ಜಿಎಸ್‌ಟಿ ಹಿಂದಿನ ಮಾಸ್ಟರ್ ಮೈಂಡ್‌ಗೆ ಆರ್‌ಬಿಐ ಗವರ್ನರ್ ಸ್ಥಾನ; ಸಂಜಯ್ ಮಲ್ಹೋತ್ರಾ ಸಾಧನೆಗಳೇನು ತಿಳಿಯಿರಿ
ನ್ಯೂಸ್ ಆ್ಯರೋ: ಭಾರತೀಯ ರಿಸರ್ವ್ ಬ್ಯಾಂಕ್ಗೆ ನೂತನ ಗವರ್ನರ್ ನೇಮಕವಾಗಿದ್ದು, ಮೂರು ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ 26 ನೇ ಗೌವರ್ನರ್ ಆಗಿ ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಶಕ್ತಿಕಾಂತ ದಾಸ್ ಆರು ವರ್ಷಗಳ ಅವಧಿಯು ಇಂದಿಗೆ ಮುಕ್ತಾಯಗೊಳ್ಳುತ್ತದೆ. ಹಾಗಾದರೆ ಶಕ್ತಿಕಾಂತ ದಾಸ್ ಅವರ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಸಂಜಯ್ ಮಲ್ಹೋತ್ರಾ ಯಾರು..? ಅವರ ಹಿನ್ನಲೇ ಏನು..? ತಿಳಿದುಕೊಳ್ಳಿ
33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಪ್ರದರ್ಶಿತ ನಾಯಕತ್ವ ಮತ್ತು ಶ್ರೇಷ್ಠತೆಗೆ ಹೆಸರಾಗಿರುವ ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್‌ನ 1990-ಬ್ಯಾಚ್ ಭಾರತೀಯ ಆಯೋಗ ಸೇವೆಯ (IAS) ಅಧಿಕಾರಿಯಾಗಿದ್ದು, ಶಕ್ತಿಕಾಂತ ದಾಸ್ ಅವರಿಂದ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಸರ್ಕಾರದ ವಿಶ್ವಾಸಾರ್ಹ ಅಧಿಕಾರಿಗಳಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿರವ ಸಂಜಯ್ ಅವರ ಅಧಿಕಾರಾವಧಿಯು ಮಂಗಳವಾರ ಡಿಸೆಂಬರ್ 10, 2024 ರಿಂದ ಪ್ರಾರಂಭಗೊಳ್ಳಲಿದ್ದು, ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವೀಧರರಾಗಿ ದ್ದು, ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
ಕೇಂದ್ರ ಹಾಗೂ ರಾಜಸ್ಥಾನ ರಾಜ್ಯ ಸರ್ಕಾರದ ಮಟ್ಟದಲ್ಲಿ ಹಣಕಾಸು ಮತ್ತು ತೆರಿಗೆಯಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿರುವ ಮಲ್ಹೋತ್ರಾ ಅವರು ಕಂದಾಯ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೊದಲು ಮಲ್ಹೋತ್ರಾ ಅವರು ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇದರೊಂದಿಗೆ ಭಾರತದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಮತ್ತು ಬ್ಯಾಂಕಿಂಗ್ ವಲಯವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಮಲ್ಹೋತ್ರಾ ಅವರು ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೂ ಇವರು ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ವಿದ್ಯುತ್, ಹಣಕಾಸು ಮತ್ತು ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸಂಜಯ್ ಮಲ್ಹೋತ್ರಾ ಅವರು ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿದ್ದು, ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್ಇಸಿಯ ಛೇರ್ಮನ್ ಮತ್ತು ಎಂಡಿಯಾಗಿ ಕೆಲಸ ಮಾಡಿದ್ದರು. ಜಿಎಸ್‌ಟಿ ಮಂಡಳಿಯಲ್ಲೂ ಅವರಿದ್ದರು. ವಿದ್ಯುತ್, ಹಣಕಾಸು, ತೆರಿಗೆ, ಐಟಿ, ಗಣಿ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಸಂಜಯ್ ಮಲ್ಹೋತ್ರಾ ಕೆಲಸ ಮಾಡಿದ ಅನುಭವಿ ಎನಿಸಿದ್ದಾರೆ.
ರಾಜಸ್ಥಾನದ ಬಹುತೇಕ ಎಲ್ಲ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಮಲ್ಹೋತ್ರಾ ಅವರು ಇಂದನ ಸಚಿವಾಲಯದಲ್ಲಿ ಅಪರ ಕಾರ್ಯದರ್ಶಿಯಾಗಿದ್ದ ಅವರು 3 ಲಕ್ಷ ಕೋಟಿ ರೂ ಮೊತ್ತದ ವಿದ್ಯುತ್ ವಿತರಣೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಡಿಸೆಂಬರ್ 10 ರ ಇಂದು ಮೂರು ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
Leave a Comment