ಪತ್ನಿ, ಮಗನ ಕೊಂದು ಪತಿ ಆತ್ಮಹತ್ಯೆ ಕೇಸ್; ಅಪ್ಪ-ಅಮ್ಮ- ಸಹೋದರಿ ಅರೆಸ್ಟ್
ನ್ಯೂಸ್ ಆ್ಯರೋ: ಎರಡು ದಿನಗಳ ಹಿಂದೆಯಷ್ಟೇ ಸಹಕಾರಿ ಬ್ಯಾಂಕ್ ಉದ್ಯೋಗಿ ಕಾರ್ತಿಕ್ ಭಟ್, ಪತ್ನಿ ಹಾಗೂ ಮಗನನ್ನು ಕೊಂದು ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಭಟ್ ತನ್ನ ಪತ್ನಿ ಪ್ರಿಯಾಂಕ ಹಾಗೂ ಮಗ ಹೃದಯ್ ನನ್ನು ಹತ್ಯೆಗೈದು ಬಳಿಕ ಮಂಗಳೂರಿನ ಮುಲ್ಕಿ ಹೊರವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದ.
ಪ್ರಕರಣದ ತನಿಖೆ ವೇಳೆ ಪೊಲಿಸರಿಗೆ ಕಾರ್ತಿಕ್ ಭಟ್ ಬರೆದಿರುವ ಡೆತ್ ನೋಟ್ ಲಭ್ಯವಾಗಿದೆ. ಅದರಲ್ಲಿ ನಮ್ಮ ಸಂಸಾರ ಹಾಳು ಮಾಡಿದ್ದೇ ತಂದೆ-ತಾಯಿ, ಸಹೋದರಿ. ಇಂತಹ ತಂದೆ, ತಾಯಿ ಯಾರಿಗೂ ಸಿಗಬಾರದು. ನನ್ನ ಈ ಪರಿಸ್ಥಿತಿಗೆ ಇವರೇ ಕಾರಣ. ನಾವು ಸತ್ತ ಮೇಲೆ ದಯವಿಟ್ಟು ನಮ್ಮ ಅಂತ್ಯಸಂಸ್ಕಾರವನ್ನು ಅತ್ತೆ ಮಾವ ನಡೆಸಿಕೊಡಬೇಕು ಎಂದು ಕಾರ್ತಿಕ್ ಬರೆದಿದ್ದಾರೆ.
ಇನ್ನು ಕಾರ್ತಿಕ್ ಅತ್ತೆ-ಮಾವ ಅಂದರೆ ಪ್ರಿಯಾಂಕಾ ಪೋಷಕರು ಕೂಡ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಕಾರ್ತಿಕ್ ನ ತಂದೆ, ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಭಟ್ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ ಕಾರಣ ಕೆಲಸ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ, ಪ್ರತೀ ದಿನ ಸುರತ್ಕಲ್ ಗೆ ಜಿಮ್ ಗೆ ಹೋಗುತ್ತಿದ್ದು, ನಂತರ ಮನೆಯ ಕೋಣೆಯಲ್ಲಿ ಇರುತ್ತಿದ್ದಳು ಇಡೀ ದಿನ ಮನೆಯ ಕೊಣೆಯಲ್ಲಿ ಏನು ಮಾಡುತ್ತಿದ್ದಳು ಎಂಬುದೇ ಪ್ರಶ್ನೆಯಾಗಿದೆ, ಕಾರ್ತಿಕ ಮತ್ತು ಪ್ರಿಯಾಂಕ ಮೊಬೈಲ್ ಗಳು ಶೌಚಾಲಯದ ಕೊಮೊಡ್ ನಲ್ಲಿ ಸಿಕ್ಕಿದ್ದು ಈ ರೀತಿ ಯಾಕೆ ಮಾಡಿದ್ದಾರೆ ಎಂಬುವುದು ಇನಷ್ಟು ಸಂಶಯಕ್ಕೆ ಎಡೆ ಮಾಡಿದೆ. ಸದ್ಯ ಮುಲ್ಕಿ ಪೊಲೀಸರು ಇನ್ನಷ್ಟು ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ.
Leave a Comment