ಒಮ್ಮೆ ಈ ಸ್ಕೂಟರ್ ಚಾರ್ಜ್ ಮಾಡಿದ್ರೆ ಸಾಕು 85km ಓಡುತ್ತೆ..!! – ಬೌನ್ಸ್ ತಯಾರಿಸಿದೆ ಕೈಗೆಟುಕುವ ಬೆಲೆಯ ಅತ್ಯಾಧುನಿಕ ಎಲೆಕ್ಟ್ರಿಕ್ ಸ್ಕೂಟರ್..!!

ಒಮ್ಮೆ ಈ ಸ್ಕೂಟರ್ ಚಾರ್ಜ್ ಮಾಡಿದ್ರೆ ಸಾಕು 85km ಓಡುತ್ತೆ..!! – ಬೌನ್ಸ್ ತಯಾರಿಸಿದೆ ಕೈಗೆಟುಕುವ ಬೆಲೆಯ ಅತ್ಯಾಧುನಿಕ ಎಲೆಕ್ಟ್ರಿಕ್ ಸ್ಕೂಟರ್..!!

ನ್ಯೂಸ್ ಆ್ಯರೋ : ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಜನರು ಎಲೆಕ್ಟ್ರಿಕಲ್ ವಾಹನಗಳತ್ತ ವಾಲುತ್ತಿದ್ದಾರೆ. ಅದೇ ಕಾರಣಕ್ಕೆ ದಿನಕ್ಕೊಂದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕಲ್ ಸ್ಕೂಟರ್ ಗಳು ವಾಹನೋದ್ಯಮವನ್ನು ಆಕ್ರಮಿಸಿಕೊಳ್ಳುತ್ತಿವೆ. ಇದೀಗ ಕೈಗೆಟಕುವ ಬೆಲೆಯಲ್ಲಿ ಬೌನ್ಸ್ ಅತ್ಯಾಧುನಿಕ ಶೈಲಿಯ ಎಲೆಕ್ಟ್ರಿಕಲ್ ಸ್ಕೂಟರ್ ಒಂದನ್ನ ತಯಾರಿಸಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 85km ಓಡುವ ಸಾಮರ್ಥ್ಯ ಈ ಸ್ಕೂಟರ್ ನಲ್ಲಿದೆ.

ಬೌನ್ಸ್ ಕಂಪೆನಿಯು ಬಜಾಜ್, ಓಲಾ, ಏಥರ್ ಮತ್ತು ಮತ್ತು ಟಿವಿಎಸ್ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಇನ್ಫಿಟಿ ಇ1 ಹೆಸರಿನ ಕಡಿಮೆ ಬೆಲೆಯ ಎಲೆಕ್ಟ್ರಿಕಲ್ ಸ್ಕೂಟರ್ ಒಂದನ್ನು ಪರಿಚಯಿಸಿದೆ‌.

ಈ ಸ್ಕೂಟರ್ ವಿಶೇಷತೆಗಳೇನು?

ಈ ಇನ್ಪಿನಿಟಿ ಇ1 ಸ್ಕೂಟರ್ 1.9 ಕಿಲೋವ್ಯಾಟ್ ಅವರ್ ಸಾಮರ್ಥ್ಯದ ಐಯಾನ್ ಬ್ಯಾಟರಿಯನ್ನು‌ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 85 km ಓಡುತ್ತದೆ. ಜೊತೆಗೆ‌ ಇದರಲ್ಲಿ1500 ವ್ಯಾಟ್ ಮೋಟಾರ್ ಲಭ್ಯವಿದೆ. ಇದರಿಂದ ನಾಲ್ಕು ಗಂಟೆಯಲ್ಲಿ 100% ಚಾರ್ಜ್ ಆಗುತ್ತದೆ. ಇದರಿಂದಾಗಿ ಒಂದು ಬ್ಯಾಟರಿ ಬಳಸುವಾಗಲೇ, ಇನ್ನೊಂದನ್ನು ಚಾರ್ಜ್ ಮಾಡಬಹುದು.

ಹೇಗಿದೆ ಈ ಸ್ಕೂಟರ್?

ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ಸ್ಕೂಟರ್ ಸುಂದರವಾದ ರೆಟ್ರೋ ಲುಕ್ ಹೊಂದಿದೆ. ಇದರಲ್ಲಿ ಎರಡು ಪ್ರೊಜೆಕ್ಟರ್ ಸೆಟ್ಟಿಂಗ್ ಗಳು ಲಭ್ಯವಿದೆ. ಇದನ್ನು ಹೆಚ್ಚು ಹಾಗೂ ಕಡಿಮೆ ಕಿರಣದ ಆಯ್ಕೆಗಳಲ್ಲಿ ಬಳಸಬಹುದಾಗಿದೆ‌. ಇದರೊಂದಿಗೆ ಎಲ್.ಇ.ಡಿ ಟೈಲ್ ಲೈಟ್ ಇದರಲ್ಲಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ. ಇದಿಷ್ಟೇ ಅಲ್ಲದೆ ಎಲ್ಸಿಡಿ ಡಿಸ್‌ಪ್ಲೇ, ಬ್ಲೂಟುತ್ ಕನೆಕ್ಟಿವಿಟಿ, ಜಿಪಿಎಸ್, ಡ್ರೈವರ್ ಅನ್ ಲಾಗ್ ಸಿಸ್ಟಮ್ ಕೂಡ ಇದರಲ್ಲಿ ಲಭ್ಯವಿದೆ.

ಈ ಸ್ಕೂಟರ್ ಬೆಲೆ ಎಷ್ಟು?

ಇಷ್ಟೊಂದು ವೈಶಿಷ್ಟ್ಯತೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರು ಈ ಸ್ಕೂಟರ್ ಬೆಲೆ 55,443 ರಿಂದ 88,478ರ ವರೆಗೆ ಇದ್ದು, 65 km ಗಳಷ್ಟು ವೇಗ ಒಂದು ಗಂಟೆಗೆ ನೀಡುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *