ರಿಷಬ್ ಪಂತ್ ಗೂ ಕೋಟಿ ಕೋಟಿ ಪಂಗನಾಮ – IPLನಲ್ಲಿ MI ತಂಡ ಪ್ರತಿನಿಧಿಸಿದ್ದ ಪ್ಲೇಯರ್ ಅರೆಸ್ಟ್….

ನ್ಯೂಸ್ ಆ್ಯರೋ : ಕ್ರಿಕೆಟ್ ಪಂದ್ಯದಲ್ಲಿ ಅನೇಕ ರೀತಿಯ ಪ್ರಕ್ರಿಯೆಗಳಿರುತ್ತದೆ. ಅದರಲ್ಲಿ ಅಸಮಾಧಾನ ತರುವ ವಿಷಯವೂ ಇರಬಹುದು. ಇತ್ತೀಚೆಗಂತೂ ಅನೇಕ ರೀತಿಯ ಸಂಗತಿಗಳು ಬೆಳಕಿಗೆ ಬರುತ್ತಲೇ ಇದೆ. ಇದೆಲ್ಲದರ ನಡುವೆ ಮಾಜಿ ಅಂಡರ್​ 19 ಆಟಗಾರ ಮತ್ತು ಐಪಿಎಲ್​ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಮೃಣಾಂಕ್​ ಸಿಂಗ್​ ಎಂಬ ಕ್ರಿಕೆಟಿಗನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

25 ವರ್ಷದ ಮಾಜಿ ಕ್ರಿಕೆಟಿಗ ತಾಜ್​ ಪ್ಯಾಲೇಸ್​ ಸೇರಿದಂತೆ ಐಷಾರಾಮಿ ಹೋಟೆಲ್​​ಗಳಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್​ ಮಾಡಲಾಗಿದೆ.

ಆತನ ಮೇಲಿರುವ ಪ್ರಕರಣವೇನು..? ರಿಷಬ್ ಪಂತ್ ಗೂ ದೋಖಾ…

ಮೃಣಾಂಕ್​ ಸಿಂಗ್ ಜುಲೈ 2022ರಲ್ಲಿ ತಾಜ್ ಪ್ಯಾಲೇಸ್​​ಗೆ 5.5 ರೂಪಾಯಿ ವಂಚಿಸಿದ್ದನು. ಟೀಂ ಇಂಡಿಯಾದ ಆಟಗಾರ ರಿಷಬ್​ ಪಂತ್​ಗೂ ಕೂಡ 2020 ಮತ್ತು 2021ರಲ್ಲಿ 1.63 ಕೋಟಿ ವಂಚಿಸಿರುವ ಪ್ರಕರಣ ಆತನ ಮೇಲಿದೆ.

ಮೃಣಾಂಕ್​ ಸಿಂಗ್ ಹರ್ಯಾಣ ಅಂಡರ್​ 19 ತಂಡ ಮತ್ತು ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸಿದ್ದನು. ಆದರೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಹೆಚ್ಚುವರಿ ಪೊಲೀಸ್​​ ಮಹಾ ನಿರ್ದೇಶಕ ಅಲೋಕ್​ ಕುಮಾರ್​ ಹೇಳಿದಂತೆ, ಮೃಣಾಂಕ್​ ಸಿಂಗ್ ಐಷಾರಾಮಿ ಹೋಟೆಲ್​ಗೆ ತೆರಳಿ ಪೋಸು ನೀಡುತ್ತಿದ್ದ ಎಂದಿದ್ದಾರೆ.

ದೆಹಲಿಯ ಚಾಣಕ್ಯಪುರಿ ಪೊಲೀಸ್​ ಠಾಣೆಯಲ್ಲಿ ಮೃಣಾಂಕ್​ ಸಿಂಗ್ ವಿರುದ್ಧ ಜುಲೈ 2022ರಲ್ಲಿ ಕೇಸ್​ ದಾಖಲಾಗಿದೆ. ತಾಜ್​ ಪ್ಯಾಲೇಸ್​ ಹೋಟೆಲ್​ನಲ್ಲಿ ಮೃಣಾಂಕ್​ ಸಿಂಗ್ ತಂಗಿದ್ದು, 5,53,362 ರೂಪಾಯಿಯಷ್ಟು ಬಿಲ್​ ಮಾಡಿದಲ್ಲದೆ, ಪಾವತಿಸದೆ ಹೊರನಡೆದಿದ್ದನು.

ಹೋಟೆಲ್​ ಸಿಬ್ಬಂದಿ ಬಿಲ್​ ಪಾವತಿಸಲು ಹೇಳಿದಾಗ ಮೃಣಾಂಕ್​ ಸಿಂಗ್ ನಾನು ಅಡಿಡಸ್​ ಕಂಪನಿಯ ಮೂಲಕ ಪ್ರತಿನಿಧಿಸುತ್ತಿದ್ದೇನೆ. ಅವರೇ ಸ್ಪಾನ್ಸರ್​ ನೀಡಿದ್ದಾರೆ. ಬಿಲ್​ ಅವರೇ ಕಟ್ಟುತ್ತಾರೆ ಎಂದು ಕಾಗೆ ಹಾರಿಸಿದ್ದನು.

ಇದಲ್ಲದೆ, ಮೃಣಾಂಕ್​ ಸಿಂಗ್ ಹೋಟೆಲ್​​​ ಸಿಬ್ಬಂದಿಗೆ 2 ಲಕ್ಷ ರೂಪಾಯಿಯಷ್ಟು ಹಣ ಪಾವತಿಸಿದ್ದೇನೆ ಎಂದು ಬ್ಯಾಂಕ್​ ಡಿಟೇಲ್ಸ್​ ತೋರಿಸಿದ್ದರು. ಆದರೆ ಹೋಟೆಲ್​ನವರು ಅದು ಕೂಡ ಪಾವತಿಸದೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಮೃಣಾಂಕ್​ ಸಿಂಗ್ ಐಜಿಐ ಏರ್​ಪೋರ್ಟ್​​ನಲ್ಲಿ ತಾನೋಬ್ಬ ಐಪಿಎಸ್​ ಅಧಿಕಾರಿ ಎಂಬ ರೀತಿಯಲ್ಲಿ ವಂಚಿಸಿದ್ದಾನೆ ಎಂದು ಕರ್ನಾಟಕದ ಎಡಿಜಿಪಿ ಅಲೋಕ್​ ಕುಮಾರ್​ ತಿಳಿಸಿದ್ದಾರೆ.