11,000 ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜು಼ಕಿ – ಅಸಲಿಗೆ ಆಗಿದ್ದೇನು ಗೊತ್ತಾ!

11,000 ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜು಼ಕಿ – ಅಸಲಿಗೆ ಆಗಿದ್ದೇನು ಗೊತ್ತಾ!

ನ್ಯೂಸ್ ಆ್ಯರೋ : ಭಾರತೀಯ ವಾಹನೋದ್ಯಮ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ್ದ, ಮಾರುತಿ ಸುಜುಕಿಯ ‘ಗ್ರ್ಯಾಂಡ್ ವಿಟಾರಾ’ ಕಾರುಗಳನ್ನು ಕಂಪೆನಿ ಹಿಂಪಡೆಯಲು ಮುಂದಾಗಿದೆ. ಈಗಾಗಲೇ, ದೇಶದಾದ್ಯಂತ ವಿತರಿಸಿರುವ ಒಟ್ಟು 11,000 ಕಾರುಗಳನ್ನು‌ ಕಂಪೆನಿ ಹಿಂಪಡೆಯಲು ನಿರ್ಧರಿಸಿದೆ. ಇದಕ್ಕೆ ಕಾರಣ ಏನು? ಎಂಬ ಪ್ರಶ್ನೆಗೆ ಇಲ್ಲಿದೆ‌ ಉತ್ತರ.

ಕಾರುಗಳನ್ನು ಹಿಂಪಡೆಯುವುದ್ಯಾಕೆ?

ಪ್ರಸ್ತುತ, ಎರಡನೇ ಬಾರಿಗೆ ಕಂಪೆನಿತಯು ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಹಿಂಪಡಯಲು ನಿರ್ಧರಿಸಿದೆ‌. ಈ ಹಿಂದೆ ಕಾರ್ ನಲ್ಲಿ‌ ಕಾಣಿಸಿದ ಏರ್ ಬ್ಯಾಗ್ ದೋಷದಿಂದಾಗಿ ಹಿಂಪಡೆಯಿವಿಕೆಯನ್ನು‌ ಘೋಷಿಸಿತ್ತು.‌ ಇದೀಗ, ಇದೇ ಕಾರಿನ ಸೀಟ್ ಬೆಲ್ಟ್ ಧರಿಸುವಾಗ ಬ್ರಾಕೆಟ್ ನಲ್ಲಿ ಕಂಡು ಬರುತ್ತಿರುವ ದೋಷದಿಂದಾಗಿ, 2022 ರ ಆಗಸ್ಟ್ 8 ಹಾಗೂ 2022ರ ನವೆಂಬರ್ 15ರ ನಡುವೆ ತಯಾರಿಸಲಾದ ಒಟ್ಟು 11,177 ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಕಂಪೆನಿಯ ಕಾರುಗಳಲ್ಲಿ ಯಾವುದೇ ದೋಷಗಳು‌ ಕಂಡು ಬರದಂತೆ ವಾಹನ ತಯಾರಿಸುವುದಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಗ್ರಾಂಡ್ ವಿಟಾರಾ ಕಾರು ಹೇಗಿದೆ?

ಮಾರುತಿ ಸುಜುಕಿ ಕಂಪೆನಿ‌ ಇತ್ತೀಚೆಗೆ ಹೊರತಂದ ಗ್ರಾಂಡ್ ವಿಟಾರಾ ಅದ್ಭುತ ವಿನ್ಯಾಸವನ್ನು ಹೊಂದಿದೆ. ಕಾರಿನ ಮುಂಭಾಗದ ಸ್ಟೈಲಿಂಗ್ ಹೆಚ್ಚು ಗಮನ ಸೆಳೆಯುತ್ತದೆ. ಮುಂಭಾಗವು ಕ್ರೋಮ್-ಲೇಪಿತ ಹೆಕ್ಸಾಗೊನಲ್ ಗ್ರಿಲ್, ಮೂರು-ಪಾಯಿಂಟ್ LED DRL ಗಳು, ಹೆಡ್‌ಲ್ಯಾಂಪ್ ಕ್ಲಸ್ಟರ್, ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್-ಲ್ಯಾಂಪ್ ಅನ್ನು ಒಳಗೊಂಡಿದೆ. ಜೊತೆಗೆ, ಟೈಲ್‌ಗೇಟ್‌ನಲ್ಲಿ ಅಗಲದ ಎಲ್ಇಡಿ ಲೈಟ್ ಬಾರ್ ಆಕರ್ಷಕವಾಗಿದೆ. ಇನ್ನು‌ ಕಾರಿನ ಒಳಭಾಗಲ್ಲಿ, ಗ್ರ್ಯಾಂಡ್ ವಿಟಾರಾ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ‌. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸಪೋರ್ಟ್ ಮಾಡುತ್ತದೆ. ಜೊತೆಗೆ, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್, ಟಾಪ್-ಸ್ಪೆಕ್ ರೂಪಾಂತರಗಳಲ್ಲಿ ಸಂಪರ್ಕಿತ ಕಾರ್ ಟೆಕ್ ಅನ್ನು ಕೂಡ ಹೊಂದಿದೆ. ಸ್ಟೀರಿಂಗ್ ವೀಲ್ ವಿನ್ಯಾಸವು ಟೊಯೋಟಾ ಕಂಪನಿಯ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಹೋಲುತ್ತದೆ.

ಈ ಕಾರಿನಲ್ಲಿರುವ, 1.5-ಲೀಟರ್, 4-ಸಿಲಿಂಡರ್ K15C ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 103 hp ಪವರ್ ಮತ್ತು 136 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಪ್ರಸರಣಕ್ಕೆ ಅಳವಡಿಸಲಾಗಿದೆ. 1.5-ಲೀಟರ್, 3-ಸಿಲಿಂಡರ್ ಅಟ್ಕಿನ್ಸನ್ ಸೈಕಲ್ TNGA ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 92 hp ಪವರ್ ಮತ್ತು 122 Nm ಟಾರ್ಕ್ ಅನ್ನು ಹೊರ ಹಾಕುವ ಸಾಮರ್ಥ್ಯ ಹೊಂದಿದೆ.

ಒಟ್ಟು 9 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ ಗ್ರ್ಯಾಂಡ್ ವಿಟಾರಾದಲ್ಲಿ, ಆರು ಮೊನೊಟೋನ್ ಬಣ್ಣಗಳು ಮತ್ತು ಮೂರು ಡ್ಯುಯಲ್ ಟೋನ್ ಬಣ್ಣಗಳಾಗಿವೆ. ಇದು 79 HP ಪವರ್ ಮತ್ತು 141 Nm ಟಾರ್ಕ್ ಜೊತೆಗೆ AC ಸಿಂಕ್ರೊನಸ್ ಮೋಟಾರ್ ಅನ್ನು ನೀಡುತ್ತದೆ. ಜೊತೆಗೆ 115 HP ಪವರ್ ನೀಡುತ್ತದೆ. ಇದನ್ನು 6 ಸ್ಪೀಡ್ ಸಿವಿಟಿಗೆ ಜೋಡಿಸಲಾಗಿದೆ. ಇದು ಪ್ರತಿ ಲೀಟರ್‌ಗೆ 28 ​​ಕಿ.ಮೀ/ಲೀ ಮೈಲೇಜ್ ನೀಡುತ್ತದೆ ಎನ್ನಲಾಗಿದೆ.

ಗ್ರ್ಯಾಂಡ್ ವಿಟಾರಾದ ಸುರಕ್ಷತಾ ವೈಶಿಷ್ಟ್ಯತೆಗಳೇನು?

ಇಂದಿನ ಕಾಲದಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತಿರುವ ಕಾರಣ, ವಾಹನ ತಯಾರಿಕ ಕಂಪೆನಿಗಳು ಸುಕ್ಷತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಅದರಂತೆಯೇ, ಮಾರುತಿ ಸುಜುಕಿ ಹೊರತಂದಿರುವ ಗ್ರ್ಯಾಂಡ್ ವಿಟಾರಾದಲ್ಲಿ, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್ ಹೋಲ್ಡ್ ಅಸಿಸ್ಟ್, 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಇವುಗಳು ವಾಹನ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಒಟ್ಟಾರೆಯಾಗಿ ಎಸ್‌ಯುವಿ ವಿಭಾಗದಲ್ಲಿ ಮಾರುತಿಯ ಬಹುಬೇಡಿಕೆಯ ವಾಹನವಾಗಿದ್ದು, ಕಂಪೆನಿಯ ಹಿಂಪಡೆಯುವಿಕೆಯ ಘೋಷಣೆ ಗ್ರಾಹರಲ್ಲಿ‌ ಕೊಂಚ ಬೇಸರ ತರಿಸಿದೆ ಎಂಬುದು ಸುಳ್ಳಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *