ಮಾವಿನ ಹಣ್ಣಿನ‌‌ ಅತಿಯಾದ ಸೇವನೆಯಿಂದ ಆರೋಗ್ಯ ಹಾನಿ – ಏನೆಲ್ಲಾ ಆರೋಗ್ಯ ಸಮಸ್ಯೆ ಬರುತ್ತೆ ಗೊತ್ತಾ?

ಮಾವಿನ ಹಣ್ಣಿನ‌‌ ಅತಿಯಾದ ಸೇವನೆಯಿಂದ ಆರೋಗ್ಯ ಹಾನಿ – ಏನೆಲ್ಲಾ ಆರೋಗ್ಯ ಸಮಸ್ಯೆ ಬರುತ್ತೆ ಗೊತ್ತಾ?

ನ್ಯೂಸ್ ಆ್ಯರೋ‌ : ‘ಹಣ್ಣುಗಳ ರಾಜ’ ಮಾವು ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಆಯಾ ಋತುಗಳಿಗೆ ಅನುಗುಣವಾಗಿ ದೊರೆಯುವ ಹಣ್ಣುಗಳನ್ನು ಸೇವಿಸಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಹಾಗಂತ ಅತಿಯಾಗಿ ತಿನ್ನುವುದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಮಾವಿನ ಹಣ್ಣು ಕೂಡ ಇದಕ್ಕೆ ಹೊರತಲ್ಲ. ಹಾಗಾದರೆ ಅತಿಯಾಗಿ ಮಾವು ತಿಂದರೆ ಯಾವೆಲ್ಲ ಸಮಸ್ಯೆ ಕಂಡು ಬರುತ್ತದೆ ಎನ್ನುವುದನ್ನು ನೋಡೋಣ..

ಸಕ್ಕರೆಯ ಅಂಶ ಹೆಚ್ಚಳ

ಮಧುಮೇಹ ಸಮಸ್ಯೆ ಇಲ್ಲದಿದ್ದರೂ ತುಂಬಾ ಮಾವಿನಹಣ್ಣು ತಿಂದರೆ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಸುಸ್ತು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮಧುಮೇಹ ಸಮಸ್ಯೆಯಿದ್ದರೆ ಮಾವಿನಹಣ್ಣನ್ನು ಆದಷ್ಟು ಕಡಿಮೆ ತಿನ್ನುವುದು ಉತ್ತಮ.

ಲ್ಯಾಟೆಕ್ಸ್ ಅಲರ್ಜಿ

ಕೆಲವರಿಗೆ ಲ್ಯಾಟೆಕ್ಸ್ ಅಲರ್ಜಿ ಸಮಸ್ಯೆ ಇರುತ್ತದೆ. ಅಂಥವರು ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಈ ಸಮಸ್ಯೆ ಹೆಚ್ಚಾಗುತ್ತದೆ. ಪರಿಣಾಮ ತ್ವಚೆಯಲ್ಲಿ ತುರಿಕೆ, ಗಂಟಲು ಊದುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು ಮುಂತಾದ ಸಮಸ್ಯೆ ಕಂಡು ಬರುತ್ತದೆ.

ಬೇಧಿ

ಮಾವಿನ ಹಣ್ಣು ತುಂಬಾ ತಿನ್ನುವುದರಿಂದ ಬೇಧಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಈ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಿತಿಯಲ್ಲಿ ತಿನ್ನಿ.

ಮೈ ತೂಕ ಹೆಚ್ಚಳ

ತುಂಬಾ ಮಾವಿನಹಣ್ಣು ತಿನ್ನುವುದರಿಂದ ಮೈ ತೂಕ ಹೆಚ್ಚಾಗುತ್ತದೆ. ದಿನದಲ್ಲಿ 330 ಗ್ರಾಂಕ್ಕಿಂತ ಅಧಿಕ ಮಾವಿನ ಹಣ್ಣು ಸೇವಿಸಬೇಡಿ. ಅದರಲ್ಲೂ ಕೃತಕವಾಗಿ, ಔಷಧ ಬಳಸಿ ಹಣ್ಣಾಗಿಸಿದ ಮಾವು ಬಳಸಲೇ ಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಸೇವಿಸುವ ಸಮಯ

ಮಾವಿನಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹುದು. ಆದರೆ ಆಹಾರಕ್ಕಿಂತ ಅರ್ಧ ಗಂಟೆ ಮುಂಚೆ ಅಥವಾ ಊಟವಾಗಿ ಅರ್ಧ ಅಥವಾ ಒಂದು ಗಂಟೆ ಕಳೆದ ಮೇಲೆ ತಿಂದರೆ ಉತ್ತಮ. ಇದರಿಂದ ಅದರಲ್ಲಿರುವ ಪೋಷಕಾಂಶಗಳನ್ನು ನಮ್ಮ ಶರೀರ ಹೀರಿಕೊಳ್ಳುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *