ಅವಕಾಶ ಬೇಕಿದ್ದರೆ ಆತ ಕರೆದಾಗೆಲ್ಲ ಹೋಗಬೇಕು, ನಟಿಯೊಬ್ಬಳಿಂದ ಗಂಭೀರ ಆರೋಪ – ನಟ ಯಾರು ಗೊತ್ತಾ..!? ನಟಿ ವಿವರವಾಗಿ ಹೇಳಿದ್ದೇನು??

ಅವಕಾಶ ಬೇಕಿದ್ದರೆ ಆತ ಕರೆದಾಗೆಲ್ಲ ಹೋಗಬೇಕು, ನಟಿಯೊಬ್ಬಳಿಂದ ಗಂಭೀರ ಆರೋಪ – ನಟ ಯಾರು ಗೊತ್ತಾ..!? ನಟಿ ವಿವರವಾಗಿ ಹೇಳಿದ್ದೇನು??

ನ್ಯೂಸ್ ಆ್ಯರೋ : ಸಿನಿಮಾ ರಂಗ ಅನ್ನೋದು ತೆರೆಯ ಮೇಲೆ ಕಾಣುವಷ್ಟು ಶುಭ್ರವಾದುದಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವಾರು ನ್ಯೂಸ್ ಗಳು ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಯುವತಿಯರಿಗಂತೂ ಸಿನಿಮಾ ರಂಗ ಪ್ರವೇಶಿಸಲು ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಅವರಲ್ಲಿ ಕೆಲವರು ಸಿನಿಮಾ ಕನಸಿಗಾಗಿ ತಮ್ಮನ್ನು ತ್ಯಾಗ ಮಾಡಿಕೊಂಡರೆ ಮತ್ತೆ ಕೆಲವರು ಇಂತಹಾ ನೀಚ ಕೃತ್ಯದ ವಿರುದ್ಧ ಸಿಡಿದೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಮೀ-ಟೂ ಹೆಸರಿನಲ್ಲಿ ಅಂತಹದ್ದೇ ಒಂದು ಮಹಿಳಾ ಕ್ರಾಂತಿ ಭಾರತೀಯ ಸಿನಿಮಾ ಬಿರುಗಾಳಿ ಎಬ್ಬಿಸಿ ಹಲವಾರು ಖ್ಯಾತ ಸಿನಿ ದಿಗ್ಗಜರ ಮುಖವಾಡ ಕಳಚಿತ್ತು. ಸದ್ಯ ಅಂತಹದ್ದೆ ಒಂದು ಬ್ರೇಕಿಂಗ್ ನ್ಯೂಸ್ ಚಿತ್ರರಂಗವೊಂದರಿಂದ ಕೇಳಿ ಬರುತ್ತಿದೆ. ಖ್ಯಾತ ನಟನೊಬ್ಬನ ವಿರುದ್ಧ ನಟಿಯೊಬ್ಬರು ಇದೀಗ ಧ್ವನಿ ಎತ್ತಿದ್ದು ತಮಗಾದ ಲೈಂಗಿಕ ಶೋಷಣೆಯ ಬಗ್ಗೆ ಆರೋಪ ಮಾಡಿದ್ದಾರೆ.

ಇದು ಭೋಜ್ ಪುರಿ ಸಿನಿಮಾ ರಂಗದ ಖ್ಯಾತ ನಾಯಕ ನಟ ಪವನ್ ಸಿಂಗ್ ಮೇಲೆ ಕೇಳಿ ಬರುತ್ತಿರುವ ಗಂಭೀರ ಆರೋಪ. ಅದೇ ಚಿತ್ರರಂಗದ ನಟಿ ಯಾಮಿನಿ ಸಿಂಗ್ ಪವನ್ ಸಿಂಗ್ ಮೇಲೆ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ. ಈತ ಹೊಸ ನಟಿಯರನ್ನು ಸದಾ ಕಾಮದ ಕಣ್ಣಿನಿಂದಲೇ ನೋಡುತ್ತಾನೆ. ನನಗೂ ಈತನಿಂದ ಅಂತಹದ್ದೇ ಕೆಟ್ಟ ಅನುಭವವಾಗಿದೆ ಎಂದು ಆರೋಪಿಸಿದ್ದಾರೆ. ಈ ಸುದ್ದಿ ಸದ್ಯ ಭೋಜ್‌ಪುರಿ ಚಿತ್ರರಂಗದ ತುಂಬ ಬಿರುಗಾಳಿಯ ಎಬ್ಬಿಸಿದೆ.

ಭೋಜ್‌ಪುರಿ ಭಾಷೆಯ ಹೊಸಾ ಸಿನಿಮಾ ‘ಬಾಸ್’ ಚಿತ್ರದ ಶೂಟಿಂಗ್‌ ಬಳಿಕ ತಡರಾತ್ರಿ ಸ್ಟುಡಿಯೋಗೆ ನಟಿಯನ್ನು ಬರುವಂತೆ ಪವನ್‌ ಸಿಂಗ್‌ ತಮ್ಮ ಆಪ್ತರಿಂದ ನಟಿಗೆ ಕರೆ ಮಾಡಿಸಿದ್ದರು. ಇದಕ್ಕೆ ಒಪ್ಪದ ಯಾಮಿನಿ ಸಿಂಗ್ ಅವರಿಗೆ ಸಿನಿಮಾ ಅವಕಾಶ ಬೇಕೋ ಬೇಡವೋ ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು. ಇದರಿಂದ ಬೇಸತ್ತ ನಟಿ, ಸಿನಿಮಾ ಸಹವಾಸವೆ ಬೇಡ ಎಂದು ಸಿನಿಮಾದಿಂದ ಹೊರನಡೆದಿದ್ದಾರೆ.

ಈ ವಿಚಾರವನ್ನು ಸ್ವತಃ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದು, “ರಾತ್ರಿ 9 ಗಂಟೆ ಸುಮಾರಿಗೆ ತನಗೆ ಆಟೋ ಮಾಡಿಕೊಂಡು ಸ್ಟುಡಿಯೋಗೆ ಬರುವಂತೆ ಪವನ್‌ ಸಿಂಗ್‌ ಕಡೆಯವರಿಂದ ಕರೆ ಬಂತು. ರಾತ್ರಿ ಹೊತ್ತಿನಲ್ಲಿ ಹೇಗೆ ಬರಲಿ ಎಂದು ಕೇಳಿದಾಗ, ಮುಂದೆ ಸಿನಿಮಾ ಮಾಡಬೇಕೋ ಬೇಡವೋ ಎಂದು ಕೇಳಿದರು. ಆ ಮಾತಿನ ನಂತರವೇ ನಾನು ಆ ಸಿನಿಮಾದಿಂದಲೇ ಹಿಂದೆ ಸರಿದೆ” ಎಂದು‌ ಬೇಸರ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಈ ವಿಚಾರ ಹಬ್ಬುತ್ತಿದ್ದಂತೆ ಪವನ್‌ ಸಿಂಗ್ ಅಭಿಮಾನಿಗಳು ನಟಿಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಯಾಮಿನಿ ಸಿಂಗ್ ನಾನು ಸುಖಾ ಸುಮ್ಮನೆ ಆರೋಪ ಮಾಡುತ್ತಿರುವುದಲ್ಲ. ನನಗೆ ಪವನ್ ಸಿಂಗ್ ಮೇಲೆ ಗೌರವವಿದೆ ಆದರೆ ನನ್ನ ಸ್ವಾಭಿಮಾನ ಬಿಟ್ಟು ಯಾವ ಕೀಳು ಕೆಲಸಕ್ಕೂ ಇಳಿಯುವುದಿಲ್ಲ. ಹಾಗೆಯೇ ಈ ವಿಷಯದಲ್ಲಿ ರಾಜಿಯಾಗಲಾರೆ. ನನಗೆ ಸಿನಿಮಾ ಅವಕಾಶ ಕೊಟ್ಟದ್ದು ನಿರ್ದೇಶಕರು ಪವನ್ ಸಿಂಗ್ ಅವಕಾಶ ನೀಡಿದ್ದಲ್ಲ. ತನ್ನ ಸ್ವಂತ ಇಚ್ಚೆಯಿಂದಲೇ ಸಿನಿಮಾವನ್ನು ತಿರಸ್ಕರಿಸಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಈ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದ ತುಂಬ ಪರವಿರೋಧ ಚರ್ಚೆಗಳು ನಡೆಯುತ್ತಿದ್ದು ಇದು ಯಾವ ಹಂತಕ್ಕೆ ತಲುಪಲಿದೆ, ಇನ್ನು ಯಾವ್ಯಾವ ಸಿನಿಮಾ ನಟ-ತಂತ್ರಜ್ಞರ‌ ಹೆಸರು ಈ ಆರೋಪದೊಂದಿಗೆ ತಳುಕು ಹಾಕಲಿದೆಯೋ ಕಾದು ನೋಡಬೇಕಾಗಿದೆ‌.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *