ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ – ಕಿವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ ನಂಬರ್ ವನ್ ಪಟ್ಟಕ್ಕೆ..!!

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ – ಕಿವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ ನಂಬರ್ ವನ್ ಪಟ್ಟಕ್ಕೆ..!!

ನ್ಯೂಸ್ ಆ್ಯರೋ : ಭಾರತೀಯ‌ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿರುವ,‌ ಇಂಡಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ‌ ಪಂದ್ಯಾಟದಲ್ಲಿ ಭಾರತೀಯ ಆಟಗಾರರು ಮತ್ತೊಮ್ಮೆ ಪ್ರವಾಸಿ ತಂಡ ನ್ಯೂಜಿಲೆಂಡನ್ನು ಸೋಲಿಸುವುದರೊಂದಿಗೆ ಓಡಿಐನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಏಕದಿನ‌‌ ಕ್ರಿಕೆಟ್ ನಲ್ಲಿ ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಕೈ ಜಾರಿದ್ದ ನಂಬರ್ 1 ಪಟ್ಟವನ್ನು ಟೀಂ ಇಂಡಿಯಾ ಮರಳಿ ಪಡೆದಿದೆ. ಕೆಲವೇ ತಿಂಗಳಿನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಭಾರತೀಯ ಆಟಗಾರರು ಸತತ ಗೆಲುವಿನೊಂದಿಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ಈ ಸರಣಿಯ ಆರಂಭಕ್ಕೂ ಮೊದಲು ಭಾರತ ತಂಡ ಏಕದಿನ‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಅಗ್ರ ಎರಡು ಸ್ಥಾನಗಳನ್ನು ನ್ಯೂಜಿಲೆಂಡ್ ಹಾಗೂ‌ ಇಂಗ್ಲೆಂಡ್ ಪಡೆದುಕೊಂಡಿತ್ತು. ಆದರೆ ಇದೀಗ ಟೀಂ ಇಂಡಿಯಾ ಕಿವೀಸ್ ತಂಡವನ್ನು‌ ಬಗ್ಗು ಬಡಿದು ಸರಣಿ ವಶ ಪಡಿಸಿಕೊಳ್ಳುವುದರೊಂದಿಗೆ, ಒಟ್ಟು 114 ರೇಟಿಂಗ್ ನೊಂದಿಗೆ ಅಗ್ರಸ್ಥಾನಕ್ಕೇರಿದೆ.

ಭರ್ಜರಿ‌ ಗೆಲುವಿನೊಂದಿಗೆ ಕ್ಲೀನ್ ಸ್ವೀಪ್
ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ, ನಿನ್ನೆ ಇಂಡಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಹೈವೋಲ್ಟೆಜ್ ಪಂದ್ಯಾಟ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತೀಯ ಆಟಗಾರರಲ್ಲಿ, ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (101) ಹಾಗೂ ಶುಭಮನ್ ಗಿಲ್(112) ಸಿಡಿಸಿದ ಭರ್ಜರಿ ಶತಕಗಳೊಂದಿಗೆ ಅದ್ಭುತ ಆರಂಭ ಪಡೆದುಕೊಂಡಿತು.

ಆದರೆ ಸೆಟ್ ಬ್ಯಾಟರ್ ಗಳ ನಿರ್ಗಮನದೊಂದಿಗೆ ಕೆಲ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಟೀಂ ಇಂಡಿಯಾ ಅಂತಿಮವಾಗಿ, 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 385 ರನ್ ಗಳ ಬೃಹತ್ ಸವಾಲು ನಿರ್ಮಾಣ ಮಾಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ 385 ರನ್ ಗಳ ಕಠಿಣ ಸವಾಲು ಬೆನ್ನತ್ತಿದ ನ್ಯೂಜಿಲೆಂಡ್ ತಂಡದ ಆಟಗಾರರಲ್ಲಿ, ಡೆವೋನ್ ಕಾನ್ವೆ (138) ಶತಕ‌ ಸಿಡಿಸಿ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಆದರೆ ಮತ್ತುಳಿದ ಬ್ಯಾಟರ್ ಗಳು ಇಂಡಿಯನ್ ಬೌಲರ್‌ಗಳ ಮುಂದೆ ಮಂಡಿಯೂರಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡ ಬೌಲರ್ ಶಾರ್ದುಲ್ ಠಾಕೂರ್ 45‌ಕ್ಕೆ 3 ವಿಕೆಟ್ ಕಬಳಿಸಿ ಕಿವೀಸ್ ಗೆಲುವಿಗೆ ಕಂಟಕವಾದರು.

ಇನ್ನುಳಿದಂತೆ ಕುಲ್ದೀಪ್ ಯಾದವ್ 65ಕ್ಕೆ 3 ವಿಕೆಟ್ ಹಾಗೂ ಯಜುವೇಂದ್ರ ಚಹಲ್ 42ಕ್ಕೆ 2 ವಿಕೆಟ್ ಪಡೆದ ಸ್ಪಿನ್ ಮೋಡಿಗೆ ಕಿವೀಸ್ ಬ್ಯಾಟರ್ ಗಳು ಗೆಲುವಿನ ಹಳಿಯಿಂದ ಹೊರಬಿದ್ದರು. ಇದರೊಂದಿಗೆ ನ್ಯೂಜಿಲೆಂಡ್ ಒಟ್ಟು 41.2 ಓವರ್ ಎದುರಿಸಿ 295 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಆಲ್ ಔಟ್ ಆಯಿತು.

ಅಂತೂ, ಟೀಂ ಇಂಡಿಯಾ ಇದೀಗ ಅತ್ಯುತ್ತಮ ಫಾರ್ಮ್ ಕಾಯ್ದುಕೊಂಡಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ‌. ಇದಕ್ಕೂ ಮುನ್ನ ಶ್ರೀಲಂಕಾದ ವಿರುದ್ಧ ಆಡಿದ ಏಕದಿನ ಕ್ರಿಕೆಟ್‌ನಲ್ಲೂ ಸರಣಿ ಕೈ ವಶಪಡಿಸಿಕೊಂಡ ಭಾರತೀಯರು, ಶತಕಗಳ ಸುರಿಮಳೆ ತರಿಸಿದ್ದರು. ಇದೇ ರೀತಿ ಮುಂದುವರೆದರೆ ಟೀಂ ಇಂಡಿಯಾ ಹುಡುಗರನ್ನು ತಡೆಯುವವರೆ ಇಲ್ಲವಾಗಬಹುದು..!

Related post

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…

Leave a Reply

Your email address will not be published. Required fields are marked *