ಎರಡನೇ ಮದುವೆ ವಂದತಿ ಬಗ್ಗೆ ತುಂಬಾ ಬೇಜಾರಾಗಿದೆ – ದೇವಸ್ಥಾನಕ್ಕೆ ಹೋಗುವುದೇ ತಪ್ಪಾ ಎಂದಾ ನಟಿ ಪ್ರೇಮಾ..!!

ಎರಡನೇ ಮದುವೆ ವಂದತಿ ಬಗ್ಗೆ ತುಂಬಾ ಬೇಜಾರಾಗಿದೆ – ದೇವಸ್ಥಾನಕ್ಕೆ ಹೋಗುವುದೇ ತಪ್ಪಾ ಎಂದಾ ನಟಿ ಪ್ರೇಮಾ..!!

ನ್ಯೂಸ್ ಆ್ಯರೋ : ಎರಡನೇ ಮದುವೆ ವಿಚಾರವಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಯಿಂದ ತುಂಬಾನೇ ಬೇಜಾರಾಗಿದೆ ಎಂದು ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಪ್ರೇಮಾ, ‘ದೇವಸ್ಥಾನಕ್ಕೆ ಹೋಗುವುದು ತಪ್ಪು ಅಂದ್ರೆ ಏನು ಮಾಡೋದು. ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರ್ಶನ ಮಾಡಲು ಹೋಗಿದ್ದು. ಯಾರಾ ಬಳಿಯೂ ನಾನು ಮದುವೆ ಬಗ್ಗೆ ವಿಚಾರನೇ ಹೇಳಿಕೊಂಡಿಲ್ಲ’ ಎಂದರು.

ಕನ್ನಡದ ಖ್ಯಾತ ನಟಿ ಪ್ರೇಮಾ ಅವರು ಈಚೆಗೆ ಅವರ ವೈಯಕ್ತಿಕ ವಿಚಾರ ಸಂಬಂಧ ನೆಟ್ಟಿಗರಿಗೆ ಆಹಾರವಾಗಿದ್ದರು. ಪ್ರೇಮಾ ಮತ್ತೆ ಮದುವೆ ಆಗ್ತಿದ್ದಾರೆ ಎನ್ನುವ ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಅಂದಹಾಗೆ ಪ್ರೇಮಾ ಮದುವೆ ಸುದ್ದಿ ವೈರಲ್ ಆಗಲು ಕಾರಣವಾಗಿದ್ದು ಈಚೆಗೆ ಅವರು ಉಡುಪಿ ಜಿಲ್ಲೆಯ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದರು.

ಅಲ್ಲಿ ಅವರು ಮದುವೆ ಬಗ್ಗೆ ಕೊರಗಜ್ಜನಲ್ಲಿ ಪ್ರಾರ್ಥಸಿದ್ದರು ಎನ್ನಲಾಗಿತ್ತು. ಆದರೆ ಈ ಘಟನೆ ಬಗ್ಗೆ ಪ್ರೇಮಾ ಪ್ರತಿಕ್ರಿಯಿಸಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

‘ಒಂದು ವೇಳೆ ಮದುವೆ ಆಗುವುದಾದರೆ ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ತಿಳಿಸುತ್ತೇನೆ. ಜೀವನದಲ್ಲಿ ಇನ್ನೂ ಸಾಧಿಸಬೇಕಾದದ್ದು ತುಂಬಾ ಇದೆ’ ಎಂದರು.

ವೈಯ್ಯಕ್ತಿಕ ವಿಷಯದಿಂದ ನಟಿ ಪ್ರೇಮಾ ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದ್ದರು. ಆದಾದ ಬಳಿಕ 2009ರಲ್ಲಿ ಶಿಶಿರಾ ಸಿನಿಮಾದಲ್ಲಿ ನಟಿ ಮತ್ತೇ ಬಣ್ಣದ ಬದುಕಿಗೆ ವಾಪಾಸ್ಸಾಗಿದ್ದರು. 2017ರಲ್ಲಿ ರಿಲೀಸ್ ಆದ ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಳಿಕ ಮತ್ತೆ ಯಾವ ಸಿನಿಮಾದಲ್ಲೂ ಪ್ರೇಮಾ ನಟಿಸಿಲ್ಲ.

Related post

Mangalore : ವೈದ್ಯಕೀಯ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ರಿಂಗ್ ಆಯ್ತು ಬಚ್ಚಿಟ್ಟ ಮೊಬೈಲ್..!! – 17ರ ಹರೆಯದ ಅಪ್ರಾಪ್ತ ಬಾಲಕ ಪೋಲಿಸರ ವಶಕ್ಕೆ..!!

Mangalore : ವೈದ್ಯಕೀಯ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ರಿಂಗ್ ಆಯ್ತು…

ನ್ಯೂಸ್ ಆ್ಯರೋ : ಮಂಗಳೂರಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲಾಗಿರುವ ದೂರಿನ ಪ್ರಕಾರ…
ದಿನ‌ ಭವಿಷ್ಯ 08-05-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-05-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದ ಚೇತರಿಸಿಕೊಳ್ಳುತ್ತೀರಿ. ಆದರೆ ಸ್ವಾರ್ಥಿಗಳಾದ, ಮುಂಗೋಪಿ ವ್ಯಕ್ತಿಯ ಸಹವಾಸವನ್ನು ತಪ್ಪಿಸಿ – ಅವರು ನಿಮ್ಮ ಮೇಲೆ ಒತ್ತಡ ಹಾಕಬಹುದು-ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಇಂವು ನಿಮಗೆ…
ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…

Leave a Reply

Your email address will not be published. Required fields are marked *