ಕಿಂಗ್ ಕೊಹ್ಲಿಯ ಫಿಟ್ನೆಸ್ ಡಯಟ್ ರಹಸ್ಯ ಹೀಗಿದೆ; ಟಾಪ್‌ 10 ಫೇವರಿಟ್‌ ಫುಡ್‌ಗಳಿವು

virat
Spread the love

ನ್ಯೂಸ್ ಆ್ಯರೋ: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​, ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಇಂದು (ನವೆಂಬರ್ 5) 36ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. 36ರಲ್ಲೂ ವಿರಾಟ್ ಫಿಟ್ನೆಸ್​ಗೆ ಯಾವ ಉತ್ತರವೂ ಇಲ್ಲ. ವಿಶ್ವದ ಫಿಟ್ಟೆಸ್ಟ್ ಕ್ರಿಕೆಟರ್​ಗಳಲ್ಲಿ ಒಬ್ಬರು ಅಂತಲೂ ಕರೀತಾರೆ. ಆದ್ರೆ ಒಂದು ಕಾಲದಲ್ಲಿ ವಿರಾಟ್​ಗೆ ರುಚಿ ರುಚಿ ತಿನಿಸುಗಳೆಂದ್ರೆ ತುಂಬಾ ಇಷ್ಟ. ದೆಹಲಿ ಗಲ್ಲಿಗಳಲ್ಲಿ ಸಿಗೋ ಛೋಲೆ ಭಟೂರೆಯಿಂದ ಹಿಡಿದು ಪನೀರ್ ಖುರ್ಚನ್​ವರೆಗೆ ತಿನ್ನದೆ ಒಂದು ದಿನವೂ ಇರೋಕೆ ಆಗ್ತಿರ್ಲಿಲ್ಲ.

Virat Kohli Die

ಇತ್ತೀಚಿನ ವರ್ಷಗಳಲ್ಲಿ ಅವರು ಆರೋಗ್ಯ ಸಮಸ್ಯೆಯಿಂದ ಅವರು ಪೂರ್ತಿ ವೆಜಿಟೇರಿಯನ್‌ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಪಾಲಿಸುವ ಡಯಟ್ ಪ್ಲಾನ್ ಹೇಗಿದೆ ಗೊತ್ತಾ ?.

ಆಹಾರ ಕ್ರಮದ 90% ಆವಿಯಲ್ಲಿ ಬೇಯಿಸಿದ ಆಹಾರ ತಿನ್ನುತ್ತಾರೆ. ಸಾಸ್ ಮತ್ತು ಮಸಾಲೆಗಳನ್ನು ಬಿಟ್ಟು ಉಪ್ಪು, ಮೆಣಸು ಬಳಸುತ್ತಾರೆ. ವಿವಿಧ ಸಲಾಡ್‌ಗಳನ್ನು ಸೇವಿಸುತ್ತಾರೆ. ಪ್ರೋಟೀನ್‌ಗಾಗಿ ರಾಜ್ಮಾವನ್ನು ತಿನ್ನುತ್ತಾರೆ. ಎಣ್ಣೆಯುಕ್ತ ಮತ್ತು ಹುರಿದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ.

1715777873911 ViratKohlisDiet

ಪಾಲಕ್, ನಿಂಬೆರಸ, ಉಪ್ಪು, ಮೆಣಸು ಸಲಾಡ್‌ಗಳು ಕೊಹ್ಲಿಯ ಡಯಟ್‌ನ ಪ್ರಮುಖ ಭಾಗವಾಗಿದೆ.ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಕೊಹ್ಲಿ ಗ್ರಿಲ್ಡ್ ತರಕಾರಿ ಮತ್ತು ಸೂಪ್ ಸೇವಿಸುತ್ತಾರೆ. ಪಪ್ಪಾಯ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ ಅವರ ಪ್ರಿಯ ಹಣ್ಣುಗಳು.ಹುರಿದ ಆಹಾರ, ಹೆಚ್ಚು ಮಸಾಲೆಯುಕ್ತ ಆಹಾರವನ್ನು ಕೊಹ್ಲಿ ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಹಾಲಿನ ಉತ್ಪನ್ನಗಳ ಬದಲು ಟೋಫು ಮತ್ತು ಸೋಯಾ ಆಧಾರಿತ ಆಹಾರಗಳನ್ನು ಸೇವಿಸುತ್ತಾರೆ. ಕೊಹ್ಲಿ ಸ್ಟ್ರೆಂತ್ ಟ್ರೈನಿಂಗ್, ಕಾರ್ಡಿಯೋ ಮುಂತಾದ ಹೆಚ್ಚಿನ ತೀವ್ರತೆಯ ವರ್ಕ್‌ಔಟ್‌ಗಳನ್ನು ಮಾಡುತ್ತಾರೆ.

ದೆಹಲಿಯವರಾದ ವಿರಾಟ್​ಗೆ ಅಶೋಕ್ ನಗರದ ರಾಮ್ ಕಿ ಛೋಲೆ ಭಟೂರೆ ಅಂದ್ರೆ ತುಂಬಾ ಇಷ್ಟ. ಕಳೆದ ಕೆಲವು ವರ್ಷಗಳಿಂದ ಮಾರ್ಕೆಟ್​ನ ಛೋಲೆ ಭಟೂರೆ ತಿಂದಿಲ್ಲ. ಆದ್ರೆ ಚೀಟ್ ಡೇ ಅಂತ ಬಂದ್ರೆ ಛೋಲೆ ತಿಂತಾರಂತೆ.

ಪಕ್ಕಾ ಪಂಜಾಬಿ ಹುಡುಗ ವಿರಾಟ್​ಗೆ ರಾಜ್ಮಾ ಚಾವಲ್ ಅಂದ್ರೆ ಪ್ರಾಣ. ಒಂದೇ ಸಮಯದಲ್ಲಿ ಎರಡೆರಡು ಪ್ಲೇಟ್ ರಾಜ್ಮಾ ಚಾವಲ್ ತಿಂತಿದ್ರಂತೆ. ಇದು ಪ್ರೋಟೀನ್​ನ ಉತ್ತಮ ಮೂಲ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಇರುತ್ತೆ.

1698389794168 Virat Kohli

ಒಂದು ಸಂದರ್ಶನದಲ್ಲಿ ವಿರಾಟ್​, ಪನೀರ್ ಖುರ್ಚನ್ ಅಂದ್ರೆ ತುಂಬಾ ಇಷ್ಟ ಅಂತ ಹೇಳಿದ್ರು. ಪನೀರ್​ನ ತವಾ ಮೇಲೆ ಹುರಿದು ಮಸಾಲೆ ಹಾಕಿ ಮಾಡೋ ಈ ಆಹಾರ ವಿರಾಟ್​ಗೆ ತುಂಬಾ ಇಷ್ಟ. ಆದ್ರೆ ಈಗ ಬಿಟ್ಟಿದ್ದಾರೆ.

ಒಂದು ಸಂದರ್ಶನದಲ್ಲಿ ವಿರಾಟ್​, ಪನೀರ್ ಖುರ್ಚನ್ ಅಂದ್ರೆ ತುಂಬಾ ಇಷ್ಟ ಅಂತ ಹೇಳಿದ್ದಾರೆ. ಪನೀರ್​ನ ತವಾ ಮೇಲೆ ಹುರಿದು ಮಸಾಲೆ ಹಾಕಿ ಮಾಡೋ ಈ ಆಹಾರ ವಿರಾಟ್​ಗೆ ತುಂಬಾ ಇಷ್ಟ. ಆದ್ರೆ ಈಗ ಬಿಟ್ಟಿದ್ದಾರೆ.

ಚಿಕ್ಕವರಿದ್ದಾಗ ಮ್ಯಾರಿಗೋಲ್ಡ್ ಬಿಸ್ಕೆಟ್ ಮೇಲೆ ಮಲೈ ಹಚ್ಚಿ ತಿನ್ನೋದು ವಿರಾಟ್​ಗೆ ತುಂಬಾ ಇಷ್ಟವಿತ್ತಂತೆ. 10 ಬಿಸ್ಕೆಟ್ ಮೇಲೆ ಮಲೈ ಹಚ್ಚಿ, ಮತ್ತೆ 10 ಬಿಸ್ಕೆಟ್ ಇಟ್ಟು ಸ್ಯಾಂಡ್​ವಿಚ್ ಮಾಡಿ ತಿಂತಿದ್ರಂತೆ.

ವಿರಾಟ್​ಗೆ ಕ್ವಾಸಾಟ ಐಸ್​ಕ್ರೀಮ್ ಅಂದ್ರೆ ತುಂಬಾ ಇಷ್ಟ. ದೆಹಲಿಯಲ್ಲಿದ್ದಾಗ ರಾತ್ರಿ ಫ್ಯಾಮಿಲಿ ಜೊತೆ ಹೋಗಿ ಕ್ವಾಸಾಟ ಐಸ್​ಕ್ರೀಮ್ ತಿಂತಿದ್ರಂತೆ.

ವೆಜಿಟೇರಿಯನ್ ಆಗೋ ಮೊದಲು ವಿರಾಟ್​ಗೆ ಚಿಕನ್ ಅಂದ್ರೆ ತುಂಬಾ ಇಷ್ಟ. ಗ್ರಿಲ್ಡ್ ಚಿಕನ್​, ತಂದೂರಿ ಚಿಕನ್ ತಿನ್ನೋದು ಇಷ್ಟ ಪಡ್ತಿದ್ರು. ಕಡಿಮೆ ಎಣ್ಣೆ ಬಳಸಿ ಮಾಡೋದ್ರಿಂದ ಇಷ್ಟ ಪಡ್ತಿದ್ರಂತೆ. ಆದ್ರೆ ಈಗ ನಾನ್​ವೆಜ್ ಬಿಟ್ಟು ವೆಜಿಟೇರಿಯನ್ ಡಯಟ್ ಫಾಲೋ ಮಾಡ್ತಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ಇಬ್ಬರಿಗೂ ಏಷ್ಯನ್ ಕ್ಯುಸಿನ್ ಅಂದ್ರೆ ತುಂಬಾ ಇಷ್ಟ. ಸ್ಟಿಕಿ ರೈಸ್, ಸುಶಿ ಶೀಟ್, ತರಕಾರಿಗಳಿಂದ ಮಾಡೋ ಸುಶಿ ಇಬ್ಬರಿಗೂ ಇಷ್ಟ.

ವಿರಾಟ್​ಗೆ ಗಾರ್ಲಿಕ್ ನಾನ್ ಅಂದ್ರೆ ತುಂಬಾ ಇಷ್ಟ. ಪನೀರ್ ಖಾನಾ, ಚಿಕನ್ ಜೊತೆ ಗಾರ್ಲಿಕ್ ನಾನ್ ತಿನ್ನೋದು ಇಷ್ಟ ಪಡ್ತಿದ್ರು. ಆದ್ರೆ ಮೈದ ಇರೋದ್ರಿಂದ ಈಗ ಅದನ್ನ ಬಿಟ್ಟಿದ್ದಾರೆ.

ವಿರಾಟ್​ಗೆ ಗುಲಾಬ್ ಜಾಮೂನ್ ಅಂದ್ರೆ ತುಂಬಾ ಇಷ್ಟ. ಬಿಸಿ ಬಿಸಿ ಗುಲಾಬ್ ಜಾಮೂನ್ ಜೊತೆ ವೆನಿಲ್ಲಾ ಐಸ್​ಕ್ರೀಮ್ ಹಾಕಿ ತಿನ್ನೋದು ಇಷ್ಟ ಪಡ್ತಿದ್ರಂತೆ. ಈ ಕಾಂಬಿನೇಷನ್ ತುಂಬಾ ರುಚಿ ಅಂತಾರೆ.

Leave a Comment

Leave a Reply

Your email address will not be published. Required fields are marked *

error: Content is protected !!