Dr. Bro is Back : ಮತ್ತೆ ಹಿಂದಿರುಗಿದ ಡಾ.ಬ್ರೋ…! – ವೀಡಿಯೋ ಹಾಕದೆ ಅವರು ಅಪ್ಡೇಟ್ ನೀಡಿದ್ದು ಏನ್ ಗೊತ್ತಾ..?

Dr. Bro is Back : ಮತ್ತೆ ಹಿಂದಿರುಗಿದ ಡಾ.ಬ್ರೋ…! – ವೀಡಿಯೋ ಹಾಕದೆ ಅವರು ಅಪ್ಡೇಟ್ ನೀಡಿದ್ದು ಏನ್ ಗೊತ್ತಾ..?

ನ್ಯೂಸ್ ಆ್ಯರೋ : ಯೂಟ್ಯೂಬ್ ನಲ್ಲಿ ವೀಡಿಯೋ ಮಾಡಿ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿರುವ ಡಾ. ಬ್ರೋ ಇತ್ತೀಚೆಗೆ ಕಾಣೆಯಾಗಿದ್ದರು. ಸೋಷಿಯಲ್ ಮೀಡಿಯಾ ಸಹಿತ ಎಲ್ಲೆಂದರಲ್ಲಿ ಗಗನ್ ಅಲಿಯಾಸ್ ಡಾ.ಬ್ರೋ ಅವರದ್ದೇ ಚರ್ಚೆ. ‌ಇತ್ತೀಚೆಗೆ ಅವರ ಆಪ್ತ ಮತ್ತೊಬ್ಬ ಯೂಟ್ಯೂಬರ್ ಡಾ.ಬ್ರೋ ಬಗ್ಗೆ ಅಪ್ಡೇಟ್ ಕೂಡಾ ನೀಡಿದ್ರು. ಆದರೆ ಈಗ ದಿಢೀರ್ ಡಾ.ಬ್ರೋ ಮತ್ತೆ ರಿಟರ್ನ್ ಆಗಿದ್ದಾರೆ. ಆದರೆ ವೀಡಿಯೋ ಮೂಲಕ ಅಲ್ಲ.

ಹೌದು. ಕಳೆದ ಹಲವು ದಿನಗಳಿಂದ ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಯಾವುದೇ ವಿಡಿಯೋ ಅಪ್ಲೋಡ್‌ ಮಾಡದೆ “ಕಾಣೆಯಾಗಿದ್ದ” ಡಾ. ಬ್ರೋ ಮತ್ತೆ ಸೋಷಿಯಲ್‌ ಮೀಡಿಯಾಕ್ಕೆ ಮರಳಿದ್ದಾರೆ. “ಕಮಿಂಗ್‌ ಸೂನ್‌, ನಮಸ್ಕಾರ್‌ ದೇವ್ರು” ಎಂಬ ಸಂದೇಶದ ಜತೆಗೆ ಗಗನ್‌ ಶ್ರೀನಿವಾಸ್‌ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡದ ಜನಪ್ರಿಯ ಯೂಟ್ಯೂಬರ್‌ ಡಾ. ಬ್ರೋ ಆಲಿಯಾಸ್‌ ಗಗನ್‌ ಶ್ರೀನಿವಾಸ್‌ ಇನ್‌ಸ್ಟಾಗ್ರಾಂನಲ್ಲಿ “ಕಮಿಂಗ್‌ ಸೂನ್‌” ಎಂಬ ಸಂದೇಶ ನೀಡಿದ್ದಾರೆ. ಈ ಮೂಲಕ ಸದ್ಯದಲ್ಲಿಯೇ ಹೊಸ ವಿಡಿಯೋಗಳನ್ನು ಅಪ್ಲೋಡ್‌ ಮಾಡುವ ಸೂಚನೆ ನೀಡಿದ್ದಾರೆ. ಜತೆಗೆ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ ಅವರೀಗ ಬಿಹಾರದಲ್ಲಿರುವ ಸೂಚನೆಯಿದೆ.

ಇವರು ಹಾಕಿದ ಫೋಟೋಗಳಿಗೆ ನೆಟ್ಟಿಗರ ಕಮೆಂಟ್ಸ್ ಏನ್ ಗೊತ್ತಾ..?

ನಿಮ್ಮ ಈ ಸಂದೇಶಕ್ಕಾಗಿ ಕಾಯುತ್ತಿದ್ದೇವು, ವಿಡಿಯೋ ಯಾಕೆ ಅಪ್ಲೋಡ್‌ ಮಾಡಿಲ್ಲ ಡಾ. ಬ್ರೋ, ವಿಡಿಯೋ ಯಾವಾಗ ಅಪ್ಲೋಡ್‌ ಮಾಡ್ತಿರಿ ಡಾ. ಬ್ರೋ ಎಂದು ಗಗನ್‌ ಫ್ಯಾನ್ಸ್‌ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಕೇಳುತ್ತಿದ್ದಾರೆ. ಬಾಸ್‌ ಈಸ್‌ ಬ್ಯಾಕ್‌, ಲೆಜೆಂಡ್‌ ಈಸ್‌ ಬ್ಯಾಕ್‌ ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ.

ಡಾ. ಬ್ರೋ ಹೊಸ ಫೋಟೋಗಳನ್ನು ಅಪ್ಲೋಡ್‌ ಮಾಡಿದ ಹತ್ತು ನಿಮಿಷಗಳಲ್ಲಿ 60 ಸಾವಿರಕ್ಕೂ ಹೆಚ್ಚು ಲೈಕ್‌ಗಳು, ಹಲವು ಕಾಮೆಂಟ್‌ಗಳ ಸುರಿಮಳೆಯಾಗಿದೆ. ಡಾ. ಬ್ರೋ ಮತ್ತೆ ಸೋಷಿಯಲ್‌ ಮೀಡಿಯಾಕ್ಕೆ ಮರಳಿರುವುದು ಎಲ್ಲರಿಗೂ ಖುಷಿಯಾಗಿದ್ದು, ಅವರ ಹೊಸ ವಿಡಿಯೋಗಳಿಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಸ್ವಲ್ಪ ಸಮಯ ಬ್ರೇಕ್ ಪಡೆದುಕೊಂಡಿದ್ದ ಡಾ.ಬ್ರೋ…

ಗಗನ್‌ ಶ್ರೀನಿವಾಸ್‌ ಕಳೆದ ಹಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಬ್ರೇಕ್‌ ತೆಗೆದುಕೊಂಡಿದ್ದರು. ನವೆಂಬರ್‌ 29ರಂದು ಕೊನೆಯದಾಗಿ ವಿಡಿಯೋ ಅಪ್ಲೋಡ್‌ ಮಾಡಿದ್ದರು. ಇದಾದ ಬಳಿಕ ಯಾವುದೇ ವಿಡಿಯೋ ಅಪ್ಲೋಡ್‌ ಮಾಡಿರಲಿಲ್ಲ. ಪ್ರತಿನಿತ್ಯ ಹಲವು ವಿಡಿಯೋಗಳು ಅಪ್ಲೋಡ್‌ ಆಗುತ್ತಿರುವ ಗಗನ್‌ ಶ್ರೀನಿವಾಸ್‌ ಚಾನೆಲ್‌ ಏಕಾಏಕೀ ಮೌನಕ್ಕೆ ಜಾರಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.

ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಏನಾಗಿದೆ ಡಾ. ಬ್ರೋಗೆ, ಕಾಣೆಯಾಗಿದ್ದಾರ? ಚೀನಾ ಸರಕಾರ ಬಂಧಿಸಿ ಇಟ್ಟಿದೆಯೇ ಇತ್ಯಾದಿ ಸುದ್ದಿಗಳು ಹಬ್ಬಿದವು. ಇದೇ ಸಮಯದಲ್ಲಿ ಗಗನ್‌ ಕಡೆಯಿಂದ ಯಾವುದೇ ಅಪ್‌ಡೇಟ್‌ ಇಲ್ಲದೆ ಇರುವುದರಿಂದ ಮನೆ ಮಗನೇ ಮಿಸ್‌ ಆದಂತೆ ಫ್ಯಾನ್ಸ್‌ ಫೀಲ್‌ ಮಾಡಿಕೊಂಡಿದ್ದರು.

ಅವರ ಬಗ್ಗೆ ಅಪ್ಡೇಟ್ ನೀಡಿದ ಡಾ.ಬ್ರೋ ಯೂಟ್ಯೂಬ್ ಫ್ರೆಂಡ್…

ಗ್ಲೋಬಲ್‌ ಕನ್ನಡಿಗ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ನಟ ಮಹಾಬಲ ರಾವ್‌ ಅವರು ಡಾ. ಬ್ರೋ ಕುರಿತು ಇತ್ತೀಚೆಗೆ ಅಪ್‌ಡೇಟ್‌ ನೀಡಿ “ಡಾ. ಬ್ರೋ ಕಾಣೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಕನ್ನಡದ ಜನಪ್ರಿಯ ಯೂಟ್ಯೂಬ್‌ ಚಾನೆಲ್‌ಗಳಾದ ಗ್ಲೋಬಲ್‌ ಕನ್ನಡಿಗ, ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಮತ್ತು ಡಾ. ಬ್ರೋ ಅವರು ಜತೆಯಾಗಿ ಒಂದು ದಿನ ಪ್ರವಾಸ ಹೋಗಿರುವ ವಿವರವನ್ನು ಮಹಾಬಲ ನೀಡಿದ್ದರು.

ಗ್ಲೋಬಲ್‌ ಕನ್ನಡಿಗ ನೀಡಿದ ಮಾಹಿತಿಯಿಂದ ಡಾ. ಬ್ರೋ ಕ್ಷೇಮವಾಗಿದ್ದಾರೆ ಎಂದು ತಿಳಿದು ಫ್ಯಾನ್ಸ್‌ ಖುಷಿ ಪಟ್ಟಿದ್ದರು. ಜತೆಗೆ, ಇಂತಹ ಸಮಯದಲ್ಲಿ ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ಸಾಕಷ್ಟು ಜನರು ಮನವಿ ಮಾಡಿದ್ದರು. ಇದೀಗ ಮತ್ತೆ ಕಮಿಂಗ್‌ ಸೂನ್‌ ಸಂದೇಶವನ್ನು ಹಾಕಿರುವ ಡಾ. ಬ್ರೋ ಮತ್ತೆ ವಿಡಿಯೋ ಹಂಚಿಕೊಳ್ಳುವ ಸೂಚನೆ ನೀಡಿದ್ದಾರೆ. ಸದ್ಯ ಅವರು ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್‌ ಮಾತ್ರ ನೀಡಿದ್ದು, ಯೂಟ್ಯೂಬ್‌ನಲ್ಲಿ ಈ ಸುದ್ದಿ ಪ್ರಕಟವಾಗುವ ತನಕ ಯಾವುದೇ ವಿಡಿಯೋ, ರೀಲ್ಸ್‌ ಅಪ್ಲೋಡ್‌ ಮಾಡಿಲ್ಲ.

ಇವರ ವೀಡಿಯೋಗಳಿಗಾಗಿ ಜನ ಕಾಯುತ್ತಿದ್ದಾರೆ. ಆದಷ್ಟು ಬೇಗ ಇವರ ವೀಡಿಯೋ ಅಪ್ಲೋಡ್ ಆಗಿ ವೀಕ್ಷಿಸಬೇಕೆಂಬುದೇ ಅಭಿಮಾನಿಗಳ ಅಭಿಲಾಷೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *