Solar Eclipse : ಇಂದು ವರ್ಷದ ಮೊದಲ ಸೂರ್ಯಗ್ರಹಣ – ಇದರ ವಿಶೇಷತೆಯೇನು? ಭಾರತದಲ್ಲಿ ಸೂತಕ ಆಚರಣೆ ಇಲ್ಲ ಯಾಕೆ?

Solar Eclipse : ಇಂದು ವರ್ಷದ ಮೊದಲ ಸೂರ್ಯಗ್ರಹಣ – ಇದರ ವಿಶೇಷತೆಯೇನು? ಭಾರತದಲ್ಲಿ ಸೂತಕ ಆಚರಣೆ ಇಲ್ಲ ಯಾಕೆ?

ನ್ಯೂಸ್ ಆ್ಯರೋ : ಈ ವರ್ಷದ ಮೊದಲ ಸೂರ್ಯಗ್ರಹಣ (Solar Eclipse 2024) ಏಪ್ರಿಲ್ 8ರಂದು ಸೋಮವಾರ ನಡೆಯಲಿದೆ. ಆದರೆ ಇದು ಭಾರತದಲ್ಲಿ (india) ಗೋಚರವಾಗುವುದಿಲ್ಲ.

ನಾಸಾ (NASA) ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಸೂರ್ಯಗ್ರಹಣವು ಉತ್ತರ ಅಮೆರಿಕ (north america) ಖಂಡದಾದ್ಯಂತ ಕಾಣಿಸುತ್ತದೆ. ಮೆಕ್ಸಿಕೋ (Mexico), ಯುನೈಟೆಡ್ ಸ್ಟೇಟ್ಸ್ (United States) ಮತ್ತು ಕೆನಡಾದಲ್ಲಿ (Canada) ಸ್ಥಳೀಯ ಕಾಲಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ. ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ.

ಸೂರ್ಯಗ್ರಹಣ ಎಂದರೇನು?

ಚಂದ್ರನ ನೆರಳು ಪೂರ್ತಿಯಾಗಿ ಸೂರ್ಯನ ಮೇಲೆ ಬಿದ್ದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದನ್ನು ತಡೆಯುತ್ತದೆ. ಚಂದ್ರನ ನೆರಳು ಭೂಮಿಯ ಮೇಲ್ಮೈಯಲ್ಲಿ ವೇಗವಾಗಿ ಚಲಿಸುವಾಗ ಸೂರ್ಯಗ್ರಹಣ ಗೋಚರವಾಗುತ್ತದೆ. ಸೂರ್ಯನ ಹೊರ ಪದರ ಚಂದ್ರನ ಮೇಲೆ ಸುತ್ತುವರಿದು ಸುಂದರವಾದ ಪ್ರಭಾವಲಯದಂತೆ ಹೊಳೆಯುತ್ತದೆ. ಇದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಸಂಭವಿಸುತ್ತದೆ.

ಭಾರತದಲ್ಲಿ ಗ್ರಹಣ ಗೋಚರಿಸುತ್ತಿಲ್ಲ ಯಾಕೆ?

ಈ ಬಾರಿ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲ. ಕಾಲಮಾನ ವ್ಯತ್ಯಾಸದಿಂದ ಸೂರ್ಯ ಭೂಮಿ ಸುತ್ತಿ ಭಾರತದೆಡೆಗೆ ಬರುವಷ್ಟರಲ್ಲಿ ರಾತ್ರಿಯಾಗಿರುತ್ತದೆ. ಭಾರತದಲ್ಲಿ ಸೂರ್ಯಗ್ರಹಣದ ಸಮಯವು ಇಂದು (ಏಪ್ರಿಲ್ 8) ರಾತ್ರಿ 9.12ರಿಂದ 2.20ರವರೆಗೆ ಇರುತ್ತದೆ. ಭಾರತದಲ್ಲಿ ಗ್ರಹಣ ಗೋಚರವಿಲ್ಲದ ಕಾರಣ ಯಾವುದೇ ವ್ರತ-ಸೂತಕಾದಿಗಳ ಆಚರಣೆ ಅವಶ್ಯಕವಲ್ಲ ಎಂದು ನಂಬಲಾಗಿದೆ.

ಕಳೆದ ವರ್ಷ 2023ರ ಅಕ್ಟೋಬರ್‌ನಲ್ಲಿ ಭಾರತ ಹೊರತುಪಡಿಸಿ ಜಗತ್ತಿನ ಹಲವೆಡೆ ಸೂರ್ಯಗ್ರಹಣ ಗೋಚರವಾಗಿತ್ತು. ಟೆಕ್ಸಾಸ್‌ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾದಲ್ಲಿ ಗೋಚರಿಸಿತ್ತು. ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲೂ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಿತ್ತು. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಿದೆ. 

Related post

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…
11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…

Leave a Reply

Your email address will not be published. Required fields are marked *