ರೈಲಿನಲ್ಲಿ ಆಹಾರಕ್ಕೆ ಎಂ.ಆರ್.ಪಿ.ಗಿಂತ ಹೆಚ್ಚು ಹಣ ಪಾವತಿಸ್ಬೇಡಿ – ಹೆಚ್ಚು ಹಣ ಕೇಳಿದ್ರೆ ಹೀಗೆ ಮಾಡಿ…

ರೈಲಿನಲ್ಲಿ ಆಹಾರಕ್ಕೆ ಎಂ.ಆರ್.ಪಿ.ಗಿಂತ ಹೆಚ್ಚು ಹಣ ಪಾವತಿಸ್ಬೇಡಿ – ಹೆಚ್ಚು ಹಣ ಕೇಳಿದ್ರೆ ಹೀಗೆ ಮಾಡಿ…

ನ್ಯೂಸ್ ಆ್ಯರೋ‌ : ದೂರ ಪ್ರಯಾಣ ಎಂದರೆ ಥಟ್ಟನೆ ನಮ್ಮ ಮನಸ್ಸಿಗೆ ಬರುವುದು ರೈಲು. ಆರಾಮಾದಾಯಕ, ಸುರಕ್ಷಿತ, ಕಡಿಮೆ ವೆಚ್ಚದ ಪ್ರಯಾಣ ರೈಲಿನ ಮೂಲಕ ಸಾಧ್ಯವಾಗುತ್ತದೆ. ಅದೇ ರೀತಿ ರೈಲ್ವೆಯಲ್ಲಿ ನಿಮಗೆ ಎಂ.ಆರ್.ಪಿ.ಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡಬಹುದು.

ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಇದಲ್ಲದೆ ನಿಲ್ದಾಣದಲ್ಲಿರುವ ರೈಲ್ವೇ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಬಹುದು ಹಾಗೂ ರೈಲ್ವೇ ಆ್ಯಪ್ ನಲ್ಲಿಯೂ ದೂರು ದಾಖಲಿಸಬಹುದು.

ಇದನ್ನು ಗಮನಿಸಿ

ಅಂಗಡಿಯವರು ಅಥವಾ ಆಹಾರದ ಮಾರಾಟಗಾರರ ವಿರುದ್ಧ ದೂರು ನೀಡುವ ಮೊದಲು ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸಬೇಕು. ಹೆಚ್ಚಿನ ದರದಲ್ಲಿ ಆಹಾರ ಮಾರಾಟ ಮಾಡುವ ಸ್ಟಾಲ್ ಸಂಖ್ಯೆ, ನಿರ್ವಾಹಕರ ಹೆಸರು, ನಿಲ್ದಾಣದ ಹೆಸರು, ಪ್ಲಾಟ್‌ಫಾರ್ಮ್ ಸಂಖ್ಯೆ ಮುಂತಾದ ಎಲ್ಲಾ ವಿವರಗಳನ್ನು ನೀವು ನೀಡಬೇಕು. ನೀವು ಯಾವ ಸಮಯದಲ್ಲಿ ಆಹಾರ ಖರೀದಿಸಿದ್ದೀರಿ ಎಂಬುದನ್ನು ಗಮನಿಸಿ. ದೂರು ಸಲ್ಲಿಸುವಾಗ ಈ ಮಾಹಿತಿಯು ಅಗತ್ಯವಾಗಿರುತ್ತದೆ.

ಚಲಿಸುತ್ತಿರುವ ರೈಲಿನಲ್ಲಿ ಆಹಾರ ಆರ್ಡರ್ ಮಾಡುವುದು ಹೇಗೆ?

ಮೊದಲು ರೈಲ್ ಮಿತ್ರದ ಅಧಿಕೃತ ವೆಬ್ ಸೈಟ್ www.railmitra.comಗೆ ಭೇಟಿ ನೀಡಿ. ಇದರಲ್ಲಿ ಕಂಡುಬರುವ Food in Train ಆಯ್ಕೆ ಕ್ಲಿಕ್ ಮಾಡಿ. ಬಳಿಕ ನಿಮ್ಮ 10 ಸಂಖ್ಯೆಯ ಪಿ.ಎನ್.ಆರ್. ಸಂಖ್ಯೆ, ರೈಲು ಸಂಖ್ಯೆ ನಮೂದಿಸಿ. ನಂತರ ಆಹಾರವನ್ನು ಯಾವ ನಿಲ್ದಾಣದಲ್ಲಿ ಪಡೆಯಲು ಇಚ್ಛಿಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ. ಬಳಿಕ ವಿವಿಧ ಹೊಟೇಲ್, ಮೆನು ತೆರೆ ಮೇಲೆ ಮೂಡುತ್ತದೆ. ನಿಮ್ಮಿಷ್ಟದ ಆಹಾರ ಆಯ್ಕೆ ಮಾಡಿ. ಬಳಿಕ ಕ್ಯಾಷ್ ಆನ್ ಡೆಲಿವರಿ ಆಪ್ಶನ್ ಆಯ್ಕೆ ಮಾಡಬಹುದು ಅಥವಾ ಕ್ರೆಡಿಕ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಬಹುದು.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *