ಒಂದೇ ಚಾರ್ಜ್ ನಲ್ಲಿ 500 ಕಿ.ಮೀ ಓಡುತ್ತೆ ಈ ಇವಿ ಸ್ಕೂಟರ್ – ಇದ್ಯಾವ ಸ್ಕೂಟರ್, ಬೆಲೆ ಎಷ್ಟು? ಇಲ್ಲಿದೆ ಡೀಟೈಲ್ಸ್!

ಒಂದೇ ಚಾರ್ಜ್ ನಲ್ಲಿ 500 ಕಿ.ಮೀ ಓಡುತ್ತೆ ಈ ಇವಿ ಸ್ಕೂಟರ್ – ಇದ್ಯಾವ ಸ್ಕೂಟರ್, ಬೆಲೆ ಎಷ್ಟು? ಇಲ್ಲಿದೆ ಡೀಟೈಲ್ಸ್!

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ವಾಹನೋದ್ಯಮ ವಲಯವನ್ನು ಎಲೆಕ್ಟ್ರಿಕಲ್ ವಾಹನಗಳು ಕಬ್ಜ ಮಾಡಿಕೊಳ್ಳುತ್ತಿವೆ. ದಿನಕ್ಕೊಂದರಂತೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಇವಿ ವಾಹನಗಳು ರಸ್ತೆಗಿಳಿಯುತ್ತಿವೆ. ಇದೀಗ, ಕರ್ನಾಟಕ ಮೂಲದ ರಿವೋಟ್ ಮೋಟಾರ್ಸ್ ಭಾರತದಲ್ಲಿ ಹೊಸ ಸ್ಕೂಟರ್‌ಗಳನ್ನು ಪರಿಚಯಿಸಿದ್ದು, ಕಂಪನಿಯು ತನ್ನ ಸ್ಕೂಟರ್‌ನಲ್ಲಿ ನೀಡುತ್ತಿರುವ ಅದ್ಬುತ ವೈಶಿಷ್ಟ್ಯಗಳು, ಭಾರೀ ಮೈಲೇಜ್, ಕೈಗೆಟುಕುವ ಬೆಲೆ, ಅತ್ಯಾಧುನಿಕ ಫೀಚರ್‌ಗಳು ಗ್ರಾಹಕರನ್ನು ಖಂಡಿತ ತನ್ನತ ಸೆಳೆಯಲಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿರುವವರಿಗೆ ಈ ಸ್ಕೂಟರ್‌ಗಳು ಉತ್ತಮ ಆಯ್ಕೆ ಎಂದು ಹೇಳಬಹುದು.ಈ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

5 ರೂಪಾಂತರಗಳಲ್ಲಿ ಲಭ್ಯ!

ಕರ್ನಾಟಕ ಮೂಲದ ರಿವೋಟ್ ಮೋಟರ್ಸ್ ಕಂಪನಿಯ NX100 ಹೆಸರಿನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ ಆಗಿದೆ. ಸ್ಮಾರ್ಟ್ ಪವರ್ ಫುಲ್ ಇವಿ ಬಯಸುವವರು ಇದನ್ನು ಇದನ್ನು ಟ್ರೈ ಮಾಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಕ್ಲಾಸಿಕ್, ಪ್ರೊ, ಮ್ಯಾಕ್ಸ್, ಸ್ಪೋರ್ಟ್ಸ್ ಮತ್ತು ಆಫ್‌ಲ್ಯಾಂಡರ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. ವೈಶಿಷ್ಟ್ಯಗಳು ಮತ್ತು ಬೆಲೆಯು ರೂಪಾಂತರವನ್ನು ಅವಲಂಬಿಸಿ ಈ ಸ್ಕೂಟರ್ ಬೆಲೆ ಬದಲಾಗುತ್ತದೆ. ಈ ಇವಿ ಸ್ಕೂಟರ್ ನಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ಅಳವಡಿಸಲಾಗಿದ್ದು, ಫೀಚರ್ ಗಳು ಹೀಗಿದೆ.

ಒಂದೇ ಚಾರ್ಜ್, 500KM ಮೈಲೇಜ್!

ಈ ಅತ್ಯಾಧುನಿಕ ಇವಿ ಸ್ಕೂಟರ್ ನಲ್ಲಿ ಕಂಪೆನಿಯೂ ಗ್ರಾಹಕ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿದೆ. ಈ ಎಲೆಕ್ಟ್ರಿಕಲ್ ಸ್ಕೂಟೆದ ಒಮ್ಮೆ ಚಾರ್ಜ್ ಆದರೆ 100 ರಿಂದ 300ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಇದಿಷ್ಟೇ ಅಲ್ಲದೇ ಈ ಸ್ಕೂಟರ್ ಸ್ಮಾರ್ಟ್ ಡ್ಯಾಶ್ ಕ್ಯಾಮೆರಾ, ವರ್ಧಿತ ಸುರಕ್ಷತೆ, ಟಚ್‌ಸ್ಕ್ರೀನ್ ಇಂಟರ್ಫೇಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 100 ರಿಂದ 110 ಕಿಲೋಮೀಟರ್ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಒಂದೇ ಚಾರ್ಜ್ ಗೆ 500KM ಮೈಲೇಜ್ ನೀಡುವ ಅಪ್ ಗ್ರೇಡ್ ಆಯ್ಕೆಯನ್ನೂ ಕೂಡ ಅಳವಡಿಸಲಾಗುತ್ತದೆ.

ಇ-ಸ್ಕೂಟರ್ ಬೆಲೆ ಎಷ್ಟು?

ಈ ಅತ್ಯಾಧುನಿಕ ಸ್ಕೂಟರ್ ಬೆಲೆಯನ್ನು ಕಂಪೆನಿಯು ಅದರ ಸಾಮರ್ಥ್ಯ, ಫೀಚರ್ಸ್ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿಂಗಡಿಸಿದೆ. ಅವುಗಳೆಂದರೆ ಟಾಪ್ ಎಂಡ್ ಆಫ್‌ಲ್ಯಾಂಡರ್ ಬೆಲೆ 1.89 ಲಕ್ಷ ರೂ., ಸ್ಪೋರ್ಟ್ಸ್ ವೇರಿಯೆಂಟ್ ಬೆಲೆ ರೂ. 1.39 ಲಕ್ಷ, ಮ್ಯಾಕ್ಸ್ ರೂಪಾಂತರದ ಬೆಲೆ ರೂ.1.59 ಲಕ್ಷ ಮತ್ತು ಪ್ರೊ ರೂಪಾಂತರದ ಬೆಲೆ ರೂ.1.29 ಲಕ್ಷ ಎಂದು ಕಂಪೆನಿಯು ತಿಳಿಸಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *