ಯೂಟ್ಯೂಬ್‌ನಲ್ಲಿ ಜಾಹೀರಾತು ಕಿರಿಕಿರಿ ಹೆಚ್ಚಾಗಿದೆಯೇ?: ಈ ಟಿಪ್ಸ್‌ ಬಳಸಿ, ಅಡೆತಡೆಯಿಲ್ಲದೆ ವಿಡಿಯೊ ವಿಕ್ಷಿಸಿ

ಯೂಟ್ಯೂಬ್‌ನಲ್ಲಿ ಜಾಹೀರಾತು ಕಿರಿಕಿರಿ ಹೆಚ್ಚಾಗಿದೆಯೇ?: ಈ ಟಿಪ್ಸ್‌ ಬಳಸಿ, ಅಡೆತಡೆಯಿಲ್ಲದೆ ವಿಡಿಯೊ ವಿಕ್ಷಿಸಿ

ನ್ಯೂಸ್‌ ಆ್ಯರೋ : ಜನರಿಗೆ ಮನರಂಜನೆ ಮತ್ತು ಮಾಹಿತಿಯನ್ನು ಒದಗಿಸುವ ಅಪ್ಲಿಕೇಶನ್‌ಗಳಲ್ಲಿ ಯೂಟ್ಯೂಬ್‌ ಪ್ರಮುಖವಾದುದು. ಇದನ್ನು ಒಂದು ರೀತಿಯಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ ಎಂದರೂ ತಪ್ಪಾಗುವುದಿಲ್ಲ. ಯೂಟ್ಯೂಬ್​ನಲ್ಲಿ ಎಷ್ಟೋ ಜನರು ತನ್ನದೇ ಆದ ಚಾನೆಲ್​ ಕ್ರಿಯೇಟ್​ ಮಾಡಿಕೊಂಡು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ವಿಡಿಯೊ ನೋಡುವವರಿಗೆ ಜಾಹೀರಾತಿನ ಕಿರಿಕಿರಿ ಜಾಸ್ತಿ.

ಯೂಟ್ಯೂಬ್​ನಲ್ಲಿ ಯಾವುದೇ ವಿಡಿಯೊ ನೋಡುವಾಗಲೂ ಜಾಹೀರಾತು ಬಂದೇ ಬರುತ್ತದೆ. ಆದರೆ, ಈ ಜಾಹೀರಾತು ಬಾರದಂತೆ ತಡೆಯುವುದು ಹೇಗೆ ಎಂದು ಎಷ್ಟೋ ಜನರು ಯೋಚನೆ ಮಾಡುತ್ತಿರುತ್ತಾರೆ. ಈ ತಂತ್ರಗಾರಿಕೆಯಿಂದ ಯೂಟ್ಯೂಬ್​ನಲ್ಲಿ ಜಾಹೀರಾತು ಇಲ್ಲದೆಯೇ ತಮಗೆ ಬೇಕಾದ ವಿಡಿಯೊಗಳನ್ನು ಆರಾಮದಲ್ಲಿ ವೀಕ್ಷಿಸಬಹುದಾಗಿದೆ.

ಯೂಟ್ಯೂಬ್​ನಲ್ಲಿ ಹೆಚ್ಚು ಜಾಹೀರಾತು ಬರುತಿರುವುದರಿಂದ ಕಿರಿಕಿರಿಯಾಗಿದ್ರೆ ಯೂಟ್ಯೂಬ್ ಬದಲಿಗೆ ಬೇರೆ ಪರ್ಯಾಯ ಆ್ಯಪ್​ಗಳನ್ನು ಬಳಕೆ ಮಾಡಬಹುದು. ಈ ಆ್ಯಪ್​ಗಳಲ್ಲಿ ಜಾಹೀರಾತು ಇಲ್ಲದೆದೆ ಆರಾಮವಾಗಿ ವಿಡಿಯೊ, ಸಿನಿಮಾಗಳನ್ನು ನೋಡಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಈ ಆ್ಯಪ್‌ಗಳನ್ನು ಡೌನ್​ಲೋಡ್​ ಮಾಡಿಕೊಂಡು ಜಾಹೀರಾತು ಮುಕ್ತವಾಗಿ ಯೂಟ್ಯೂಬ್​ನಲ್ಲಿರುವಂತಹ ವಿಡಯೊಗಳನ್ನು ವೀಕ್ಷಿಸಬಹುದು. ಇನ್ನು ಈ ಆ್ಯಪ್​ಗಳಲ್ಲಿ ಡೌನ್​ಲೋಡ್​ ಆಯ್ಕೆಯನ್ನೂ ನೀಡಿದ್ದು, ಈ ಮೂಲಕ ನೆಟ್​ವರ್ಕ್​​ ಇಲ್ಲದಿದ್ದರೆ ಅಥವಾ ಇಂಟರ್ನೆಟ್​ ಕನೆಕ್ಷನ್​ ಇಲ್ಲದ ಸಂದರ್ಭಗಳಲ್ಲಿ ಡೌನ್​ಲೋಡ್​ ಮಾಡಿದ್ದರೆ ಜಾಹೀರಾತು ಇಲ್ಲದೆಯೇ ಆ ವಿಡಿಯೊಗಳನ್ನೂ ನೋಡಬಹುದು.

ಇನ್ನು ನೀವು ಬ್ರೌಸರ್​ನಲ್ಲಿ ವಿಡಿಯೊಗಳನ್ನು ನೋಡುತ್ತೀರಿ ಎಂದಾದರೆ ನೀವು ಆ್ಯಡ್​ ಬ್ಲಾಕರ್​ ಟೆಕ್ನಾಲಜಿಯನ್ನು ಬಳಸಿದರೆ ಜಾಹೀರಾತು ಇಲ್ಲದೆ ಯೂಟ್ಯೂಬ್​ ಅನ್ನು ವೀಕ್ಷಿಸಬಹುದು. ಇದಕ್ಕಾಗಿ ಆ್ಯಡ್‌​ ಬ್ಲಾಕ್​, ಸ್ಟಾಪ್​ ಆ್ಯಡ್‌​ಗಳಂತಹ​ ಬ್ಲಾಕರ್​​ಗಳು ಬ್ರೌಸರ್​ನಲ್ಲಿ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು.

ಆ್ಯಡ್‌ ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆ್ಯಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೊದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voila ದಂತಹವುಗಳನ್ನು ಟೈಪ್​ ಮಾಡುವ ಮೂಲಕ ಜಾಹೀರಾತು ಇಲ್ಲದೆಯೇ ಯೂಟ್ಯೂಬ್ ವಿಡಿಯೊಗಳನ್ನು ನೋಡಬಹುದು.

ಅಂತೆಯೇ ಕೇವಲ ಒಂದು ಡಾಟ್​ ಹಾಕುವುದರಿಂದ ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯಾವುದೇ ಯೂಟ್ಯೂಬ್‌ ಲಿಂಕ್‌ ಅನ್ನು ಓಪನ್​ ಮಾಡಿದಾಗ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ ಪ್ಲೇ ಮಾಡಿದರೆ, ಆ ವಿಡಿಯೊದಲ್ಲಿ ಬರುವಂತಹ ಎಲ್ಲಾ ಜಾಹೀರಾತುಗಳು ತನ್ನಷ್ಟಕ್ಕೇ ಬ್ಲಾಕ್ ಆಗುತ್ತದೆ. ಆದರೆ, ಈ ಟ್ರಿಕ್ ಕೇವಲ ಡೆಸ್ಕ್​ಟಾಪ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.

ಚಂದಾದಾರಿಕೆ ಆಯ್ಕೆ: ಯೂಟ್ಯೂಬ್​ನಲ್ಲಿ ಜಾಹೀರಾತಿನ ಕಿರಿಕಿರಿ ಬೇಡವೇ ಬೇಡ ಎನ್ನುವವರು ಯೂಟ್ಯೂಬ್​ ಪ್ರೀಮಿಯಂ ಸಬ್​​ಸ್ಕ್ರಿಪ್ಷನ್​ ಅನ್ನು ಖರೀದಿ ಮಾಡಬಹುದು. ಈ ಮೂಲಕ ಜಾಹೀರಾತು ಮುಕ್ತ ಸೌಲಭ್ಯ ಮಾತ್ರವಲ್ಲದೇ ಇನ್ನೂ ಹಲವಾರು ಫೀಚರ್ಸ್​ಗಳು ದೊರೆಯಲಿದೆ. ಈ ಪ್ರೀಮಿಯಂ ಪಡೆದರೆ ಯೂಟ್ಯೂಬ್‌ ಮ್ಯೂಸಿಕ್‌ನ ಅಪ್ಲಿಕೇಶನ್​ನಲ್ಲಿರುವ ಎಲ್ಲಾ ಹಾಡುಗಳನ್ನು ಕೇಳಬಹುದು. ಯೂಟ್ಯೂಬ್‌ ಒರಿಜಿನಲ್ಸ್‌ ಸೀರಿಸ್​ನಲ್ಲಿರುವ ಸೀರಿಯಲ್​ಗಳನ್ನು ವೀಕ್ಷಿಸಬಹುದು.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *