ಹೊಸ ರೂಪದೊಂದಿಗೆ ಭಾರತೀಯ ವಾಹನ ಮಾರುಕಟ್ಟೆಗೆ ಮತ್ತೆ ಬರಲಿದೆ ರೆನಾಲ್ಟ್ ಡಸ್ಟರ್ – ಅಬ್ಬಾ! ಇದರ ವೈಶಿಷ್ಟ್ಯತೆ ಹೇಗಿದೆ ಗೊತ್ತಾ..?

ಹೊಸ ರೂಪದೊಂದಿಗೆ ಭಾರತೀಯ ವಾಹನ ಮಾರುಕಟ್ಟೆಗೆ ಮತ್ತೆ ಬರಲಿದೆ ರೆನಾಲ್ಟ್ ಡಸ್ಟರ್ – ಅಬ್ಬಾ! ಇದರ ವೈಶಿಷ್ಟ್ಯತೆ ಹೇಗಿದೆ ಗೊತ್ತಾ..?

ನ್ಯೂಸ್ ಆ್ಯರೋ : ವಾಹನ ಮಾರುಕಟ್ಟೆಗೆ ಅತ್ಯಂತ ಜನಪ್ರಿಯಗೊಂಡಿದ್ದ ರೆನಾಲ್ಟ್ ಡಸ್ಟರ್ ತನ್ನ ಹೊಸ ರೂಪದೊಂದಿಗೆ ಮತ್ತೆ ವಾಹನೋದ್ಯಮವನ್ನು ಆಕ್ರಮಿಸಿಕೊಳ್ಳಲು ತಯಾರಾಗಿದೆ‌. ಈ ಮೂಲಕ ಪ್ರೆಂಚ್ ವಾಹನ ತಯಾರಿಕಾ ಕಂಪನಿಯೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಕಾರು ತಯಾರಿಕೆಗಾಗಿ ಕಂಪೆನಿಯೂ, ಮುಂದಿನ ಎರಡು ವರ್ಷಗಳಲ್ಲಿ ಬರೊಬ್ಬರಿ 500 ಮಿಲಿಯನ್ ಹೂಡಿಕೆ ಮಾಡಲಿದೆ ಎನ್ನಲಾಗಿದೆ. ಹೊಸ ರೆನಾಲ್ಟ್ ಡಸ್ಟರ್ ಜೊತೆಗೆ ರೆನಾಲ್ಟ್ ಕಂಪನಿಯು ಹೊಸ ಬಿಗ್‌ಸ್ಟರ್ ಎಂಬ 7-ಸೀಟರ್ ಮಿಡ್ ಸೈಜ್ ಎಸ್‍ಯುವಿ ಕಾನ್ಸೆಪ್ಟ್ ಮಾದರಿಯನ್ನು ಪರಿಚಯಿಸುವ ಸಾಧ್ಯತೆಯಿದೆ.

ಹೊಸ, ರೆನಾಲ್ಟ್ 3ನೇ ತಲೆಮಾರಿನ ಡಸ್ಟರ್ ಎಸ್‌ಯುವಿಯನ್ನು 2024-25ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಹೊಸ ಮಾದರಿಯನ್ನು ಹೊಸ CMF-B ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಅಭಿವೃದ್ಧಿಪಡಿಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ ಹೆಚ್ಚು ಆಧುನಿಕ ವೈಶಿಷ್ಟ್ಯಗಳು ಮತ್ತು ಆಧಾರಗಳನ್ನು ನೀಡಲು ರೆನಾಲ್ಟ್‌ಗೆ ಅವಕಾಶ ನೀಡುತ್ತದೆ ಎನ್ನಲಾಗಿದೆ. ಇನ್ನು ರೆನಾಲ್ಟ್ ಡಸ್ಟರ್ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ವಿಡಬ್ಲ್ಯೂ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. CMF-B ಪ್ಲಾಟ್‌ಫಾರ್ಮ್ ಅನ್ನು ಭಾರತ ಸೇರಿದಂತೆ ಇತರ ಹೊಸ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ಕಂಪೆನಿ ಈಗಾಗಲೇ ತಯಾರಿ ನಡೆಸುತ್ತಿದೆ‌.

ಹೊಸ ಮಾದರಿಯ ಎಂಜಿನ್ ಬಗ್ಗೆ ಕಂಪೆನಿ ಯಾವುದೇ ಸುಳಿವು ನೀಡಲಿಲ್ಲ. ಆದರೆ ರೆನಾಲ್ಟ್ ಹಿಂದಿನ ಮಾದರಿಯಲ್ಲಿ 1.0-ಲೀಟರ್ ಮೂರು-ಸಿಲಿಂಡರ್ NA ಪೆಟ್ರೋಲ್ ಮತ್ತು 1.0-ಲೀಟರ್ ಮೂರು-ಸಿಲ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿತ್ತು. ಈ ಎಂಜಿನ್ ಗಳೊಂದಿಗೆ ಮ್ಯಾನುಯಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿತ್ತು. ಡಸ್ಟರ್ ಎಸ್‍ಯುವಿಯ ಉತ್ಪಾದನೆಯನ್ನು ಒಂದು ವರ್ಷದ ಹಿಂದೆ ತಮಿಳುನಾಡಿನಲ್ಲಿರುವ ರೆನಾಲ್ಟ್ ಉತ್ಪಾದನಾ ಘಟಕದಲ್ಲಿ ಸ್ಥಗಿತಗೊಳಿಸಲಾಗಿತ್ತು.

ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು. ರೆನಾಲ್ಟ್ ಡಸ್ಟರ್ 2014ರಲ್ಲಿ ಎಡಬ್ಲ್ಯೂಡಿ ರೂಪಾಂತರವನ್ನು ಪಡೆದುಕೊಂಡಿತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 2016ರಲ್ಲಿ ಮಿಡ್-ಸೈಕಲ್ ನವೀಕರಣವನ್ನು ಪಡೆದುಕೊಂಡಿತ್ತು. ಇನ್ನು 2017ರ ಅಂತ್ಯದಲ್ಲಿ ರೆನಾಲ್ಟ್ ಕಂಪನಿಯು ಎರಡನೇ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಎಸ್‍ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. 2019ರ ಜುಲೈ ತಿಂಗಳಿನಲ್ಲಿ ಡಸ್ಟರ್‌ಗೆ ಜಾಗತಿಕ ಮಾದರಿಯಂತೆಯೇ ವಿನ್ಯಾಸ ಪರಿಷ್ಕರಣೆಗಳೊಂದಿಗೆ ಹೆಚ್ಚು ಅಗತ್ಯವಿರುವ ಫೇಸ್‌ಲಿಫ್ಟ್ ಅನ್ನು ನೀಡಿತು.

ಎಸ್‍ಯುವಿ ಗಾತ್ರವು ಸ್ಕೋಡಾ ಕೊಡಿಯಾಕ್‌ನಂತಹ ದೊಡ್ಡ ಎಸ್‍ಯುವಿಗಳಿಗೆ ಪರೋಕ್ಷ ಪ್ರತಿಸ್ಪರ್ಧಿಯಾಗಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್‌ನ 7-ಸೀಟುಗಳ ಎಸ್‍ಯುವಿ ಟಾಟಾ ಸಫಾರಿ ಮತ್ತು ಮಹೀಂದ್ರಾ XUV700 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬಿಗ್‌ಸ್ಟರ್ ಕಾನ್ಸೆಪ್ಟ್ ಮೀಟರ್ ಉದ್ದವನ್ನು ಹೊಂದಿರುತ್ತದೆ. ಈ ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ರೆನಾಲ್ಟ್ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತ್ತು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *