ನವೆಂಬರ್ 24ರಿಂದ ಕೃಷ್ಣನಗರಿ ಉಡುಪಿಯಲ್ಲಿ ಲಕ್ಷದೀಪೋತ್ಸವ – ಭಕ್ತರಿಗಾಗಿ ಇಲ್ಲಿದೆ ಮಾಹಿತಿ

ನವೆಂಬರ್ 24ರಿಂದ ಕೃಷ್ಣನಗರಿ ಉಡುಪಿಯಲ್ಲಿ ಲಕ್ಷದೀಪೋತ್ಸವ – ಭಕ್ತರಿಗಾಗಿ ಇಲ್ಲಿದೆ ಮಾಹಿತಿ

ನ್ಯೂಸ್ ಆ್ಯರೋ : ದ.ಕ ಜಿಲ್ಲೆಯಲ್ಲಿ ಜನರ ಅಪಾರ ನಂಬಿಕೆಯೇ ದೇವರು ಮತ್ತು ಇಲ್ಲಿ ನೆಲೆ ನಿಂತಿರುವ ದೈವಗಳ ಕಾರ್ಣಿಕ ಶಕ್ತಿ. ದೇಗುಲಗಳಲ್ಲಿ ಜರಗುವ ಜಾತ್ರಾ ಮಹೋತ್ಸವ, ರಥೋತ್ಸವ ಕಣ್ತುಂಬಿಸಿಕೊಳ್ಳುವುದೇ ಒಂದು ರೀತಿಯ ಆನಂದ. ಇದೀಗ ಉಡುಪಿಯ ಲಕ್ಷದೀಪೋತ್ಸವವು ಕೂಡಾ ಶೀಘ್ರದಲ್ಲೇ ಆರಂಭವಾಗಲಿದ್ದು ಸಿದ್ಧತೆಗಳು ಭರ್ಜರಿಯಿಂದ ಸಾಗುತ್ತಿದೆ.

ಈಗಾಗಲೇ ಕಾರ್ತಿಕ ಮಾಸ ಆರಂಭವಾಗಿದ್ದು ಎಲ್ಲೆಡೆ ದೀಪೋತ್ಸವ, ಲಕ್ಷದೀಪೋತ್ಸವದಂತಹ ಧಾರ್ಮಿಕ ಕಾರ್ಯಗಳು ಶುರುವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ದೀಪಾರಾಧನೆ, ದೀಪಾರ್ಪಣೆ, ದೀಪೋತ್ಸವಕ್ಕೆ ಕಾರ್ತಿಕ ಮಾಸವೇ ಸೂಕ್ತ ಮಾಸವಾಗಿದೆ. ವಿಷ್ಣುವಿಗೆ ಅರ್ಪಿತವೆಂದೇ ಭಾವಿಸಲಾಗುವ ಈ ತಿಂಗಳು ಶಿವದೇವರಿಗೂ ಬಲುಪ್ರಿಯ. ಶಿವ ಹಾಗೂ ಕೃಷ್ಣನ ಆರಾಧನಾ ಸ್ಥಳಗಳಲ್ಲಿ ದೀಪೋತ್ಸವ ನಡೆಸಲಾಗುತ್ತದೆ. ಅದರಲ್ಲಿ ಧರ್ನಸ್ಥಳ ದೀಪೋತ್ಸವವೂ ಒಂದು. ಇನ್ನು ಕೃಷ್ಣನಗರಿ ಉಡುಪಿ ಶ್ರೀಕೃಷ್ಣ ಮಠವೂ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಲಕ್ಷ ದೀಪೋತ್ಸವ ನಡೆಯಲಿದೆ.

ಈ ಬಾರಿ ಉಡುಪಿ ಲಕ್ಷ ದೀಪೋತ್ಸವ ಯಾವಾಗ..?

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 24ರಿಂದ 27ರವರೆಗೆ 4ದಿನಗಳ ಪರ್ಯಂತ ಲಕ್ಷದೀಪೋತ್ಸವ ನಡೆಯಲಿದೆ. ಉತ್ಥಾನ ದ್ವಾದಶಿಯಿಂದ ಹುಣ್ಣಿಮೆಯವರೆಗೆ ಲಕ್ಷದೀಪೋತ್ಸವ ನಡೆಯಲಿದ್ದು ಬಳಿಕ ರಥೋತ್ಸವ ಕೂಡಾ ಆರಂಭವಾಗುತ್ತದೆ.

ಯಾವ ರೀತಿ ಸಿದ್ಧತೆಗಳು ನಡೆಯುತ್ತಿದೆ..?

ಈಗಾಗಲೇ ಮಠದ ರಥಬೀದಿಯಲ್ಲಿ ರಥ ಕಟ್ಟುವ ಕಾರ್ಯ ಕೂಡಾ ಆರಂಭವಾಗಿದ್ದು ಲಕ್ಷದೀಪೋತ್ಸವಕ್ಕೂ ಸಿದ್ಧತೆಗಳು ಆರಂಭಗೊಳ್ಳುತ್ತಿದೆ. ದೀಪೋತ್ಸವಕ್ಕಾಗಿ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ರಥಬೀದಿಯ ಸುತ್ತ ಸಲಾಕೆಗಳನ್ನು ಅಳವಡಿಸಲಾಗಿದ್ದು ಇದರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಣತೆಗಳನ್ನು ಇಡಲಾಗಿದೆ. ಪ್ರತೀ ದಿನ 25ಸಾವಿರ ಬತ್ತಿ ಹಾಗೂ 75ಲೀ ಎಳ್ಳೆಣ್ಣೆ ಬಳಸಿಕೊಂಡು ಮಠದ ಸುತ್ತಲೂ ದೀಪ ಬೆಳಗಿಸಲಾಗುತ್ತದೆ.

ಪ್ರಮುಖ ಮಠಾಧೀಶರಿಂದ ಲಕ್ಷದೀಪೋತ್ಸವಕ್ಕೆ ಹಣತೆ ಮುಹೂರ್ತ:

ಲಕ್ಷದೀಪೋತ್ಸವದ ಹಿನ್ನೆಲೆ

ನವೆಂಬರ್ 24ರ ಬೆಳಿಗ್ಗೆ ಶ್ರೀ ಕೃಷ್ಣ ಮಠದ ಪ್ರಾಂಗಣದಲ್ಲಿರುವ ತುಳಸಿಕಟ್ಟೆಯಲ್ಲಿ ತುಳಸಿ ಪೂಜೆ ನಡೆಯಲಿದೆ. ಮಧ್ಯಾಹ್ನ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ನೇತೃತ್ವದಲ್ಲಿ ವಿವಿಧ ಮಠಾಧೀಶರು ಲಕ್ಷದೀಪೋತ್ಸವಕ್ಕೆ ಹಣತೆ ಮುಹೂರ್ತ ನೆರವೇರಿಸಲಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *