ಹಸೆಮಣೆ ಏರಲಿದ್ದಾರಂತೆ ಸೋನು ಗೌಡ; ಹುಡುಗ ಯಾರು ಗೊತ್ತಾ ?
ನ್ಯೂಸ್ ಆ್ಯರೋ: ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕವೇ ಸದ್ದು ಮಾಡುತ್ತಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ ಬಗ್ಗೆ ಇದೀಗ ಹೊಸದೊಂದು ವಿಷಯ ವೈರಲ್ ಆಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸೋನು ಗೌಡ, ಬರೋಬ್ಬರಿ 1.1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊಗಳ ಮೂಲಕವೇ ಸದ್ದು ಮಾಡ್ತಿರ್ತಾರೆ. ಅದರ ಜೊತೆಗೆ ಪರ್ಸನಲ್ ಲೈಫ್ ಬಗ್ಗೆ ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ.
ಸುದ್ದಿ ಏನಂದ್ರೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅಷ್ಟೇ ಅಲ್ಲ ಇವರು ಮದುವೆಯಾಗುತ್ತಿರುವ ಹುಡುಗ ದರ್ಶನ್ ತೂಗುದೀಪ್ ಅಭಿಮಾನಿ ತಿಲಕ್ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಯಾವುದೋ ಒಂದು ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಸೋನು ಗೌಡ ಹಾಗೂ ಹುಡುಗನ ಫೋಟೊಗಳನ್ನು ಹಂಚಿಕೊಂಡಿದ್ದು, ಇದು ಸದ್ಯ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಸೋನು ಗೌಡ ಇಲ್ಲಿವರೆಗೂ ಏನೂ ಮಾಹಿತಿ ಕೊಟ್ಟಿಲ್ಲ. ಹಾಗಾಗಿ ಈ ಸುದ್ದಿ ನಿಜ ಹೌದೇ? ಅಲ್ಲವೇ ಎನ್ನುವ ಕುರಿತು ಯಾವುದೇ ಸ್ಪಷ್ಟನೆ ಇಲ್ಲ.
Leave a Comment