ದೆಹಲಿಯ ಆಟೋ ಎಕ್ಸಪೋದಲ್ಲಿ ಪ್ರದರ್ಶನವಾಗಲಿದೆ 700 ಕಿ.ಮೀ ಮೈಲೇಜ್ ಕೊಡಬಲ್ಲ ಎಲೆಕ್ಟ್ರಿಕ್ ವಾಹನ – ಇದರ ಫೀಚರ್ಸ್ ಹೇಗಿದೆ ಗೊತ್ತಾ…!?

ದೆಹಲಿಯ ಆಟೋ ಎಕ್ಸಪೋದಲ್ಲಿ ಪ್ರದರ್ಶನವಾಗಲಿದೆ 700 ಕಿ.ಮೀ ಮೈಲೇಜ್ ಕೊಡಬಲ್ಲ ಎಲೆಕ್ಟ್ರಿಕ್ ವಾಹನ – ಇದರ ಫೀಚರ್ಸ್ ಹೇಗಿದೆ ಗೊತ್ತಾ…!?

ನ್ಯೂಸ್ ಆ್ಯರೋ : ಚೀನಾದ ಪ್ರಮುಖ ಇವಿ ಬ್ರ್ಯಾಂಡ್ ಅಥವಾ ಬಿಲ್ಡ್ ಯುವರ್ ಡ್ರೀಮ್ಸ್, ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರಥಮ‌ ಬಾರಿಗೆ ನೂತನ ಸೀಲ್ ಸೆಡಾನ್ ಅನ್ನು ಪ್ರದರ್ಶಿಸಲಿದೆ. BYD ಸೀಲ್ ಯುರೋಪ್ ಮತ್ತು ಚೀನಾದಂತಹ ಮಾರುಕಟ್ಟೆಗಳಲ್ಲಿ ಜನಪ್ರೀಯ ಟೆಸ್ಲಾ ಮಾಡೆಲ್ 3ಗೆ ಭಾರೀ ಪೈಪೋಟಿ ನೀಡುವ ಸಾಧ್ಯತೆಯಿದೆ.

BYD ಸೀಲ್ 4,800ಎಂಎಂ ಉದ್ದ, 1875ಎಂಎಂ ಅಗಲ, 1460ಎಂಎಂ ಎತ್ತರ ಹಾಗೂ 2,920ಎಂಎಂ ವೀಲ್‌ಬೇಸ್ ಹೊಂದಿದೆ. ಇದು ಟೆಸ್ಲಾದ ಮಾಡೆಲ್ 3ಕ್ಕೆ ಹೋಲಿಸಿದರೆ, 106ಎಂಎಂ ಉದ್ದ, 17ಎಂಎಂ ಎತ್ತರ, ವೀಲ್‌ಬೇಸ್ 45ಎಂಎಂ ಹೆಚ್ಚಾಗಿದೆ. ವಿನ್ಯಾಸದ ವಿಷಯದಲ್ಲಿ ಸೀಲ್ 2021ರಿಂದ ಓಷನ್ ಎಕ್ಸ್ ಪರಿಕಲ್ಪನೆಯನ್ನು ಆಧರಿಸಿದ್ದು, ಕೂಪ್ ತರಹದ ಗಾಜಿನ ಮೇಲ್ಛಾವಣಿ, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ನಾಲ್ಕು ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ ಮತ್ತು ಹಿಂಭಾಗದಲ್ಲಿ ಫುಲ್-ವಿಡ್ತ್ ಎಲ್ಇಡಿ ಲೈಟ್ ಬಾರ್‌ನಂತಹ ವಿನ್ಯಾಸವನ್ನು ಹೊಂದಿದೆ.

Atto 3 ಮತ್ತು e6ನಂತೆ, BYD ಸೀಲ್, ಸೆಂಟ್ರಲ್ ಕನ್ಸೋಲ್‌ನಲ್ಲಿ ತಿರುಗುವ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಸಹ ಹೊಂದಿದೆ, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್ಪ್ಲೇಯನ್ನು ಹೊಂದಿದೆ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಂಟ್ರಲ್ AC ವೇಟ್ ಗಳಿಂದ ಸುತ್ತುವರೆದಿದ್ದು, ಡ್ರೈವ್ ಸೆಲೆಕ್ಟರ್ ಮತ್ತು ಅದರ ಕೆಳಗಿನ ವಿವಿಧ ಡ್ರೈವ್ ಮೋಡ್‌ಗಳನ್ನು ಆಯ್ಕೆ ಮಾಡಲು ಸ್ಕ್ರಾಲ್ ವೀಲ್ ಹೊಂದಿದೆ.

ಸೆಂಟರ್ ಕನ್ಸೋಲ್ ಬಿಸಿಯಾದ ವಿಂಡ್‌ಸ್ಕ್ರೀನ್, ಆಡಿಯೊ ಸಿಸ್ಟಮ್‌ಗಾಗಿ ವಾಲ್ಯೂಮ್ ಕಂಟ್ರೋಲ್ ಮತ್ತು ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಸೀಲ್ ಕಾರಿನಲ್ಲಿ BYD ಕಂಪನಿ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಬಳಸುತ್ತಿದೆ. ಇದು ಭಾರತದಲ್ಲಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸೇರಿದಂತೆ ಇತರೆ ಸಾಗರೋತ್ತರದಲ್ಲಿ ಇವಿಗಳಲ್ಲಿ ಬಳಕೆಯಲ್ಲಿದೆ. ಸೀಲ್ BYDಯ ಇ-ಪ್ಲಾಟ್‌ಫಾರ್ಮ್ 3.0 ಅನ್ನು ಆಧರಿಸಿದ್ದು, ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಅವುಗಳೆಂದರೆ, 61.4kWh ಯುನಿಟ್ ಮತ್ತು 82.5kWh ಯುನಿಟ್.

ಮೊದಲನೆಯದು ಚೀನಾ ಲೈಟ್-ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್‌ನಲ್ಲಿ 550 ಕಿ.ಮೀ ರೇಂಜ್ ಹೊಂದಿದೆ. ಆದರೆ, ಎರಡನೆಯದು ಅದೇ 700 ಕಿ.ಮೀ ರೇಂಜ್ ನೀಡಲಿದೆ.
ಸೀಲ್ ಸೆಡಾನ್ ಸಿಂಗಲ್-ಮೋಟರ್ ಮತ್ತು ಡ್ಯುಯಲ್-ಮೋಟಾರ್ ಪವರ್‌ಟ್ರೇನ್‌ಗಳ ಆಯ್ಕೆಯನ್ನು ಹೊಂದಿದೆ. ಸಿಂಗಲ್ ಮೋಟರ್ ಅನ್ನು ಎರಡು ಬ್ಯಾಟರಿಗಳಿಗೆ ಜೋಡಿಸಬಹುದಾದರೂ, ಎರಡನೆಯದನ್ನು ದೊಡ್ಡ ಬ್ಯಾಟರಿಯೊಂದಿಗೆ ಮಾತ್ರ ಅಳವಡಿಕೆ ಮಾಡಬಹುದು.

ರೇರ್-ವೀಲ್ ಡ್ರೈವ್, ಸಿಂಗಲ್-ಮೋಟಾರ್ ಹೊಂದಿರುವ ಸೀಲ್ 204hp ಪವರ್ ಉತ್ಪಾದಿಸುತ್ತದೆ. ಚಿಕ್ಕ ಬ್ಯಾಟರಿ ಕೇವಲ 5.7 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆದುಕೊಳ್ಳಲಿದೆ. ದೊಡ್ಡ ಬ್ಯಾಟರಿ ಸೆಟಪ್ 312hp ಪವರ್ ಉತ್ಪಾದಿಸುತ್ತದೆ. 5.9 ಸೆಕೆಂಡ್ ಗಳಲ್ಲಿ 0-100kph ವೇಗ ಹೊಂದಿದೆ.

ಡ್ಯುಯಲ್-ಮೋಟಾರ್ ರೂಪಾಂತರವು ಆಲ್-ವೀಲ್ ಡ್ರೈವ್ ಸೆಟ್-ಅಪ್ ಅನ್ನು ಹೊಂದಿದ್ದು, ಅಲ್ಲಿ ಮುಂಭಾಗದಲ್ಲಿ ಅಳವಡಿಸಲಾದ ಮೋಟಾರ್ 218 hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಿಂಭಾಗದಲ್ಲಿ 312 hp ಗರಿಷ್ಠ ಪವರ್ ಉತ್ಪಾದಿಸಲಿದೆ. ಇದು 3.8 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆಯಲಿದೆ. ಈ ಸೆಟ್ಅಪ್ ಹೊಂದಿರುವ 82.5kWh ಬ್ಯಾಟರಿಯು ಬರೋಬ್ಬರಿ 650ಕಿ.ಮೀ ರೇಂಜ್ ನೀಡಲಿದೆ. ಇದರಿಂದ ವಿದೇಶಗಳಲ್ಲಿ ಈ ಕಾರಿಗೆ ಬಾರಿ ಬೇಡಿಕೆಯಿದೆ ಎಂದು ಹೇಳಬಹುದು.

ಸೀಲ್‌ನ ಹೊರತಾಗಿ, BYD ಅಟ್ಟೊ 3 ಇವಿಯನ್ನು ಪ್ರದರ್ಶಿಸುತ್ತದೆ. ಇದು ಭಾರತದಲ್ಲಿ ರೂ.33.99 ಲಕ್ಷದಿಂದ ಮತ್ತು ರೂ.29.15 ಲಕ್ಷ ಬೆಲೆಯನ್ನು ಹೊಂದಿದೆ. BYD Atto 3 ಇವಿ, 7.3 ಸೆಕೆಂಡ್‌ಗಳಲ್ಲಿ 0-100kmph ವೇಗವನ್ನು ತಲುಪಬಲ್ಲದು. ಒಂದೇ ಚಾರ್ಜ್‌ನಲ್ಲಿ 521km ರೇಂಜ್ ಹಿಂದಿರುಗಿಸುತ್ತದೆ. ಈ ಕಾರಿನ ಪ್ರಮುಖ ವೈಶಿಷ್ಟ್ಯಗಳನ್ನು ನೋಡುವುದಾದರೆ LED ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು, 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನಾರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಐದು ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕನ್ಸೋಲ್ ಪಡೆದುಕೊಂಡಿದೆ.

ಇಂತಹ ಹಲವು ವೈವಿಧ್ಯಮಯ ರೂಪುರೇಷೆಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ವಾಹನ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆ ದೆಹಲಿಯ ತುಂಬ ದಟ್ಟವಾಗಿ ಆವರಿಸಿಕೊಂಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *