ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಡ್ರೈವ್ ಟೆಸ್ಟ್ ಕೊಡಬೇಕೆಂದಿಲ್ಲ‌ – ಆದರೆ, ಕೇಂದ್ರ ಸರ್ಕಾರದ‌ ಈ ಹೊಸ ನಿಯಮ ನಿಮಗೆ ಗೊತ್ತಿರಲೇ ಬೇಕು..!!

ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಡ್ರೈವ್ ಟೆಸ್ಟ್ ಕೊಡಬೇಕೆಂದಿಲ್ಲ‌ – ಆದರೆ, ಕೇಂದ್ರ ಸರ್ಕಾರದ‌ ಈ ಹೊಸ ನಿಯಮ ನಿಮಗೆ ಗೊತ್ತಿರಲೇ ಬೇಕು..!!

ನ್ಯೂಸ್ ಆ್ಯರೋ : ಭಾರತದಲ್ಲಿ ಡ್ರೈವಿಂಗ್ ಕಲಿಯುವುದಕ್ಕಿಂತಲೂ ತ್ರಾಸದಾಯಕ‌ ಕೆಲಸವೆಂದರೆ ಅದು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು. ಇದಕ್ಕಾಗಿ RTO ಕಚೇರಿಗೆ ಹತ್ತಾರು ಬಾರಿ ಅಲೆಯಬೇಕು, ಡ್ರೈವಿಂಗ್ ಟೆಸ್ಟ್ ನೀಡಲು ಸರತಿ ಸಾಲಿನಲ್ಲಿ‌ ಕಾಯಬೇಕು. ಆದರೆ ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ನಿಯಮದ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅತ್ಯಂತ ಸರಳ ಮತ್ತು‌ ಸುಲಭವಾಗಿದೆ. ಹಾಗಾದ್ರೆ ಏನಿದು ಹೊಸ ರೂಲ್ಸ್ ಅಂತೀರಾ? ಈ ವರದಿ ಓದಿ.

ಲೈಸೆನ್ಸ್ ಪಡೆಯಲು ಯಾವುದೇ ಡ್ರೈವಿಂಗ್ ಟೆಸ್ಟ್ ಬೇಕಾಗಿಲ್ಲ

ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ‌ ಅನುಸಾರ ಇನ್ನು‌ ಮುಂದೆ ನೀವು RTO ಗೆ ತೆರಳಿ ಯಾವುದೇ ಡ್ರೈವಿಂಗ್ ಟೆಸ್ಟ್ ಕೊಡುವ ಅಗತ್ಯವಿಲ್ಲ. ಕೇಂದ್ರ ರಸ್ತೆ ಸಾರಿಗೆ‌ ನಿಗಮ ಮತ್ತು ಹೆದ್ದಾರಿ ಸಚಿವಾಲಯ ಈ ನಿಯಮ ಜಾರಿಗೊಳಿಸಿದ್ದು ಇದರಿಂದಾಗಿ ಸರ್ಕಾರಿ ಕಚೇರಿಗೆ ಹತ್ತಾರು ಬಾರಿ ಅಲೆಯುವ ಕೆಲಸಕ್ಕೆ ಪೂರ್ಣ ವಿರಾಮ ದೊರೆಯಲಿದೆ.

ಡ್ರೈವಿಂಗ್ ಸ್ಕೂಲ್‌ಗೆ ಹೋಗಿ ತರಬೇತಿ ಪಡೆಯಬೇಕು!

ಹೌದು, ಈ ಹೊಸ ನಿಯಮದ ಪ್ರಕಾರ ನೀವು ಇನ್ನು‌ ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಕಚೇರಿಗೆ ಅಲೆಯಬೇಕಾಗಿಲ್ಲ. ಆದರೆ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಡ್ರೈವಿಂಗ್ ತರಬೇತಿ‌ ಪಡೆದು, ಅಲ್ಲಿನ ಪರೀಕ್ಷೆಯಲ್ಲಿ ಪಾಸಾದ ಪ್ರಮಾಣ ಪತ್ರ ಹೊಂದಿರಬೇಕು. ಈ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದು.

ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹೊಸ ನಿಯಮಗಳು?

  1. ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹೊಸ ನಿಯಮದ ಪ್ರಕಾರ, ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ಮೋಟಾರು ವಾಹನಗಳಿಗೆ ತರಬೇತಿ ಕೇಂದ್ರಗಳು ಕನಿಷ್ಟ ಒಂದು ಎಕರೆ ಭೂಮಿಯನ್ನು ಹೊಂದಿರುವ ಬಗ್ಗೆ ಏಜೆನ್ಸಿಯು ಖಚಿತ ಪಡಿಸಿಕೊಳ್ಳಬೇಕು. ಆದರೆ ಮಧ್ಯಮ‌ ಮತ್ತು ಬೃಹತ್ ಪ್ರಯಾಣಿಕ ಸರಕುಗಳು ವಾಹನಗಳ ಕೇಂದ್ರ ಎರಡು ಎಕರೆ ಅಗತ್ಯವಿದೆ.
  2. ತರಬೇತುದಾರರು ಕನಿಷ್ಠ 12 ತರಗತಿ ಪಾಸಾಗಿರಬೇಕು. ಜೊತೆಗೆ ಐದು ವರ್ಷಗಳ ಡ್ರೈವಿಂಗ್ ಅನುಭವ ಹಾಗೂ ಸಂಚಾರಿ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು.
  3. ಇದಕ್ಕಾಗಿ ಸಚಿವಾಲಯವು ಬೋಧನ ಕ್ರಮ ಅಳವಡಿಸಿದ್ದು, ಅದರ ಬಗ್ಗೆ ಮಾಹಿತಿ‌ ಇರಬೇಕು.
  4. ಡ್ರೈವಿಂಗ್ ಬೋಧನಾ ಕ್ರಮದಲ್ಲಿ ಥಿಯರಿ ಹಾಗೂ ಪ್ರಾಕ್ಟಿಕಲ್‌ ಎಂಬ ಎರಡು ವಿಧಾನಗಳಿದ್ದು ಇವುಗಳ ಬಗ್ಗೆ ತರಬೇತುದಾರ ತಿಳಿದಿರಬೇಕು.
  5. ಮೂಲಭೂತ ರಸ್ತೆಗಳು, ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು, ಪಾರ್ಕಿಂಗ್, ನಗರ ರಸ್ತೆಗಳು, ಹಿಮ್ಮುಖವಾಗಿ ಚಲಿಸುವುದು ಇತ್ಯಾದಿ ಥೀಯರಿ ಅಂಶದ ಜೊತೆಗೆ ರಸ್ತೆ ಅಪಘಾತಕ್ಕೆ ಕಾರಣ, ಕೋಪ ಚಾಲನೆ, ರಸ್ತೆ ಶಿಷ್ಟಾಚಾರ, ಸಂಚಾರ ಶಿಕ್ಷಣ ಇತ್ಯಾದಿಗಳ ಬಗ್ಗೆ ಮಾಹಿತಿಯಿದ್ದು ಇದನ್ನು ತಿಳಿಯಬೇಕು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *