5 ನಿಮಿಷದಲ್ಲಿ ಕೈ ಸೇರುತ್ತೆ ಡಿಜಿಟಲ್ ವೋಟರ್ ಐಡಿ – ಅನುಸರಿಸಬೇಕಾದ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ

5 ನಿಮಿಷದಲ್ಲಿ ಕೈ ಸೇರುತ್ತೆ ಡಿಜಿಟಲ್ ವೋಟರ್ ಐಡಿ – ಅನುಸರಿಸಬೇಕಾದ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ

ನ್ಯೂಸ್‌ ಆ್ಯರೋ: ಸ್ಮಾರ್ಟ್‌ ಫೋನ್‌ನಿಂದಾಗಿ ಇಂದು ಎಲ್ಲ ಕೆಲಸವೂ ಸುಲಭವಾಗಿ ನಡೆದುಹೋಗುತ್ತದೆ. ಮೊಬೈಲ್‌ವೊಂದು ಇದ್ದರೆ ಬ್ಯಾಂಕ್ ವ್ಯವಹಾರದಿಂದ ಹಿಡಿದು ನಮ್ಮ ಮುಖ್ಯ ದಾಖಲೆಗಳನ್ನು ಮೊಬೈಲ್‌ನಲ್ಲೇ ಸಂಗ್ರಹಿಸಬಹುದಾಗಿದೆ.

ಇದೀಗ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ವೋಟ್‌ ಮಾಡುವ ಅರ್ಹತೆಯುಳ್ಳವರು ತಮ್ಮ ಅಧಿಕೃತ ವೋಟರ್ ಗುರುತಿನ ಚೀಟಿಯನ್ನು ಹೊಂದುವುದು ತುಂಬಾನೇ ಮುಖ್ಯ. ಹಿಂದೆಲ್ಲ ವೋಟರ್ ಐಡಿ ಕಳೆದು ಹೋದರೆ ಮತ ಚಲಾವಣೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಇದೀಗ ಮೊಬೈಲ್‌ನಿಂದಾಗಿ ನಮ್ಮ ಡಿಜಿಟಲ್ ವೋಟರ್‌ ಐಡಿಯನ್ನು 5 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಡಿಜಿಟಲ್ ಗುರುತಿನ ಚೀಟಿ ಪಡೆದುಕೊಳ್ಳಲು ಇದನ್ನು ಅನುಸರಿಸಿ:

ಮೊದಲು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್​ಸೈಟ್​ https://eci.gov.in/e-epic/ ಗೆ ಭೇಟಿ ನೀಡಬೇಕು. ಈ ಪೋರ್ಟಲ್ ಮೂಲಕ ಹೊಸ ಮತದಾರರ ಹೆಸರನ್ನು ನೋಂದಾಯಿಸಬಹುದು. ಚುನಾವಣಾ ಗುರುತಿನ ಚೀಟಿಯ ವಿಳಾಸವನ್ನು ಅಪ್​ಡೇಟ್ ಮಾಡಲು, ಬದಲಾಯಿಸಲು ಮತ್ತು ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಲು ಈ ಪೋರ್ಟಲ್‌ನಿಂದ ಸಾಧ್ಯವಿದೆ.

ನೀವು ಇದೇ ಮೊದಲು ಈ ಪೋರ್ಟಲ್​ ಬಳಸುತ್ತಿದ್ದರೆ, ಫೋನ್ ನಂಬರ್​ ಮೂಲಕ ರಿಜಿಸ್ಟರ್ ಆಗಿ. ಒಮ್ಮೆ ನೀವು ಪೋರ್ಟಲ್‌ಗೆ ಎಂಟ್ರಿ ಕೊಟ್ಟಾಗ, ಡೌನ್‌ಲೋಡ್ ಇ-ಎಪಿಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ EPIC ಸಂಖ್ಯೆಯನ್ನು ಅಲ್ಲಿ ನಮೂದಿಸಿ, ಇದು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಪ್ರಿಂಟ್ ಆಗಿರುವ 10-ಅಂಕಿಯ ವಿಶಿಷ್ಟ ID ಆಗಿದೆ.

ಇ-ಎಪಿಕ್ ಅಥವಾ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಲು, ನಿಮ್ಮ ಮೊಬೈಲ್​ ನಂಬರ್ ಕಡ್ಡಾಯವಾಗಿ ನಿಮ್ಮ ವೋಟರ್​​ ಐಡಿಗೆ ಲಿಂಕ್ ಆಗಿರಲೇಬೇಕು. ಆಗಿಲ್ಲವಾದರೆ, ಮೊಬೈಲ್ ನಂಬರ್​ ಲಿಂಕ್​ನ್ನೂ ಅದೇ ವೆಬ್‌ಸೈಟ್‌ನಲ್ಲಿ ಮಾಡಬಹುದು.

ನಿಮ್ಮ ಮೊಬೈಲ್ ನಂಬರ್​ನ್ನು ವೋಟರ್ ಐಡಿಗೆ ಲಿಂಕ್ ಮಾಡಲು, ಭಾರತೀಯ ಚುನಾವಣಾ ಆಯೋಗದ ಪೋರ್ಟಲ್‌ನ ಮುಖಪುಟಕ್ಕೆ (https://www.nvsp.in/) ಹೋಗಿ. ಮುಖ ಪುಟದಲ್ಲಿ ಕಾಣುವ ಫಾರ್ಮ್‌ಗಳ ಮೇಲೆ ಕ್ಲಿಕ್ ಮಾಡಿ. ಮುಂದೆ, ಫಾರ್ಮ್ 8 ಅನ್ನು ಕ್ಲಿಕ್ ಮಾಡಿ ಮತ್ತು ನೀವು ಕುಟುಂಬದ ಸದಸ್ಯರ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಬೇಕೆಂದರೆ ಸೆಲ್ಫ್ / ಫ್ಯಾಮಿಲಿ ಆಯ್ಕೆಯನ್ನು ಆರಿಸಿ.

ಬಳಿಕ ತಿದ್ದುಪಡಿಗೆಂದೇ ಒಂದು ಆಯ್ಕೆ ಇರುತ್ತದೆ. ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ‘The Correction of Entries’ ಮೇಲೆ ಕ್ಲಿಕ್ ಮಾಡಿ. ನಿಮ್ಮ ವೋಟರ್​ ಐಡಿಗೆ ಲಿಂಕ್ ಮಾಡಬೇಕೆಂದಿರುವ ಮೊಬೈಲ್​ ನಂಬರ್​ನ್ನು ಅಲ್ಲಿ ನಮೂದಿಸಿ. ನಿಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ನಿಮ್ಮ ವೋಟರ್​ ಐಡಿಯೊಂದಿಗೆ ಫೋನ್ ನಂಬರ್​ನ್ನು ಲಿಂಕ್ ಮಾಡಲು ಪೋರ್ಟಲ್ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ.

ವೋಟರ್ ಐಡಿಗೆ ಮೊಬೈಲ್​ ನಂಬರ್ ಲಿಂಕ್ ಮಾಡಿದ ನಂತರ, ವೆಬ್‌ಸೈಟ್ https://eci.gov.in/e-epic/ ಗೆ ಹೋಗಿ ಮತ್ತು EPIC ಸಂಖ್ಯೆಯ ವಿವರಗಳನ್ನು ನಮೂದಿಸಿ & ಪರಿಶೀಲಿಸಿ. ಬಳಿಕ OTP ಬಳಸಿಕೊಂಡು ನಿಮ್ಮ ಮೊಬೈಲ್​ ನಂಬರ್​ನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಲು ಡೌನ್‌ಲೋಡ್ e-EPIC ಅನ್ನು ಕ್ಲಿಕ್ ಮಾಡಿ. ಫಾರ್ಮ್ 8 ಅನ್ನು ಭರ್ತಿ ಮಾಡುವ ಮೂಲಕ ನೀವು ಅದೇ ವೆಬ್‌ಸೈಟ್‌ನಿಂದ ನಕಲಿ ವೋಟರ್ ಐಡಿಯನ್ನು ಪಡೆಯಬಹುದು, ಅದನ್ನು ನಿಮ್ಮ ವೋಟರ್​ ಐಡಿಯಲ್ಲಿ ಇರುವ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಇದೀಗ ಈ ಸುಲಭ ವಿಧಾನದಲ್ಲಿ ನಿಮ್ಮ ಗುರುತಿನ ಚೀಟಿಯ ಬದಲಾವಣೆ ಹಾಗೂ ಹೊಸ ಐಡಿಯನ್ನು ಪಡೆಯಬಹುದಾಗಿದ್ದು, ಅಗತ್ಯ ಇರುವವರು ಈ ವಿಧಾನದ ಲಾಭ ಪಡೆದುಕೊಳ್ಳಬಹುದು.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *