ಚೀನಾದಲ್ಲಿ ಭೂಮಿಗೆ ಇಳಿದ ನಿಗೂಢ ಬಾಹ್ಯಾಕಾಶ ನೌಕೆ – ಅನುಮಾನ ಮೂಡಿಸಿದ ಚೀನಾ ನಡೆ : ಹಲವು ರಾಷ್ಟ್ರಗಳಿಗೆ ಹೆಚ್ಚಿದ ಆತಂಕ..!!

ಚೀನಾದಲ್ಲಿ ಭೂಮಿಗೆ ಇಳಿದ ನಿಗೂಢ ಬಾಹ್ಯಾಕಾಶ ನೌಕೆ – ಅನುಮಾನ ಮೂಡಿಸಿದ ಚೀನಾ ನಡೆ : ಹಲವು ರಾಷ್ಟ್ರಗಳಿಗೆ ಹೆಚ್ಚಿದ ಆತಂಕ..!!

ನ್ಯೂಸ್ ಆ್ಯರೋ‌ : ಚೀನಾದ ಮೇಲೆ ಎಲ್ಲಾ ದೇಶಗಳು ಒಂದು ಕಣ್ಣಿಟ್ಟಿರುತ್ತವೆ. ಅದು ಸ್ವಲ್ಪ ಮಿಸುಕಾಡಿದರೂ ಜಗತ್ತು ಆತಂಕ, ಕುತೂಹಲದಿಂದ ಅದರತ್ತ ದೃಷ್ಟಿ ಬೀರುತ್ತದೆ. ಅಂತಹ ಚೀನಾದಲ್ಲಿ ನಿಗೂಢ ನೌಕೆಯೊಂದು ನೆಲವನ್ನು ಸ್ಪರ್ಶಿಸಿದ್ದು ಗಮನ ಸೆಳೆದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಚೀನಾ, ಈಗ ಬಂದಿಳಿದಿರುವ ಚೀನಾ ಸ್ಪೇಸ್ ಕ್ರಾಫ್ಟ್ ಸುಮಾರು 276 ದಿನ ಬಾಹ್ಯಾಕಾಶದಲ್ಲೇ ಸುತ್ತು ಹಾಕಿದೆ. ಭೂಮಿಗೆ ಬಂದಿಳಿದ ಇದನ್ನು ಮತ್ತೊಮ್ಮೆ ಬಳಕೆ ಮಾಡುವುದಕ್ಕೆ ಸಾಧ್ಯ ಎಂದಿದೆ. ಆದರೆ ಉಳಿದ ದೇಶಗಳು ಈ ಮಾತನ್ನು ಪೂರ್ಣ ನಂಬುತ್ತಿಲ್ಲ.

ಚೀನಾ ನೆಲಕ್ಕೆ ವಾಪಸ್ ಬಂದು ಇಳಿದಿರುವ ನಿಗೂಢ ಬಾಹ್ಯಾಕಾಶ ನೌಕೆಯನ್ನ ಯಾವಾಗ ಹಾರಿ ಬಿಟ್ಟಿದ್ದರು? ಈ ಬಾಹ್ಯಾಕಾಶ ನೌಕೆಯನ್ನ ಏಕೆ ಹಾರಿ ಬಿಡಲಾಗಿತ್ತು? ಉದ್ದೇಶ ಏನು? ಎಷ್ಟು ಎತ್ತರ ಹಾರಿತ್ತು? ಎಂಬುದರ ಬಗ್ಗೆ ಯಾವ ದೇಶದ ಬಳಿಯೂ ಮಾಹಿತಿ ಇಲ್ಲ.

ಇದಿಷ್ಟೇ ಅಲ್ಲ ಕಕ್ಷೆಯ ವಿವರಗಳೇನು? ಎಂಬುದೂ ಗೊತ್ತಿಲ್ಲ. ಇದೇ ಕಾರಣಕ್ಕೆ ಇದನ್ನ ನಿಗೂಢ ನೌಕೆ ಎಂದು ಕರೆಯಲಾಗುತ್ತಿದ್ದು, ಅನುಮಾನಿಸುವಂತಾಗಿದೆ.

ವಾಯವ್ಯ ಚೀನಾದ ಜಿಯುಕ್ವಾನ್ ಉಡಾವಣಾ ಕೇಂದ್ರಕ್ಕೆ ಯಶಸ್ವಿಯಾಗಿ ಬಂದಿಳಿದಿರುವ ಬಾಹ್ಯಾಕಾಶ ನೌಕೆ ಕಳೆದ ಆಗಸ್ಟ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿತ್ತು ಎನ್ನಲಾಗಿದೆ. ಶ್ರೀಲಂಕಾ ನೆಲದಲ್ಲಿ ರಾಡಾರ್ ಕೇಂದ್ರ ಸ್ಥಾಪಿಸಿ, ಭಾರತದ ಮೇಲೆ ಚೀನಾ ಕಣ್ಣಿಡಲು ಯೋಜನೆ ರೂಪಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಲ್ಲೇ ನಿಗೂಢ ನೌಕೆ ಕಾಣಿಸಿಕೊಂಡಿದ್ದು, ಅನುಮಾನ ಹೆಚ್ಚಿಸಿದೆ. ಜೊತೆಗೆ ಚೀನಾ ಮರುಬಳಕೆ ಮಾಡಬಲ್ಲ ಬಾಹ್ಯಾಕಾಶ ನೌಕೆ ತಯಾರಿಸುವತ್ತ ಹೆಚ್ಚು ಗಮನ ಹರಿಸಿದ್ದು, ಇದು ಅದರ ಫಲಶ್ರುತಿ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಸತ್ಯಾಸತ್ಯತೆ ಹೊರ ಬೀಳಲಿದೆ.

Related post

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…
26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

ನ್ಯೂಸ್ ಆರೋ: ಕಾಣೆಯಾದ ವ್ಯಕ್ತಿ ನೆರೆಮನೆಯಲ್ಲಿ ಬಂಧನದಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ಅಲ್ಜೀರಿಯಾದ ನ್ಯಾಯಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಹೌದು, 26 ವರ್ಷಗಳಿಂದ ನಾಪತ್ತೆಯಾಗಿದ್ದ ಅಲ್ಜೀರಿಯಾದ ವ್ಯಕ್ತಿಯೊಬ್ಬ,…
ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್‌..!

ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ…

ನ್ಯೂಸ್ ಆರೋ:  ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ವೈಯಕ್ತಿಕ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಲವ್​, ಮದುವೆ, ಬ್ರೇಕಪ್ ಅಂತ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್​, ಬಾಲಿವುಡ್‌ನ ಡ್ರಾಮಾ…

Leave a Reply

Your email address will not be published. Required fields are marked *