ಮೋದಿ‌ ಜನ್ಮದಿನದಂದು ಭಾರತಕ್ಕೆ ಬಂದಿದ್ದ ಚೀತಾಕ್ಕೆ ಕಿಡ್ನಿ ಸಮಸ್ಯೆ – ಆಫ್ರಿಕಾದ ವೈದ್ಯರ ತಂಡಕ್ಕೆ ಬುಲಾವ್

ಮೋದಿ‌ ಜನ್ಮದಿನದಂದು ಭಾರತಕ್ಕೆ ಬಂದಿದ್ದ ಚೀತಾಕ್ಕೆ ಕಿಡ್ನಿ ಸಮಸ್ಯೆ – ಆಫ್ರಿಕಾದ ವೈದ್ಯರ ತಂಡಕ್ಕೆ ಬುಲಾವ್

ನ್ಯೂಸ್ ಆ್ಯರೋ : ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಹಿನ್ನಲೆಯಲ್ಲಿ, ದೇಶದೆಲ್ಲೆಡೆ ಹಲವು ವಿಭಿನ್ನ ಕಾರ್ಯಕ್ರಮಗಳು ನಡೆದಿದ್ದವು. ಅದರ ಮುಂದುವರೆದ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂದು, ಭಾರತದ ಪಾಲಿಗೆ ಅಪರೂಪವೆನಿಸಿದ್ದ ಎಂಟು ನಮೀಬಿಯಾ ಮೂಲದ ಚೀತಾಗಳನ್ನು ತರಲಾಗಿತ್ತು. ಸದ್ಯ, ಅಲ್ಲಿಂದ ತಂದ ಎಂಟು ಚೀತಾಗಳ ಪೈಕಿ ಒಂದು ಹೆಣ್ಣು ಚೀತಾಗೆ ಕಿಡ್ನಿ ಸಮಸ್ಯೆ ಕಂಡುಬಂದಿದೆ‌.

ಭಾರತದಲ್ಲಿ ಏಷ್ಯಾಟಿಕ್ ಚೀತಾಗಳ ಸಂತತಿ ಸಂಪೂರ್ಣವಾಗಿ ನಶಿಸಿ ಹೋದ ಬರೋಬ್ಬರಿ 70 ವರ್ಷಗಳ ನಂತರ, ಮೋದಿಯವರ ಜನ್ಮದಿನದಂದು ನಮೀಬಿಯಾದಿಂದ 8 ಚೀತಾಗಳನ್ನು‌ ಕ‌ರೆತಂದು, ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವದಲ್ಲಿ ಬಿಡಲಾಗಿತ್ತು.

‘ನಶಾ’ ಹೆಸರಿನ ಹೆಣ್ಣು ಚೀತಾಗೆ‌ ಕಿಡ್ನಿ ಸಮಸ್ಯೆ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದ್ದ, ಚೀತಾಗಳ ಉಪಚಾರಕ್ಕೆ ವಿಶೇಷವಾದ ತಜ್ಞ ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಇತ್ತೀಚೆಗೆ, ಎಂದಿನಂತೆ ವೈದ್ಯರ‌ ತಂಡ ಚೀತಾಗಳ ಆರೋಗ್ಯ ಪರಿಶೀಲನೆ ನಡೆಸುತ್ತಿರುವ ವೇಳೆ, ನಶಾ ಹೆಸರಿನ ಹೆಣ್ಣು ಚೀತಾ ಆಯಾಸಗೊಂಡು ಮಲಗಿರುವುದು ಕಂಡು ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ವೈದ್ಯಾಧಿಕಾರಿಗಳ ತಂಡ ಟ್ರಾನ್ಸಕ್ವಿಲೈಸ್ ಮಾಡಿ ಚೀತಾವನ್ನು ಕ್ವಾರಂಟೈನ್ ಆವರಣಕ್ಕೆ ಬಿಟ್ಟಿದ್ದಾರೆ. ತಪಾಸಣೆ ನಡೆಸಿದ ವೈದ್ಯರಿಗೆ ನಶಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ.

ನಶಾಳ ಉಪಚಾರಕ್ಕೆ ಆಫ್ರಿಕಾ ತಜ್ಞರ ಸಂಪರ್ಕ

ಸದ್ಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣು ಚೀತಾ ನಶಾಳ ಮೇಲೆ ಅಧಿಕಾರಿಗಳು ವಿಶೇಷ ನಿಗಾ ವಹಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಭೋಪಾಲ್ ವಾನ್ ವಿಹಾರ್ ನಿಂದ ಡಾ.ಅತುಲ್ ಗುಪ್ತಾ ನೇತೃತ್ವದ ವೈದ್ಯರ‌ ತಂಡ ಉದ್ಯಾನವನಕ್ಕೆ ಆಗಮಿಸಿದೆ. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಫ್ರಿಕಾ ಮತ್ತು ನಮೀಬಿಯಾದ ಪರಿಣಿತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಲಾಗುತ್ತಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. 8 ಚೀತಾಗಳ ಪೈಕಿ, ಉಳಿದ ಚೀತಾಗಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.

70 ವರ್ಷಗಳ ಹಿಂದೆಯೇ ಈ ಚೀತಾಗಳು ನಾಶವಾಗಿದ್ದವು..!!

ಭಾರತದಲ್ಲಿ ಮೈಮೇಲೆ ಕಪ್ಪು ಮಚ್ಚೆಗಳಿರುವ ಈ ಚೀತಾಗಳು 70 ವರ್ಷಗಳ ಹಿಂದೆ, ಅಂದರೆ ಸರಿಸುಮಾರು 1952ರ ಹೊತ್ತಿಗೆ ಸಂಪೂರ್ಣವಾಗಿ ನಾಶವಾಗಿದ್ದವು. ಕೊನೆಯದಾಗಿ ಉಳಿದಿದ್ದ ಈ ಪ್ರಭೇದದ ಒಂದು ಚೀತಾ 1947ರಲ್ಲಿ ಸಾವನ್ನಪ್ಪಿತ್ತು.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *