Global NCAP ಕ್ರ್ಯಾಶ್ ಟೆಸ್ಟ್ ನಲ್ಲಿ ವ್ಯಾಗನ್ ಆರ್, ಆಲ್ಟೋ K10 ಕಳಪೆ ಪ್ರದರ್ಶನ – ಈ ಎರಡೂ ಕಾರ್ ಗಳು ಪಡೆದ ಅಂಕವೆಷ್ಟು ಗೊತ್ತಾ…!?

Global NCAP ಕ್ರ್ಯಾಶ್ ಟೆಸ್ಟ್ ನಲ್ಲಿ ವ್ಯಾಗನ್ ಆರ್, ಆಲ್ಟೋ K10 ಕಳಪೆ ಪ್ರದರ್ಶನ – ಈ ಎರಡೂ ಕಾರ್ ಗಳು ಪಡೆದ ಅಂಕವೆಷ್ಟು ಗೊತ್ತಾ…!?

ನ್ಯೂಸ್ ಆ್ಯರೋ : ಸುರಕ್ಷತೆ ದೃಷ್ಟಿಯಿಂದ ನಡೆಸಲಾದ ಗ್ಲೋಬಲ್ ಎನ್‌ಸಿಎಪಿ(Global NCAP) ಕ್ರ್ಯಾಶ್ ಟೆಸ್ಟ್‌(Crash Test)ಪರೀಕ್ಷೆಯಲ್ಲಿ, ಭಾರತೀಯ ಕಂಪೆನಿಯಾದ ಮಾರುತಿ ಸುಜ಼ುಕಿಯ ವ್ಯಾಗನ್ ಆರ್ (Wagon R) ಮತ್ತು ಆಲ್ಟೊ K10 (Alto K10) ಮಾಡೆಲ್ ಗಳು ಕಳಪೆ ಪ್ರದರ್ಶನ ತೋರಿ ಭಾರೀ ನಿರಾಸೆ ಮೂಡಿಸಿದೆ.

ವ್ಯಾಗನ್ ಆರ್

ಗ್ಲೋಬಲ್ ಎನ್‌ಸಿಎಪಿ ‘ವ್ಯಾಗನ್ ಆರ್’ ಕಾರನ್ನು ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದ (Safercarsforindia) ಅಡಿಯಲ್ಲಿ ಕ್ರಾಶ್ ಟೆಸ್ಟ್ ನಡೆಸಿತ್ತು. ಈ ಟೆಸ್ಟ್ ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಕೇವಲ ಒಂದು ಸ್ಟಾರ್ ರೇಟಿಂಗ್ ಪಡೆದಿದೆ.ಹಾಗೆಯೇ ಮಕ್ಕಳ ‌ರಕ್ಷಣೆಯಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿಕೊಂಡಿದೆ.‌ ಈ ಹಿಂದೆ 2019ರಲ್ಲಿ ಇದೇ ಕಾರನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಆಗ ಈ ಕಾರ್ 2 ಸ್ಟಾರ್ ರೇಟಿಂಗ್ ಪಡೆದಿತ್ತು.

ವ್ಯಾಗನ್ ಆರ್ ಕಾರು, ಚಾಲಕ ಮತ್ತು ಇತರ ಪ್ರಯಾಣಿಕರ ತಲೆ ಹಾಗೂ ಕುತ್ತಿಗೆಯ ರಕ್ಷಣೆಯಲ್ಲಿ ಉತ್ತಮ ಕ್ಷಮತೆ ತೋರಿದೆ. ಆದರೆ ಚಾಲಕನ ಎದೆಯ ಭಾಗದ ಸುರಕ್ಷತೆಯಲ್ಲಿ ತೀರಾ ದುರ್ಬಲ ಪ್ರದರ್ಶನವನ್ನು ತೋರಿರುವುದರಿಂದ, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ವ್ಯಾಗನ್ ಆರ್ 34 ಕ್ಕೆ ಕೇವಲ 19.69 ಅಂಕಗಳನ್ನಷ್ಟೇ ಪಡೆದುಕೊಂಡಿತು.

ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ (ISOFIX Child Seat Mount) ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ (Child Restraint System) ಇಲ್ಲದಿರುವುದರಿಂದ ಮಕ್ಕಳ ಸುರಕ್ಷತೆ ವಿಭಾಗದಲ್ಲಿ ವ್ಯಾಗನ್ ಆರ್ ಸೊನ್ನೆ ರೇಟಿಂಗ್ ಪಡೆದುಕೊಂಡಿದೆ. ಅಂದರೆ 49ರಲ್ಲಿ ಕೇವಲ 3.40 ಅಂಕಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಆಲ್ಟೊ K10

ಗ್ಲೋಬಲ್ ಎನ್‌ಸಿಎಪಿ ಆಲ್ಟೊ K10 ಕಾರನ್ನೂ ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಿದೆ. ಈ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವ್ಯಾಗನ್ ಆರ್ ಕಾರಿಗಿಂತ ಕೊಂಚ ಉತ್ತಮ ಪ್ರದರ್ಶನ ನೀಡಿದ್ದು 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ಆಲ್ಟೊ K10 34ಕ್ಕೆ 21.67 ಅಂಕಗಳನ್ನು ಗಳಿಸಿದೆ. ಹಾಗೆಯೇ ಈ ಕಾರಿನಲ್ಲೂ ಕೂಡ ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಇಲ್ಲದ ಕಾರಣ ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ 49ಕ್ಕೆ 3.52 ಅಂಕಗಳನ್ನಷ್ಟೇ ಗಳಿಸಿಕೊಂಡಿದೆ. ಮಾರುತಿ ಸುಜುಕಿ ಕಂಪೆನಿಯು ಪ್ರಯಾಣಿಕರ ಸುರಕ್ಷತೆಗೆ ಮೊದಲ‌ ಆದ್ಯತೆಯನ್ನು ನೀಡುವ ಅನಿವಾರ್ಯತೆ ಇದೆಯೆಂಬುದು ಈ ಟೆಸ್ಟ್ ಮೂಲಕ ಸಾಬೀತಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *