ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? – ಆಧಾರ್ ಕಾರ್ಡ್ ಫೋಟೋ ಕೂಡಲೇ ಚೇಂಜ್ ಮಾಡಿ : ಹೇಗೆ ಗೊತ್ತಾ..!?

ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? – ಆಧಾರ್ ಕಾರ್ಡ್ ಫೋಟೋ ಕೂಡಲೇ ಚೇಂಜ್ ಮಾಡಿ : ಹೇಗೆ ಗೊತ್ತಾ..!?

ನ್ಯೂಸ್‌‌ ಆ್ಯರೋ : ಆಧಾರ್ ಕಾರ್ಡ್ ನಲ್ಲಿರುವ ಪೋಟೋವನ್ನು ನೋಡಿದಾಗ ಎಲ್ಲರೂ ತಮಾಷೆ ಮಾಡುವುದುಂಟು. ಕೆಲವೊಂದು ಬಾರಿ ನಮ್ಮ ಗುರುತೇ ಸಿಗದಷ್ಟು ಪೋಟೋ ಪ್ರಿಂಟ್ ಆಗಿರುತ್ತೆ.

ಇದೀಗ ಆಧಾರ್ ನ ಪೋಟೋವನ್ನು ಬದಲಾವಣೆ ಮಾಡುವ ಆಯ್ಕೆಯನ್ನು ಕೊಟ್ಟಿದ್ದು,‌ ಸರಳ ವಿಧಾನಗಳಲ್ಲಿ ಕೇವಲ 100 ರೂಪಾಯಿ ಹಣದಲ್ಲಿ ಈ ಬದಲಾವಣೆಯನ್ನು ಮಾಡಬಹುದಾಗಿದೆ. ಈ‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಫೋಟೋವನ್ನು ನವೀಕರಿಸಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋಗುವ ಮೊದಲು ನೀವು ನೋಂದಣಿ ಫಾರ್ಮ್ ಅನ್ನು ಆನ್ ಲೈನ್ ನಲ್ಲಿ ಡೌನ್ಲೋಡ್ ಮಾಡಬಹುದು ಮತ್ತು ಅದನ್ನು ಭರ್ತಿ ಮಾಡಬಹುದು.

ಯುಐಡಿಎಐ ವೆಬ್ ಸೈಟ್ ನಿಂದ ಆಧಾರ್ ದಾಖಲಾತಿ / ತಿದ್ದುಪಡಿ / ನವೀಕರಣ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.ಬಯೋಮೆಟ್ರಿಕ್ ವಿವರಗಳನ್ನು ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ.

ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಆಧಾರ್ ಕಾರ್ಯನಿರ್ವಾಹಕರು ಎಲ್ಲಾ ವಿವರಗಳನ್ನು ಪರಿಶೀಲಿಸಿ, ನ್ಯೂ ಪಿಕ್ಚರ್’ ಮತ್ತು ಆಧಾರ್ ಸಂಖ್ಯೆಗೆ ಹೊಸ ಚಿತ್ರವನ್ನು ಸೇರಿಸಿ. ಅಗತ್ಯವಿದ್ದರೆ ನಿಮ್ಮ ಲೈವ್ ಫೋಟೋವನ್ನು ನೀವು ನವೀಕರಿಸಬಹುದು.

ಈ ಎಲ್ಲ ಹಂತಕ್ಕೆ ನೀವು 100 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಧಾರ್ ಎಕ್ಸಿಕ್ಯೂಟಿವ್ ನಂತರ ಯುಆರ್ ಎನ್ ನೊಂದಿಗೆ ಸ್ವೀಕೃತಿ ಚೀಟಿಯನ್ನು ನಿಮಗೆ ನೀಡುತ್ತಾರೆ

ಸ್ವೀಕರಿಸಿದ ಯುಆರ್‌ಎನ್ ಮೂಲಕ ನೀವು ಯುಐಡಿಎಐ ಆಧಾರ್ ನವೀಕರಣ ಸ್ಥಿತಿಯನ್ನು ಪರಿಶೀಲಿಸಬಹುದು.

ಯುಐಡಿಎಐನ ಅಧಿಕೃತ website ಗುರುತು ಆರ್‌ಎನ್ ಸಂಖ್ಯೆಯನ್ನು ಬಳಸಿಕೊಂಡು ಆಧಾರ್ ಕಾರ್ಡ್ ಅನ್ನು ಆ‌ನ್ ಲೈನ್ ನಲ್ಲಿ ನೋಡಬಹುದು. ನಂತರ ಅದನ್ನು ಡೌನ್‌ಲೋಡ್ ಮಾಡಿ‌‌ ಬಳಸಿಕೊಳ್ಳಬಹುದಾಗಿದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *