್ಟೇ. ಆದರೆ, ಇವು ಗ್ರಾಹಕರಿಗೆ ಒಳ್ಳೆಯ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಿ ಸ್ವಾವಲಂಬಿಗಳಾಗುವುದು ಅಗತ್ಯ ಇದೆ ಎಂದು ತಿಳಿಸಿದರು.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *