ಕೈಗೆಟುಕುವ ದರದಲ್ಲಿ ಗೇಮಿಂಗ್​ ಫೋನ್; ಚಿಪ್​ಸೆಟ್​ ಸೇರಿದಂತೆ ಅನೇಕ ವೈಶಿಷ್ಟ್ಯಗಳು

Best Gaming Mobile Phones
Spread the love

ನ್ಯೂಸ್ ಆ್ಯರೋ: ಮಾರುಕಟ್ಟೆಯಲ್ಲಿ ಅನೇಕ ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿವೆ. ಅದರ ಬೆಲೆ ರೂ 20,000 ಕ್ಕಿಂತ ಕಡಿಮೆ. ಈ ಫೋನ್‌ಗಳಲ್ಲಿ ನೀವು ಉತ್ತಮ ಚಿಪ್‌ಸೆಟ್, ದೀರ್ಘ ಬಾಳಿಕೆಯ ಬ್ಯಾಟರಿ ಮತ್ತು ಬೆಸ್ಟ್​ ಸ್ಕ್ರೀನ್​ ಸೇರಿದಂತೆ ಅನೇಕ ಫೀಚರ್​ಗಳನ್ನು ಒಳಗೊಂಡಿದೆ. ರೂ. 20,000 ಒಳಗಿನ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗಾಗಿ, ಮೊಟೊರೊಲಾ, ಸ್ಯಾಮ್​ಸಂಗ್​, ಐಕ್ಯೂ, ನಥಿಂಗ್ ಮತ್ತು ರೆಡ್​ಮಿ ನಂತಹ ಬ್ರ್ಯಾಂಡ್‌ಗಳು ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ.

ಮೊಟೊ ಎಡ್ಜ್​ 50 ನಿಯೋ ಫ್ಲಿಪ್‌ಕಾರ್ಟ್‌ನಲ್ಲಿ 21,999 ರೂ.ಗೆ ಲಭ್ಯವಿದೆ. ಬ್ಯಾಂಕ್ ಡಿಸ್ಕೌಂಟ್​ನೊಂದಿಗೆ ಈ ಫೋನ್​ ರೂ. 19,999 ಗೆ ಖರೀದಿಸಬಹುದು. ಇದು MediaTek Dimension 7300 ಚಿಪ್‌ಸೆಟ್‌ನ ಸಪೋರ್ಟ್​ ಜೊತೆ ಬರುತ್ತದೆ. ಫೋನ್ ಮೂರು ರಿಯರ್​ ಕ್ಯಾಮರಾಗಳನ್ನು ಹೊಂದಿದೆ. ಅದರಲ್ಲಿ 50MP ಮೇನ್​ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಕ್ಯಾಮರಾ ಮತ್ತು 10MP ಟೆಲಿಫೋಟೋ ಕ್ಯಾಮೆರಾ ಸೇರಿವೆ.

ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎ15 5ಜಿ ಸಹ 20,000 ರೂಪಾಯಿಗಳ ಬಜೆಟ್‌ನಲ್ಲಿ ಉತ್ತಮ ಆಯ್ಕೆಯಾಗಿದೆ. ಅಮೆಜಾನ್​ನಲ್ಲಿ ಇದರ ಬೆಲೆ 14,998 ರೂ.ಗೆ ಲಭ್ಯವಿದೆ. MediaTek Dimension 6100+ ಚಿಪ್‌ಸೆಟ್ ಹೊಂದಿರುವ ಫೋನ್‌ಗಳಲ್ಲಿ ಉತ್ತಮ ಗೇಮಿಂಗ್ ಅನುಭವವನ್ನು ಕಾಣಬಹುದು. ಇದು 50MP ರಿಯರ್​ ಕ್ಯಾಮೆರಾ, 5MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮರಾ ಮತ್ತು 2MP ಮ್ಯಾಕ್ರೋ ಕ್ಯಾಮರಾವನ್ನು ಹೊಂದಿದೆ.

ಐಕ್ಯೂ ಜಡ್​9 ಅನ್ನು ಅಮೆಜಾನ್​ನಲ್ಲಿ 18,498 ರೂ.ಗಳಿಗೆ ಖರೀದಿಸಬಹುದು. ಇದು MediaTek ಡೈಮೆನ್ಸಿಟಿ 7200 ಚಿಪ್‌ಸೆಟ್‌ ಅನ್ನು ಸಪೋರ್ಟ್​ ಮಾಡುತ್ತದೆ. TSMC ಯ ಎರಡನೇ ತಲೆಮಾರಿನ 4nm ಪ್ರಕ್ರಿಯೆಯನ್ನು ಬಳಸಿ ತಯಾರಿಸಲಾಗಿದೆ. ಇದರ ಕ್ಯಾಮರಾ ಸೆಟಪ್ 50MP Sony IMX882 OIS ಕ್ಯಾಮರಾವನ್ನು ಒಳಗೊಂಡಿದೆ. ಅದು 4K ವಿಡಿಯೋ ರೆಕಾರ್ಡಿಂಗ್, ಸೂಪರ್ ನೈಟ್ ಮೋಡ್, 2x ಪೋಟ್ರೇಟ್ ಜೂಮ್ ಮತ್ತು ತ್ವರಿತ ಫೋಟೋಗಳು ಮತ್ತು ವಿಡಿಯೋಗಳಿಗಾಗಿ 50MP UHD ಮೋಡ್ ಅನ್ನು ಸಪೋರ್ಟ್​ ಮಾಡುತ್ತದೆ.

ನಥಿಂಗ್ 2ಎ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 23,999 ಕ್ಕೆ ಲಭ್ಯವಿದೆ. ಆದ್ರೆ ಇದು 3 ಸಾವಿರ ರೂಪಾಯಿಗಳ ಬ್ಯಾಂಕ್ ಆಫರ್​ನೊಂದಿಗೆ 20,999 ರೂ.ಗೆ ಖರೀದಿಸಬಹುದು. ಇದು ಮೀಡಿಯಾ ಟೆಕ್ ಡೈಮೆನ್ಶನ್ 7200 ಪ್ರೊ ಚಿಪ್‌ಸೆಟ್ ಅನ್ನು ಹೊಂದಿದೆ. ಇದು 6.7 ಇಂಚಿನ ಫುಲ್​ HD+ ಡಿಸ್​ಪ್ಲೇ ಹೊಂದಿದೆ. ಇದಲ್ಲದೇ, 5000mAh ಬ್ಯಾಟರಿಯನ್ನು ದಿನವಿಡೀ ಬಳಸಬಹುದಾಗಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಡ್ಯುಯಲ್​ 50MP ಕ್ಯಾಮರಾಗಳನ್ನು ಹೊಂದಿದೆ ಮತ್ತು ಸೆಲ್ಫಿಗಾಗಿ 32MP ಫ್ರಂಟ್​ ಕ್ಯಾಮರಾ ಹೊಂದಿದೆ.

ಅಮೆಜಾನ್​ನಲ್ಲಿ ರೆಡ್​ಮಿ ನೋಟ್​ 13 ಪ್ರೊ ಬೆಲೆ 18,250 ರೂ.ಗೆ ಲಭ್ಯವಿದೆ. ಇದು Snapdragon 7s Gen 2 ಚಿಪ್‌ಸೆಟ್‌ನ ಸಪೋರ್ಟ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1.5K 6.67 ಇಂಚಿನ AMOLED ಡಿಸ್​ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬರುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!