ಕೇವಲ 1400 ರೂಪಾಯಿ ಇದ್ರೆ ಸಾಕು 55 ಇಂಚಿನ ಸ್ಮಾರ್ಟ್ ಟಿವಿ ಖರೀದಿಸ್ಬೋದು – ವಿವರಗಳು ಇಲ್ಲಿವೆ ನೋಡಿ…

ಕೇವಲ 1400 ರೂಪಾಯಿ ಇದ್ರೆ ಸಾಕು 55 ಇಂಚಿನ ಸ್ಮಾರ್ಟ್ ಟಿವಿ ಖರೀದಿಸ್ಬೋದು – ವಿವರಗಳು ಇಲ್ಲಿವೆ ನೋಡಿ…

ನ್ಯೂಸ್ ಆ್ಯರೋ : ಹೊಸ ವರ್ಷದಲ್ಲಿ ಮನೆಗೆ ಹೊಸ ಸ್ಮಾರ್ಟ್ ಟಿವಿ ಖರೀದಿಸಲು ನೀವು ಯೋಜಿಸುತ್ತಿದ್ದೀರಾ? ಹಾಗಿದ್ರೆ ಈ ಸಮಯ ನಿಮಗೆ ಉತ್ತಮವಾಗಿದೆ. ಇದೀಗ ಇಕಾಮರ್ಸ್​ ವೆಬ್​ಸೈಟ್​ಗಳು ಸ್ಮಾರ್ಟ್​ಟಿವಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ನಿಮಗೆ ಬೇಕಾದ ಸ್ಮಾರ್ಟ್​ಟಿವಿಯನ್ನು ಇಲ್ಲಿ ಖರೀದಿಸಬಹುದಾಗಿದೆ.

ನೀವು 55 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಪ್ಲ್ಯಾನ್​ನಲ್ಲಿದ್ರೆ ಈ ಆಫರ್​ ನಿಮಗೆ ಉತ್ತಮ ಆಯ್ಕೆಯಾಗಿದ್ದು, ಕೇವಲ 1400 ರೂ. ಇದ್ದರೆ ಸಾಕು 55 ಇಂಚಿನ ಸ್ಮಾರ್ಟ್ ಟಿವಿಯನ್ನು ನಿಮ್ಮದಾಗಿಸಬಹುದು. ಹಾಗಿದ್ರೆ ಯಾವ ರೀತಿ ಖರೀದಿಸೋದು, ಇನ್ನೇನೆಲ್ಲಾ ಆಫರ್ಸ್​ ಲಭ್ಯವಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಗಣರಾಜ್ಯೋತ್ಸವ ಪ್ರಯುಕ್ತ ಎಲೆಕ್ಟ್ರಾನಿಕ್ಸ್​ ಉಪಕರಣಗಳ ಮೇಲೆ ವಿಶೇಷ ಕೊಡುಗಡೆಯನ್ನು ನೀಡಿದ್ದು, ಸದ್ಯ ಮಾರುಕಟ್ಟೆಯಲ್ಲಿ 55 ಇಂಚಿನ ಸ್ಮಾರ್ಟ್​​ಟಿವಿ ಮೇಲೆ ಭರ್ಜರಿ ಆಫರ್ಸ್​ಅನ್ನು ಘೋಷಿಸಿದೆ.

​ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಕ್ರೋಮಾದಲ್ಲಿ ಈ ಆಫರ್ ಲಭ್ಯವಿದ್ದು, ಈ ಕಂಪನಿಯ ಸ್ಮಾರ್ಟ್​​ಟಿವಿಗಳ ಮೇಲೆ​ ಸೂಪರ್ ಡಿಸ್ಕೌಂಟ್ ಅನ್ನು ಘೋಷಿಸಿದೆ. ಏಸರ್​ ಐ ಸೀರಿಸ್ 4ಕೆ ಅಲ್ಟ್ರಾ ಹೆಚ್​ಡಿ ಎಲ್​ಇಡಿ ಆಂಡ್ರಾಯ್ಡ್​ ಟಿವಿ ಖರೀದಿ ಮೇಲೆ ಭಾರೀ ರಿಯಾಯಿತಿ ಇದ್ದು,
47,990 ರೂ ಮುಖಬೆಲೆಯ ಟಿವಿ ಈಗ ಆಫರ್​ನಲ್ಲಿ ಕೇವಲ 29,999 ರೂ.ಗಳಿಗೆ ಲಭ್ಯವಿದೆ. ಈ ಮೂಲಕ ಈ ಸ್ಮಾರ್ಟ್​ಟಿವಿ ಮೇಲೆ 18 ಸಾವಿರ ರೂ. ಗಳವರೆಗೆ ರಿಯಾಯಿತಿ ಲಭ್ಯವಿದೆ.

ಇದಲ್ಲದೆ ಗ್ರಾಹಕರು ಫೆಡರಲ್ ಬ್ಯಾಂಕ್‌ನ ಕ್ರೆಡಿಟ್​ ಕಾರ್ಡ್​ ಮೂಲಕ ಖರೀದಿಸಿದರೆ 2500 ರೂ.ವರೆಗೆ ರಿಯಾಯಿತಿ ದೊರೆಯಲಿದ್ದು, ಈ ಆಫರ್ ಬಳಸಿಕೊಂಡರೆ ಗ್ರಾಹಕರು ಈ 55 ಇಂಚಿನ ಸ್ಮಾರ್ಟ್ ಟಿವಿಯನ್ನು 27,500 ರೂ.ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.

ಇನ್ನು ಗ್ರಾಹಕರು ಈ ಸ್ಮಾರ್ಟ್​​ಟಿವಿಯನ್ನು ಇಎಮ್​ಐ ಮೂಲಕವೂ ಕಡಿಮೆ ವೆಚ್ಚದಲ್ಲಿ ಖರೀದಿಸಬಹುದಾಗಿದ್ದು, ತಿಂಗಳಿಗೆ 1412 ರೂ. ಪಾವತಿಸಿದರೆ ಸಾಕು 55 ಇಂಚಿನ ಸ್ಮಾರ್ಟ್​ಟಿವಿ ನಿಮ್ಮದಾಗುತ್ತದೆ. ನೀವು ಒಂದು ವೇಳೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸುವವರಿಗೆ ಈ ಆಯ್ಕೆಯು ಲಭ್ಯವಿದ್ದು, ಈ ಬ್ಯಾಂಕ್​ ಮೂಲಕ ಇಎಮ್​ಐ ಆಯ್ಕೆಯನ್ನು ಮಾಡುವುದಾದರೆ 36 ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಮೂಲಕ ತಿಂಗಳಿಗೆ 1050 ರೂಾಪಾಯಿಯಂತೆ ಪಾವತಿಸಿದರೆ ಸಾಕು.

ಈ ಸ್ಮಾರ್ಟ್ ಟಿವಿಯಲ್ಲಿ 4K ಡಿಸ್ಪ್ಲೇ, 60 Hz ರಿಫ್ರೆಶ್ ರೇಟ್, 3 ಹೆಚ್​ಡಿಎಮ್​ಐ ಪೋರ್ಟ್‌ಗಳು, 2 ಯುಎಸ್​ಬಿ ಪೋರ್ಟ್‌ಗಳು, ವೈಫೈ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, 30 ವ್ಯಾಟ್ ಸ್ಪೀಕರ್‌ಗಳು, ಡಾಲ್ಬಿ ಆಡಿಯೋದೊಂದಿಗೆ ವಿವಿಧ ಫೀಚರ್ಸ್ ಗಳನ್ನು ಹೊಂದಿದ್ದು, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಹಾಟ್ ಸ್ಟಾರ್ ಡಿಸ್ನಿಯಂತಹ ಅಪ್ಲಿಕೇಶನ್‌ಗಳಿಗೆ ಸಪೋರ್ಟ್ ನೀಡಲಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *