ಮಾವಿನ ಹಣ್ಣಿನ ಅತಿಯಾದ ಸೇವನೆಯಿಂದ ಆರೋಗ್ಯ ಹಾನಿ – ಏನೆಲ್ಲಾ ಆರೋಗ್ಯ ಸಮಸ್ಯೆ ಬರುತ್ತೆ ಗೊತ್ತಾ?
- ಆರೋಗ್ಯವೇ ಭಾಗ್ಯ
- May 24, 2023
- No Comment
- 347
ನ್ಯೂಸ್ ಆ್ಯರೋ : ‘ಹಣ್ಣುಗಳ ರಾಜ’ ಮಾವು ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಆಯಾ ಋತುಗಳಿಗೆ ಅನುಗುಣವಾಗಿ ದೊರೆಯುವ ಹಣ್ಣುಗಳನ್ನು ಸೇವಿಸಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಹಾಗಂತ ಅತಿಯಾಗಿ ತಿನ್ನುವುದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಮಾವಿನ ಹಣ್ಣು ಕೂಡ ಇದಕ್ಕೆ ಹೊರತಲ್ಲ. ಹಾಗಾದರೆ ಅತಿಯಾಗಿ ಮಾವು ತಿಂದರೆ ಯಾವೆಲ್ಲ ಸಮಸ್ಯೆ ಕಂಡು ಬರುತ್ತದೆ ಎನ್ನುವುದನ್ನು ನೋಡೋಣ..
ಸಕ್ಕರೆಯ ಅಂಶ ಹೆಚ್ಚಳ
ಮಧುಮೇಹ ಸಮಸ್ಯೆ ಇಲ್ಲದಿದ್ದರೂ ತುಂಬಾ ಮಾವಿನಹಣ್ಣು ತಿಂದರೆ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಸುಸ್ತು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮಧುಮೇಹ ಸಮಸ್ಯೆಯಿದ್ದರೆ ಮಾವಿನಹಣ್ಣನ್ನು ಆದಷ್ಟು ಕಡಿಮೆ ತಿನ್ನುವುದು ಉತ್ತಮ.
ಲ್ಯಾಟೆಕ್ಸ್ ಅಲರ್ಜಿ
ಕೆಲವರಿಗೆ ಲ್ಯಾಟೆಕ್ಸ್ ಅಲರ್ಜಿ ಸಮಸ್ಯೆ ಇರುತ್ತದೆ. ಅಂಥವರು ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಈ ಸಮಸ್ಯೆ ಹೆಚ್ಚಾಗುತ್ತದೆ. ಪರಿಣಾಮ ತ್ವಚೆಯಲ್ಲಿ ತುರಿಕೆ, ಗಂಟಲು ಊದುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು ಮುಂತಾದ ಸಮಸ್ಯೆ ಕಂಡು ಬರುತ್ತದೆ.
ಬೇಧಿ
ಮಾವಿನ ಹಣ್ಣು ತುಂಬಾ ತಿನ್ನುವುದರಿಂದ ಬೇಧಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಈ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಿತಿಯಲ್ಲಿ ತಿನ್ನಿ.
ಮೈ ತೂಕ ಹೆಚ್ಚಳ
ತುಂಬಾ ಮಾವಿನಹಣ್ಣು ತಿನ್ನುವುದರಿಂದ ಮೈ ತೂಕ ಹೆಚ್ಚಾಗುತ್ತದೆ. ದಿನದಲ್ಲಿ 330 ಗ್ರಾಂಕ್ಕಿಂತ ಅಧಿಕ ಮಾವಿನ ಹಣ್ಣು ಸೇವಿಸಬೇಡಿ. ಅದರಲ್ಲೂ ಕೃತಕವಾಗಿ, ಔಷಧ ಬಳಸಿ ಹಣ್ಣಾಗಿಸಿದ ಮಾವು ಬಳಸಲೇ ಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಸೇವಿಸುವ ಸಮಯ
ಮಾವಿನಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹುದು. ಆದರೆ ಆಹಾರಕ್ಕಿಂತ ಅರ್ಧ ಗಂಟೆ ಮುಂಚೆ ಅಥವಾ ಊಟವಾಗಿ ಅರ್ಧ ಅಥವಾ ಒಂದು ಗಂಟೆ ಕಳೆದ ಮೇಲೆ ತಿಂದರೆ ಉತ್ತಮ. ಇದರಿಂದ ಅದರಲ್ಲಿರುವ ಪೋಷಕಾಂಶಗಳನ್ನು ನಮ್ಮ ಶರೀರ ಹೀರಿಕೊಳ್ಳುತ್ತದೆ.